AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿರಾರು ಕೋಟಿ ರೂಪಾಯಿ ಒಡೆಯ ಸಲ್ಮಾನ್ ಖಾನ್ ಎಲ್ಲೆಲ್ಲಿ ಆಸ್ತಿ ಹೊಂದಿದ್ದಾರೆ ಗೊತ್ತಾ?

Salman Khan Birthday: ಸಲ್ಮಾನ್ ಖಾನ್ ಹುಟ್ಟುಹಬ್ಬ ಇಂದು. ಬಾಲಿವುಡ್​ನ ಭಾಯಿಜಾನ್ ಎಂದೇ ಕರೆಸಿಕೊಳ್ಳುವ ಸಲ್ಮಾನ್ ಖಾನ್, ಬಾಲಿವುಡ್​ನ ದುಬಾರಿ ನಟರಲ್ಲಿ ಪ್ರಮುಖರು. ಸಾವಿರಾರು ಕೋಟಿ ರೂಪಾಯಿ ಹಣದ ಒಡೆಯನಾಗಿರುವ ಸಲ್ಮಾನ್ ಖಾನ್ ತಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡುತ್ತಾರೆ. ಅವರ ಜೀವನ ಶೈಲಿ ಹೇಗಿದೆ. ಅವರ ಬಳಿ ಇರುವ ಕಾರುಗಳಾವುವು? ಇಲ್ಲಿದೆ ಮಾಹಿತಿ.

ಸಾವಿರಾರು ಕೋಟಿ ರೂಪಾಯಿ ಒಡೆಯ ಸಲ್ಮಾನ್ ಖಾನ್ ಎಲ್ಲೆಲ್ಲಿ ಆಸ್ತಿ ಹೊಂದಿದ್ದಾರೆ ಗೊತ್ತಾ?
Salman Khan
 ಶ್ರೀಲಕ್ಷ್ಮೀ ಎಚ್
| Edited By: |

Updated on:Dec 27, 2024 | 8:07 AM

Share

ಸಲ್ಮಾನ್ ಖಾನ್ ಅವರಿಗೆ ಇಂದು (ಡಿಸೆಂಬರ್ 27) ಜನ್ಮದಿನ. ಕ್ರಿಸ್ಮಸ್, ಹೊಸ ವರ್ಷಗಳ ಸಂದರ್ಭದಲ್ಲೇ ಸಲ್ಮಾನ್ ಖಾನ್ಗೆ ಜನ್ಮದಿನದ ಸಂಭ್ರಮ ಬಂದಿರೋದು ವಿಶೇಷ. ಅವರಿಗೆ ಈಗ 59 ವರ್ಷ. ಅವರು ‘ಬಿವಿ ಹೋ ತೋ ಏಸಿ’ ಸಿನಿಮಾದಲ್ಲಿ ಚಿಕ್ಕ ಪಾತ್ರ ಮಾಡಿದರು. ಆದರೆ, ಅವರಿಗೆ ಯಶಸ್ಸು ತಂದು ಕೊಟ್ಟಿದ್ದು ‘ಮೆನೇ ಪ್ಯಾರ್ ಕಿಯಾ’ ಚಿತ್ರ. ಅವರು ಕಿರುತೆರೆಯಲ್ಲೂ ನಟಿಸಿದ್ದರು. ಈಗ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಅವರು ಬಾಲಿವುಡ್ನ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು.

ಸಲ್ಮಾನ್ ಖಾನ್ ಅವರಿಗೆ ವಿಶ್ವಾದ್ಯಂತ ಜನಪ್ರಿಯತೆ ಇದೆ. ಅವರ ನೆಟ್ವರ್ತ್ 2900 ಕೋಟಿ ರೂಪಾಯಿ. ಅವರು ಭಾರತೀಯ ಸಿನಿಮಾಗಳ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಾರೆ. ಸಲ್ಮಾನ್ ಖಾನ್ ಅವರು ಕಷ್ಟದಿಂದ ಮೇಲೆ ಬಂದವರು. ಅವರು ಹಲವು ಬ್ರ್ಯಾಂಡ್ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ.

ಸಲ್ಮಾನ್ ಖಾನ್ ಅವರು ‘ಬೀಯಿಂಗ್ ಹ್ಯೂಮನ್’ ಬ್ರ್ಯಾಂಡ್ನ ಹೊಂದಿದ್ದಾರೆ. 2013ರಲ್ಲಿ ಈ ಬ್ರ್ಯಾಂಡ್ನ ಅವರು ಆರಂಭಿಸಿದರು. ಇದರ ಮೂಲಕ ಚ್ಯಾರಿಟೆಬಲ್ ಟ್ರಸ್ಟ್​ಗೆ ಸಹಾಯ ಮಾಡುತ್ತಿದ್ದಾರೆ. ಇದರ ಮೂಲಕ ಅವರು ಅನೇಕರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಸಲ್ಮಾನ್ ಖಾನ್ ಅವರು ಫಿಟ್ನೆಸ್ಗೆ ಒತ್ತು ನೀಡುತ್ತಾರೆ. ಅವರು ಫಿಟ್ನೆಸ್ ಇಕ್ವಿಪ್ಮೆಂಟ್ನ ಆರಂಭ ಮಾಡಿದರು. ಭಾರಾತಾದ್ಯಂತ 300ಕ್ಕೂ ಅಧಿಕ ಬ್ರ್ಯಾಂಚ್ಗಳನ್ನು ಇದು ಆರಂಭಿಸಿದ್ದಾರೆ.

ಸಲ್ಮಾನ್ ಖಾನ್ ಅವರು ಅನೇಕ ಬ್ರ್ಯಾಂಡ್ಗಳ ಪ್ರಚಾರ ಮಾಡುತ್ತಾರೆ. ಇದಕ್ಕಾಗಿ ಅವರು ದೊಡ್ಡ ಮಟ್ಟದಲ್ಲಿ ಹಣ ಮಾಡುತ್ತಾರೆ. ಸಲ್ಮಾನ್ ಖಾನ್ ಅವರು ತಮ್ಮದೇ ಆದ ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿದ್ದು, ‘ಸಲ್ಮಾನ್ ಖಾನ್ ಫಿಲ್ಮ್ಸ್’ ಎಂದು ಹೆಸರು ಇಟ್ಟಿದ್ದಾರೆ. ಇದಕ್ಕೆ ‘ಬಜರಂಗಿ ಭಾಯಿಜಾನ್’, ‘ರೇಸ್ 3’, ‘ಟ್ಯೂಬ್ಲೈಟ್’, ‘ಭಾರತ್’ ರೀತಿಯ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:‘ಬೇಬಿ ಜಾನ್’ ಸಿನಿಮಾದ ಆ ಒಂದು ದೃಶ್ಯದ ಬಗ್ಗೆ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಮೂಡಿದೆ ಕೋಪ  

ಸಲ್ಮಾನ್ ಖಾನ್ ಅವರು ಅನೇಕ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹಲವು ಉದ್ಯಮಗಳ ಮೇಲೆ ಅವರು ಹಣ ಹಾಕಿದ್ದಾರೆ. ಸಲ್ಮಾನ್ ಖಾನ್ ಅವರು ಮುಂಬೈನ ಬಾಂದ್ರಾದಲ್ಲಿ ಗ್ಯಾಲಾಕ್ಸಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಇದರ ಬೆಲೆ 100-150 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.

ಸಲ್ಮಾನ್ ಖಾನ್ ಅವರು 150 ಎಕರೆ ಫಾರ್ಮ್ಹೌಸ್ ಹೊಂದಿದ್ದಾರೆ. ಪನ್ವೇಲ್ನಲ್ಲಿ ಫಾರ್ಮ್ಹೌಸ್ ಇದ್ದು ಇದಕ್ಕೆ ‘ಅರ್ಪಿತಾ ಫಾರ್ಮ್ಸ್’ ಎಂದು ಹೆಸರು ಇಟ್ಟಿದ್ದಾರೆ. ಮುಂಬೈ ಹೊರ ಭಾಗದಲ್ಲಿ ಇದೆ. ಇದು ಅವರ ದುಬಾರಿ ಹೂಡಿಕೆಗಳಲ್ಲಿ ಒಂದು. ಸಮಯ ಸಿಕ್ಕಾಗ ಅವರು ಇಲ್ಲಿ ತೆರಳೋಕೆ ಬಯಸುತ್ತಾರೆ.

ಸಲ್ಮಾನ್ ಖಾನ್ ಅವರು ಮುಂಬೈನ ಗೊರಾಯಿಯಲ್ಲಿ ಬೀಚ್ಸೈಡ್ ಮನೆ ಹೊಂದಿದ್ದು, ಇದರ ಬೆಲೆ 100 ಕೋಟಿ ರೂಪಾಯಿ. ಐದು ಬೆಡ್ರೂಂ ಮನೆ ಇದಾಗಿದ್ದು, ಜಿಮ್, ಥಿಯೇಟರ್, ಸ್ವಿಮ್ಮಿಂಗ್ ಪೂಲ್ ಹೊಂದಿದೆ. ವಿಶೇಷ ಎಂದರೆ ದುಬೈನಲ್ಲಿ ಬುರ್ಜ್ ಪೇಸಿಫಿಕ್ ಟವರ್ಸ್ ಹೊಂದಿದ್ದಾರೆ. ಇದರ ಮೌಲ್ಯ ರಿವೀಲ್ ಆಗಿಲ್ಲ.

ಸಲ್ಮಾನ್ ಖಾನ್ ಅವರು ರಿಯಲ್ ಎಸ್ಟೇಟ್ ಮೇಲೆ ಸಾಕಷ್ಟು ಆಸಕ್ತಿ ಹೊಂದಿದ್ದಾರೆ. ಮುಂಬೈನ ಲಿಂಕಿಂಗ್ ರೋಡ್ನಲ್ಲಿ 120 ಕೋಟಿ ರೂಪಾಯಿ ಕೊಟ್ಟು ಪ್ರಾಪರ್ಟಿ ಖರೀದಿ ಮಾಡಿದ್ದಾರೆ.

ಕಾರು ಹಾಗೂ ಬೈಕ್

ಸಲ್ಮಾನ್ ಖಾನ್ ಬಳಿ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಅವರು ಬುಲೆಟ್ ಪ್ರೂಫ್ ಕಾರಿನಲ್ಲಿ ಓಡಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅವರು ‘ಸಿಖಂದರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಟೈಗರ್ vs ಪಠಾಣ್’ ಚಿತ್ರದಲ್ಲಿ ಅವರು ನಟಿಸಬೇಕಿದೆ. ಅಟ್ಲೀ ಜೊತೆಯೂ ಅವರು ಸಿನಿಮಾ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:55 am, Fri, 27 December 24

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?