ನಟ ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಅವರಿಗೆ ಬ್ಯಾಕ್ ಟು ಬ್ಯಾಕ್ ಪ್ರಾಣ ಬೆದರಿಕೆಗಳು ಬರುತ್ತಿವೆ. ಅವರ ತಂದೆ ಸಲೀಮ್ ಖಾನ್ಗೂ ಜೀವ ಬೆದರಿಕೆ ಇದೆ. ಹೀಗಿರುವಾಗಲೇ ಸಲ್ಮಾನ್ ಖಾನ್ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ಸುಳ್ಳು ಸುದ್ದಿ ಬರೆದ ಎಎನ್ಐ ವಿರುದ್ಧ ಸಲ್ಲು ಕೇಸ್ ಹಾಕಿದ್ದಾರೆ. ಜೊತೆಗೆ ಕ್ಷಮಾಪಣೆ ಕೂಡ ಕೇಳಿ ಎಂದು ಆಗ್ರಹಿಸಿದ್ದಾರೆ. ಈ ಪ್ರಕರಣದ ಹಿನ್ನೆಲೆ ಬಗ್ಗೆ ಇಲ್ಲಿದೆ ವಿವರ.
ಸಲ್ಮಾನ್ ಖಾನ್ ಅವರ ವಿರುದ್ಧ ಎಎನ್ಐ ವರದಿ ಪ್ರಕಟ ಮಾಡಿತ್ತು. ಸಲ್ಮಾನ್ ಖಾನ್ ಅವರು ಡಿ- ಕಂಪನಿ (ದಾವೂದ್ ಕಂಪನಿ) ಜೊತೆ ಸಂಬಂಧ ಹೊಂದಿದ್ದು, ಮನೆಯ ಮೇಲೆ ಗುಂಡಿನ ದಾಳಿ ಮಾಡಿದ ಇಬ್ಬರಿಗೆ ದಾವೂದ್ ಗ್ಯಾಂಗ್ನಿಂದ ಬೆದರಿಕೆ ಇದೆ ಎನ್ನುವ ಆರೋಪ ಮಾಡಿತ್ತು.
ಇದನ್ನೂ ಓದಿ: ವಿದೇಶದಲ್ಲೂ ಸಲ್ಮಾನ್ ಖಾನ್ ಹೆಸರಲ್ಲಿ ಮೋಸ; ಖಡಕ್ ಎಚ್ಚರಿಕೆ ನೀಡಿದ ನಟ
ಸಲ್ಮಾನ್ ಖಾನ್ ಮನೆ ಮೇಲೆ ದಾಳಿ ಮಾಡಿರುವ ಪ್ರಕರಣದ ಆರೋಪಿಗಳಾದ ವಿಕ್ಕಿ ಗುಪ್ತಾ, ಸಾಗರ್ ಪಾಲ್ ಪರ ವಕೀಲ ಅಮಿತ್ ಮಿಶ್ರಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದರು. ‘ಸಂತ್ರಸ್ತ (ಸಲ್ಮಾನ್ ಖಾನ್) ಗ್ಯಾಂಗ್ಸ್ಟರ್ ಜೊತೆ ಸಂಬಂಧ ಹೊಂದಿದ್ದಾರೆ. ಆರೋಪಿಗಳು ಹತ್ಯೆ ಆಗಲಿ ಎಂದು ಸಲ್ಲು ಬಯಸುತ್ತಿದ್ದಾರೆ. ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ ಹಾಗೂ ಬಿಹಾರ ಸರ್ಕಾರದ ಬಳಿ ನಾವು ರಕ್ಷಣೆಗೆ ಮನವಿ ಮಾಡುತ್ತೇವೆ’ ಎಂದಿದ್ದರು. ಈ ವಿಡಿಯೋನ ಎಎನ್ಐ ಹಂಚಿಕೊಂಡಿತ್ತು.
‘ಅಮಿತ್ ಮಿಶ್ರಾ ಮಾಡಿದ ಆರೋಪವನ್ನು ಸಲ್ಮಾನ್ ಖಾನ್ ಅವರು ಅಲ್ಲಗಳೆಯುತ್ತಿದ್ದಾರೆ. ಅದು ಸುಳ್ಳು. ಇದು ನಿಜಕ್ಕೂ ಡ್ಯಾಮೇಜಿಂಗ್ ಆಗಿದೆ’ ಎಂದು ಸಲ್ಮಾನ್ ಖಾನ್ ಪರ ವಕೀಲರು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಎಎನ್ಐ ಹಾಗೂ ಅಮಿತ್ ಮಿಶ್ರಾ 48 ಗಂಟೆಯಲ್ಲಿ ಕ್ಷಮೆ ಕೇಳಬೇಕು ಎಂದು ಅವರು ಹೇಳಿದ್ದಾರೆ. ಅಮಿತ್ ಮಿಶ್ರಾ ಅವರಿಗೆ ಸಂಬಂಧಿಸಿದ ವಿಡಿಯೋ ಡಿಲೀಟ್ ಮಾಡುವಂತೆ ಅವರು ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.