ಸಲ್ಮಾನ್ ಖಾನ್ ಅವರು ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ಅವರ ಆಸ್ತಿ ಕೋಟ್ಯಂತರ ರೂಪಾಯಿ ಇದೆ. ಅವರು ಡೇಟ್ ಮಾಡಿದ ಹುಡುಗಿಯರ ಪಟ್ಟಿ ದೊಡ್ಡದಿದೆ. ಆದರೆ, ಮದುವೆ ಆಗುವ ಬಗ್ಗೆ ಯೋಚಿಸಿಲ್ಲ. ಇದಕ್ಕೆ ಕಾರಣ ತಿಳಿದಿಲ್ಲ. ಹೀಗಿರುವಾಗಲೇ ಸಲ್ಮಾನ್ ಖಾನ್ ಬಗ್ಗೆ ಅವರ ಸಹೋದರ ಅರ್ಬಾಜ್ ಖಾನ್ ನೀಡಿದ ಹೇಳಿಕೆ ಸಖತ್ ವೈರಲ್ ಆಗಿತ್ತು.
ಸಲ್ಮಾನ್ ಖಾನ್ ಅವರು ಅರ್ಬಾಜ್ ಖಾನ್ ಜೊತೆ ಈ ಮೊದಲು ಕಾಫಿ ವಿತ್ ಕರಣ್ ಶೋಗೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಓಪನ್ ಆಗಿ ಮಾತನಾಡಿದ್ದರು. ಸಲ್ಮಾನ್ ಖಾನ್ ಮದುವೆ ಆಗಿಲ್ಲ ಅಷ್ಟೇ ಎಂಬರ್ಥದಲ್ಲಿ ಅವರ ಸಹೋದರ ಮಾತನಾಡಿದ್ದರು. ಇದರ ಜೊತೆಗೆ ಒಂದು ಅಚ್ಚರಿಯ ವಿಚಾರವನ್ನು ರಿವೀಲ್ ಮಾಡಿದ್ದರು.
ರ‍್ಯಾಪಿಡ್ ಫೈರ್ ರೌಂಡ್ ನಡೆಸಲಾಯಿತು. ಇದರಲ್ಲಿ ಅರ್ಬಾಜ್ ಖಾನ್ ಅವರು ಸಲ್ಲು ಬಗ್ಗೆ ಒಂದು ಅಪರೂಪದ ಮಾಹಿತಿ ರಿವೀಲ್ ಮಾಡಿದ್ದರು. ‘ಒಂದು ತಿಂಗಳು ಸೆ* ಇಲ್ಲದೆ ಬದುಕುವ ಚಾಲೆಂಜ್ನ ಸಲ್ಮಾನ್ ಖಾನ್ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಅರ್ಬಾಜ್ ಖಾನ್ ಹೇಳಿದ್ದರು. ಈ ವಿಚಾರ ಕೇಳಿ ಅನೇಕರಿಗೆ ಅಚ್ಚರಿ ಆಗಿತ್ತು.
ಸಲ್ಮಾನ್ ಖಾನ್ ಅವರು ಆನ್ಸ್ಕ್ರೀನ್ ಮೇಲೆ ಕಿಸ್ ಮಾಡಲ್ಲ. ಇದು ಅವರು ಹಾಕಿಕೊಂಡ ನಿಯಮ. ಈ ಮೊದಲಿನಿಂದ ಇದನ್ನು ಫಾಲೋ ಮಾಡಿಕೊಂಡು ಬರುತ್ತಿದ್ದಾರೆ, ಸಿನಿಮಾ ನೋಡಲು ಬರೋ ಫ್ಯಾಮಿಲಿ ಆಡಿಯನ್ಸ್ಗೆ ಮುಜುಗರ ಆಗಬಾರದು ಅನ್ನೋದು ಅವರ ಉದ್ದೇಶ. ಇದಕ್ಕೆ ಅವರ ಸಹೋದರ ಕೊಟ್ಟಿದ್ದ ಕೌಂಟರ್ ಭಿನ್ನವಾಗಿತ್ತು. ‘ತೆರೆಹಿಂದೆ ಸಲ್ಮಾನ್ ಖಾನ್ ಸಾಕಷ್ಟು ಕಿಸ್ ಮಾಡುತ್ತಾರೆ. ಹೀಗಾಗಿ, ತೆರೆಮೇಲೆ ಕಿಸ್ ಮಾಡೋ ಅಗತ್ಯವೇ ಅವರಿಗೆ ಬರುವುದಿಲ್ಲ’ ಎಂದು ಟಾಂಟ್ ಕೊಟ್ಟಿದ್ದರು. ಈ ಹೇಳಿಕೆ ಕೂಡ ಸಖತ್ ವೈರಲ್ ಆಗಿತ್ತು.
ಇದನ್ನೂ ಓದಿ: ಸಲ್ಮಾನ್ ಖಾನ್ನ ಭೇಟಿಯಾದ್ರಾ ಯಶ್? ವೈರಲ್ ಫೋಟೋದ ಹಿಂದಿನ ಅಸಲಿಯತ್ತಿದು..
ಸಲ್ಮಾನ್ ಖಾನ್ ಅವರು ಸದ್ಯ ‘ಸಿಕಂದರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ತಮಿಳಿನ ಎ.ಮುರುಗದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಸಲ್ಮಾನ್ ಖಾನ್ ಸಾಲು ಸಾಲು ಸೋಲು ಕಂಡಿದ್ದಾರೆ. ಈ ಚಿತ್ರದ ಮೂಲಕ ಗೆಲ್ಲೋ ಭರವಸೆಯಲ್ಲಿ ಅವರಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಈದ್ಗೆ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.