ಮಂಗಳವಾರದ ‘ಸೈಯಾರ’ ಕಲೆಕ್ಷನ್​ಗೆ ‘ಪಠಾಣ್’ ದಾಖಲೆಯೇ ಉಡೀಸ್

ಅಹಾನ್ ಪಾಂಡೆ ಮತ್ತು ಅಂಕಿತ್ ಪಡ್ಡಾ ಅಭಿನಯದ ‘ಸೈಯಾರ’ ಸಿನಿಮಾ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಮಂಗಳವಾರದ ಗಳಿಕೆ ಸೋಮವಾರಕ್ಕಿಂತ ಹೆಚ್ಚಾಗಿದ್ದು, ಪಠಾಣ್ ಸಿನಿಮಾದ ದಾಖಲೆಯನ್ನು ಮೀರಿಸಿದೆ. ಯುವ ಜನರಿಗೆ ಚಿತ್ರ ಇಷ್ಟ ಆಗಿದೆ. ಈ ಸಿನಿಮಾ ವಾರಾಂತ್ಯಕ್ಕೆ 300 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ.

ಮಂಗಳವಾರದ ‘ಸೈಯಾರ’ ಕಲೆಕ್ಷನ್​ಗೆ ‘ಪಠಾಣ್’ ದಾಖಲೆಯೇ ಉಡೀಸ್
ಸೈಯಾರ-ಫಠಾಣ್

Updated on: Jul 23, 2025 | 7:02 AM

ಅಹಾನ್ ಪಾಂಡೆ ಹಾಗೂ ಅಂಕಿತ್ ಪಡ್ಡಾ ನಟನೆಯ ‘ಸೈಯಾರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರವನ್ನು ಜನರು ಹಾಡಿ ಹೊಗಳುತ್ತಿದ್ದಾರೆ. ಸೋಮವಾರದ ಕಲೆಕ್ಷನ್​ಗಿಂತ ಮಂಗಳವಾರದ ಕಲೆಕ್ಷನ್ ಕಡಿಮೆ ಆಗೋದನ್ನು ಕೇಳಿರುತ್ತೀರಿ. ಆದರೆ, ‘ಸೈಯಾರ’ (Saiyaara) ವಿಚಾರದಲ್ಲಿ ಅದು ಉಲ್ಟಾ ಆಗಿದೆ. ವಾರದ ದಿನವೂ ಚಿತ್ರದ ಗಳಿಕೆ ಹೆಚ್ಚುತ್ತಲೇ ಇದೆ. ಇದು ಅನೇಕರ ಅಚ್ಚರಿಗೆ ಕಾರಣ ಆಗಿದೆ.

‘ಸೈಯಾರ’ ಯೂತ್ ಓರಿಯೆಂಟೆಡ್ ಸಿನಿಮಾ. ಇದರಲ್ಲಿ ಲವ್ ಇದೆ, ಬ್ರೇಕಪ್ ಇದೆ. ಈ ಎಲ್ಲಾ ಕಾರಣಕ್ಕೆ ಹೊಸ ಜನರೇಶನ್​ಗೆ ಸಿನಿಮಾ ಸಾಕಷ್ಟು ಇಷ್ಟ ಆಗಿದೆ. ಮಂಗಳವಾರ ಸಿನಿಮಾದ ಗಳಿಕೆ ಹೆಚ್ಚಲೂ ಅವರೇ ಕಾರಣ. ಕಾಲೇಜಿಗೆ ಬಂಕ್ ಹಾಕಿ ಎಲ್ಲರೂ ಥಿಯೇಟರ್​​ನತ್ತ ಮುಖ ಮಾಡಿದ್ದರಿಂದಲೇ ಸಿನಿಮಾ ಕಲೆಕ್ಷನ್ ಏರಿಕೆ ಆಗಿದೆ. ಇದರಿಂದ ಸಹಜವಾಗಿಯೇ ಸಿನಿಮಾದ ಗಳಿಕೆಯಲ್ಲಿ ಏರಿಕೆ ಕಂಡಿದೆ.

ಮೊದಲ ಮೂರು ದಿನಕ್ಕೆ ಸಿನಿಮಾ 80+ ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಸೋಮವಾರ ಸಿನಿಮಾದ ಕಲೆಕ್ಷನ್ 24 ಕೋಟಿ ರೂಪಾಯಿ ಆಗಿದೆ. ಮಂಗಳವಾರ ಚಿತ್ರಕ್ಕೆ 25 ಕೋಟಿ ರೂಪಾಯಿ ಹರಿದು ಬಂದಿದೆ. ಈ ಗಳಿಕೆ ಅಬ್ಬರಕ್ಕೆ ‘ಪಠಾಣ್’ ದಾಖಲೆ ಕೂಡ ಉಡೀಸ್ ಆಗಿದೆ. ‘ಪಠಾಣ್’ ಸಿನಿಮಾ ಮೊದಲ ಮಂಗಳವಾರ ಹಿಂದಿಯಲ್ಲಿ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಚಿತ್ರಕ್ಕಿಂತ ಮೂರು ಕೋಟಿ ರೂಪಾಯಿ ಹೆಚ್ಚಿನ ಗಳಿಕೆ ಮಾಡಿದೆ. ಸದ್ಯ ‘ಸೈಯಾರ’ ಚಿತ್ರದ ಒಟ್ಟಾರೆ ಗಳಿಕೆ 132 ಕೋಟಿ ರೂಪಾಯಿ.

ಇದನ್ನೂ ಓದಿ
ದಳಪತಿ ವಿಜಯ್ ಕೊನೆಯ ಸಿನಿಮಾಗೆ ಪಡೆದ ಸಂಭಾವನೆ ಇಷ್ಟೊಂದಾ?
‘ಸು ಫ್ರಮ್ ಸೋ’ ಚಿತ್ರದ ಪ್ರೀಮಿಯರ್ ಶೋ ನೋಡಿ ಹೊಗಳಿದ ಪ್ರೇಕ್ಷಕರು
‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾ ಕಲೆಕ್ಷನ್; ಯಾವುದು ಪಾಸ್, ಯಾವುದು ಫೇಲ್?
ಈ ದಿನಂದು ‘ಕಣ್ಣಪ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ?

ಇದನ್ನೂ ಓದಿ: ನಾಲ್ಕು ದಿನಕ್ಕೆ 100 ಕೋಟಿ ರೂಪಾಯಿ ಮಾಡಿದ ‘ಸೈಯಾರ’; ಇಷ್ಟೊಂದ ಕ್ರೇಜ್​​ಗೆ ಕಾರಣವೇನು?

‘ಸೈಯಾರ’ ಚಿತ್ರಕ್ಕೆ ಮೋಹಿತ್ ಸೂರಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ರೊಮ್ಯಾಂಟಿಕ್ ಶೈಲಿಯಲ್ಲಿ ಇದೆ. ಈ ಚಿತ್ರದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ 148 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಚಿತ್ರದ ಬಜೆಟ್ 40 ಕೋಟಿ ರೂಪಾಯಿ. ಯಶ್ ರಾಜ್ ಫಿಲ್ಮ್ಸ್ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ. ಈ ಸಿನಿಮಾದಿಂದ ಅವರಿಗೆ ದೊಡ್ಡ ಮಟ್ಟದಲ್ಲಿ ಲಾಭ ಬಂದಿದೆ. ಮುಂದಿನ ವಾರಾಂತ್ಯದ ವೇಳೆಗೆ ಸಿನಿಮಾ 300 ಕೋಟಿ ರೂಪಾಯಿ ಕ್ಲಬ್ ಸೇರಿದರೂ ಅಚ್ಚರಿ ಏನಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.