
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರು ತಮ್ಮ ಕುಟುಂಬದೊಂದಿಗೆ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಅವರ ಮುಂಬೈನ ನಿವಾಸದಲ್ಲಿ ನಡೆದ ರಾಖಿ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದ ಸಲ್ಮಾನ್ ಅವರು ತಮ್ಮ ಕೈಗೆ ಕಟ್ಟಲಾಗಿದ್ದ ರಾಖಿಗಳನ್ನು ಪಾಪರಾಜಿಗಳ ಮುಂದೆ ಹೆಮ್ಮೆಯಿಂದ ಪ್ರದರ್ಶಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಸಲ್ಮಾನ್ ಖಾನ್ ಅವರಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.
ಅಲ್ವಿರಾ ಖಾನ್ ಅವರ ನಿವಾಸದಿಂದ ಹೊರಬರುವಾಗ ಪಾಪರಾಜಿಗಳ ಕ್ಯಾಮೆರಾಗಳಿಗೆ ಸಲ್ಮಾನ್ ಖಾನ್ ಕಾಣಿಸಿದರು. ಮೆರೂನ್ ಟೀ-ಶರ್ಟ್, ಬ್ಲೂ ಜೀನ್ಸ್ ಹಾಗೂ ಕೌಬಾಯ್ ಹ್ಯಾಟ್ ಧರಿಸಿದ್ದ ಸಲ್ಮಾನ್ ಖಾನ್ ಅವರು ಸಿಂಪಲ್ ಆಗಿ ಕಾಣಿಸಿಕೊಂಡರೂ, ಅವರ ಹಣೆಯಲ್ಲಿದ್ದ ತಿಲಕ ಹಾಗೂ ಮುಂಗೈಯಲ್ಲಿದ್ದ ಬಣ್ಣ ಬಣ್ಣದ ರಾಖಿಗಳು ಹಬ್ಬದ ಕಳೆಯನ್ನು ಹೆಚ್ಚಿಸಿದ್ದವು. ಕಾರು ಹತ್ತುವ ಮುನ್ನ ಪಾಪರಾಜಿಗಳು ರಾಖಿ ತೋರಿಸುವಂತೆ ವಿನಂತಿಸಿದಾಗ, ಸಲ್ಮಾನ್ ಖಾನ್ ಮುಗುಳ್ನಗುತ್ತಾ ತಮ್ಮ ಕೈ ಎತ್ತಿ ರಾಖಿಗಳನ್ನು ಪ್ರದರ್ಶಿಸಿದರು.
ಹಬ್ಬದ ನಿಮಿತ್ತ ಅಲ್ವಿರಾ ಅವರ ಮನೆಗೆ ಬಂದ ಹಿರಿಯ ನಟಿ ಹೆಲನ್ ಅವರನ್ನು ಸಲ್ಮಾನ್ ಖಾನ್ ಪ್ರೀತಿಯಿಂದ ಅಪ್ಪಿಕೊಂಡು ಸ್ವಾಗತಿಸಿದರು. ಸಹೋದರ ಸೊಹೈಲ್ ಖಾನ್ ಅವರ ಪುತ್ರ ನಿರ್ವಾಣ್ ಖಾನ್ ಕೂಡ ಈ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಸಲ್ಮಾನ್ ಖಾನ್ ಕುಟುಂಬವು ಪ್ರತಿವರ್ಷ ಅಲ್ವಿರಾ ಅವರ ಮನೆಯಲ್ಲಿಯೇ ರಕ್ಷಾಬಂಧನ ಹಬ್ಬವನ್ನು ಆಚರಿಸಿಕೊಂಡು ಬರುವುದು ವಾಡಿಕೆ.
ಸಲ್ಮಾನ್ ಖಾನ್ ಪೋಷಕರಾದ ಸಲೀಮ್ ಖಾನ್ ಹಾಗೂ ಸಲ್ಮಾ ಖಾನ್ ಅವರ ಸ್ವಂತ ಪುತ್ ಅಲ್ವಿರಾ ಖಾನ್. ಅವರು ಫ್ಯಾಷನ್ ಡಿಸೈನರ್ ಮತ್ತು ಸಿನಿಮಾ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ನಟ ಹಾಗೂ ನಿರ್ಮಾಪಕ ಅತುಲ್ ಅಗ್ನಿಹೋತ್ರಿ ಅವರನ್ನು ಅಲ್ವಿರಾ ವಿವಾಹವಾಗಿದ್ದಾರೆ. ಸಲ್ಮಾನ್ ಅವರ ಮತ್ತೊಬ್ಬ ಸಹೋದರಿ ಅರ್ಪಿತಾ ಖಾನ್ ಶರ್ಮಾ. ಅರ್ಪಿತಾ ಅವರನ್ನು ಸಲೀಮ್ ಖಾನ್ ದತ್ತು ತೆಗೆದುಕೊಂಡಿದ್ದು, ಸಲ್ಮಾ, ಹೆಲನ್ ಹಾಗೂ ಇಡೀ ಖಾನ್ ಕುಟುಂಬ ಅತ್ಯಂತ ಪ್ರೀತಿಯಿಂದ ಸಾಕಿ ಬೆಳೆಸಿದೆ. ಅರ್ಪಿತಾ ಅವರು ನಟ ಆಯುಷ್ ಶರ್ಮಾ ಅವರನ್ನು ಮದುವೆಯಾಗಿದ್ದಾರೆ.
ಇದನ್ನೂ ಓದಿ: ‘ಬೀಯಿಂಗ್ ಹ್ಯೂಮನ್’ ವಂಚನೆ ಪ್ರಕರಣ: ನಟ ಸಲ್ಮಾನ್ ಖಾನ್ಗೆ ಸಮನ್ಸ್ ಜಾರಿ
ಸಿನಿಮಾ ವಿಚಾರಕ್ಕೆ ಬರುವುದಾದರೆ ಸಲ್ಮಾನ್ ಖಾನ್ ನಟಿಸಿದ ‘ಮಾತೃಭೂಮಿ’ ಸಿನಿಮಾದ ಬಿಡುಗಡೆ ವಿಳಂಬ ಆಗಿದೆ. ಈ ಚಿತ್ರವನ್ನು ರಿಲೀಸ್ ಮಾಡಲು ಹಲವು ವಿಘ್ನಗಳು ಎದುರಾಗುತ್ತಿವೆ. ಹಾಗಾಗಿ, ಅದನ್ನು ಬದಿಗಿಟ್ಟು ಸಲ್ಮಾನ್ ಖಾನ್ ಅವರು ಹೊಸ ಪ್ರಾಜೆಕ್ಟ್ಗಳ ಕಡೆಗೆ ಗಮನ ಹರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.