ಕಾಜೋಲ್ (kajol) ಅವರ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ ಪ್ರಕಾರ ಕಾಜೋಲ್ ಮತ್ತು ವಿಶಾಲ್ ಜೇತ್ವಾ ಅವರ ‘ಸಲಾಮ್ ವೆಂಕಿ’(salaam venky)ಚಿತ್ರದ ಟ್ರೇಲರ್ ನವೆಂಬರ್ 14 ರಂದು ಬಿಡುಗಡೆಯಾಗಲಿದೆ. ಗುರುವಾರ ಕಾಜೋಲ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ‘ಏಕ್ ಬಡಿ ಜಿಂದಗಿ ಕಾ ಬಡಾ ಸೆಲೆಬ್ರೇಶನ್ ಪ್ರಾರಂಭವಾಗಲಿದೆ’ ಎಂದು ಬರೆಯುವ ಮೂಲಕ ಚಿತ್ರದ ಮೊದಲ ಪೋಸ್ಟರ್ನ್ನು ಹಂಚಿಕೊಂಡಿದ್ದಾರೆ.ಚಿತ್ರದ ಮೊದಲ ಪೋಸ್ಟ್ರ್ನಲ್ಲಿ ಕಾಜೋಲ್ ಕೆಂಪು ಸೀರೆ ಧರಿಸಿದ್ದು ಹಾಗೂ ವಿಶಾಲ್ ವಿಲ್ಚೇರ್ನಲ್ಲಿ ಕುಳಿತಿದ್ದಾರೆ.
ಇನ್ನು ಈ ಸಿನಿಮಾವನ್ನು ನಟಿ ಮತ್ತು ನಿರ್ಮಾಪಕಿ ರೇವತಿ ಅವರು ನಿರ್ದೇಶನ ಮಾಡಿದ್ದು, ಸೂರಜ್ ಸಿಂಗ್, ಶ್ರದ್ಧಾ ಅಗರವಾಲ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ಡಿಸೆಂಬರ್ 9 ರಂದು ತೆರೆಯ ಮೇಲೆ ಬರಲು ಸಿದ್ಧವಾಗಿದೆ. ಸಿನಿಮಾವು ಮಹಿಳೆಯ ನೈಜ ಕಥೆಯನ್ನ ಆಧಾರಿಸಿದ್ದು, ಜೀವನದಲ್ಲಿ ಅವಳು ಎದುರಿಸುವ ಸವಾಲುಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಹೊಸ ಸಿನಿಮಾ ಕೆಲಸ ಆರಂಭಿಸಿದ ಕಾಜೋಲ್; ನಿರ್ದೇಶಕಿ ರೇವತಿ ಜೊತೆ ಕೈ ಜೋಡಿಸಿದ ನಟಿ
ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ‘ಮಿತ್ರ’ ವನ್ನು ನಿರ್ದೇಶಿಸಿರುವ ರೇವತಿಯವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ‘ಸಲಾಮ್ ವೆಂಕಿ’ ಚಿತ್ರದ ಅನೇಕ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ಇನ್ನು ದುರ್ಗಾ ಪೂಜೆಯ ಸಂದರ್ಭದಲ್ಲಿ ನಟಿ ಕಾಜೋಲ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ನಿರ್ಮಾಪಕಿ ರೇವತಿಯವರೊಂದಿಗೆ ತಮ್ಮ ಸಿನಿಮಾಗೆ ಶುಭವಾಗಲಿ ಎಂದು ಆರ್ಶಿವಾದ ಪಡೆಯುತ್ತಿರುವ ವಿಡಿಯೋವನ್ನ ಹಂಚಿಕೊಂಡಿದ್ದರು.
ಕಾಜೋಲ್ ಅವರ ಈ ಹಿಂದೆ ನಟಿಸಿದ ತನ್ಹಾಜಿ ಚಿತ್ರವು ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿತು, ಇದಾದ ಬಳಿಕ ಸಲಾಮ್ ವೆಂಕಿ ಸಿನಿಮಾವೊಂದಿಗೆ ಬಂದಿದ್ದು ಗಲ್ಲಾ ಪೆಟ್ಟಗೆಯಲ್ಲಿ ಎಷ್ಟು ಗಳಿಕೆ ಮಾಡಬಹುದು ಎಂದು ಕಾದು ನೋಡಬೇಕಾಗಿದೆ.
ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ