ಸಲ್ಮಾನ್ ಖಾನ್ ಆರೋಗ್ಯದ ಬಗ್ಗೆ ಮೂಡಿದೆ ಅನುಮಾನ; ಆತಂಕ ಹೊರಹಾಕಿದ ಅಭಿಮಾನಿಗಳು

ಸಲ್ಮಾನ್ ಖಾನ್ ಅವರು ನಟನೆಯಿಂದ ಮಾತ್ರ ಗಳಿಕೆ ಮಾಡುತ್ತಿಲ್ಲ. ಅವರು ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡಿಯೂ ಹಣ ಮಾಡುತ್ತಾರೆ. ಭಾನುವಾರ (ಅಕ್ಟೋಬರ್ 1) ಅವರು ಕಾರ್ಯಕ್ರಮ ಒಂದರಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಅವರು ಸುಸ್ತು ಆದಂತೆ ಕಂಡುಬಂತು.

ಸಲ್ಮಾನ್ ಖಾನ್ ಆರೋಗ್ಯದ ಬಗ್ಗೆ ಮೂಡಿದೆ ಅನುಮಾನ; ಆತಂಕ ಹೊರಹಾಕಿದ ಅಭಿಮಾನಿಗಳು
ಸಲ್ಮಾನ್ ಖಾನ್

Updated on: Oct 02, 2023 | 10:39 AM

ಸಲ್ಮಾನ್ ಖಾನ್ (Salman Khan) ನಟನೆಯ ‘ಟೈಗರ್ 3’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ದೀಪಾವಳಿ ಪ್ರಯುಕ್ತ ಈ ಚಿತ್ರ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಹೊಸ ಪೋಸ್ಟರ್​ಗಳು ಗಮನ ಸೆಳೆಯುತ್ತಿವೆ. ಈ ಮಧ್ಯೆ ಸಲ್ಮಾನ್ ಖಾನ್ ಅವರ ಆರೋಗ್ಯ ಕೈ ಕೊಟ್ಟಿದೆಯೇ ಎನ್ನುವ ಅನುಮಾನ ಅಭಿಮಾನಿಗಳಿಗೆ ವ್ಯಕ್ತವಾಗಿದೆ. ಸದ್ಯ ವಿಡಿಯೋ ಒಂದು ವೈರಲ್ ಆಗಿದೆ.

ಸಲ್ಮಾನ್ ಖಾನ್ ಅವರು ನಟನೆಯಿಂದ ಮಾತ್ರ ಗಳಿಕೆ ಮಾಡುತ್ತಿಲ್ಲ. ಅವರು ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡಿಯೂ ಹಣ ಮಾಡುತ್ತಾರೆ. ಭಾನುವಾರ (ಅಕ್ಟೋಬರ್ 1) ಅವರು ಕಾರ್ಯಕ್ರಮ ಒಂದರಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಅವರು ಸುಸ್ತು ಆದಂತೆ ಕಂಡುಬಂತು. ಅಷ್ಟೇ ಅಲ್ಲ, ಅವರ ಆರೋಗ್ಯ ಸಾಕಷ್ಟು ಹದಗೆಟ್ಟಿದೆ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

‘ಹಮ್ಕಾ ಪೀನಿ ಹೈ..’ ಹಾಡಿಗೆ ಸಲ್ಮಾನ್ ಖಾನ್ ಅವರು ಡ್ಯಾನ್ಸ್ ಮಾಡಿದ್ದಾರೆ. ‘ಸಲ್ಮಾನ್ ಖಾನ್ ಅನ್​ಫಿಟ್ ಆಗಿ ಕಾಣುತ್ತಿದ್ದಾರೆ. ಅವರು ಸಾಕಷ್ಟು ಸುಸ್ತ್ ಆದಂತೆ ಕಾಣುತ್ತಿದೆ. ಅವರಿಗೆ ವಿಶ್ರಾಂತಿ ಬೇಕಿದೆ’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ‘ಸಲ್ಮಾನ್ ಖಾನ್ ಅವರು ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ. ಟೈಗರ್ 3 ಸಿನಿಮಾ ರಿಲೀಸ್​ ಆದ್ಮೇಲೆ ಒಂದು ಬ್ರೇಕ್ ಪಡೆಯಿರಿ’ ಎಂದು ಅನೇಕರು ಕೋರಿದ್ದಾರೆ.

ಇದನ್ನೂ ಓದಿ: ಈ ಸೂಪರ್ ಹಿಟ್ ಚಿತ್ರಗಳ ಆಫರ್​ನ ರಿಜೆಕ್ಟ್ ಮಾಡಿದ್ದರು ಸಲ್ಮಾನ್ ಖಾನ್..

ಸಲ್ಮಾನ್ ಖಾನ್ ಅವರು ನಿರಂತರವಾಗಿ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದರ ಜೊತೆಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿಯೂ ಅವರು ಭಾಗಿ ಆಗುತ್ತಿದ್ದಾರೆ. ಈ ಕಾರಣದಿಂದ ಅವರಿಗೆ ಸರಿಯಾಗಿ ವಿಶ್ರಾಂತಿ ಸಿಗುತ್ತಿಲ್ಲ ಎನ್ನಲಾಗಿದೆ. ‘ಟೈಗರ್ 3’ ಚಿತ್ರವನ್ನು ಯಶ್​ ರಾಜ್​ ಫಿಲ್ಮ್ಸ್ ಬ್ಯಾನರ್ ಮೂಲಕ ಆದಿತ್ಯ ಚೋಪ್ರಾ ಅವರು ನಿರ್ಮಾಣ ಮಾಡುತ್ತಿದ್ದಾರೆ.  ಶಾರುಖ್ ಖಾನ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ