‘ಸಿಖಂಧರ್’ ಸಿನಿಮಾ ನೋಡಿದ ಪ್ರೇಕ್ಷಕರು ನೀಡಿದ ತೀರ್ಪೇನು?

|

Updated on: Mar 30, 2025 | 12:12 PM

Salman Khan: ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿರವ ‘ಸಿಖಂಧರ್’ ಸಿನಿಮಾ ಇಂದು (ಮಾರ್ಚ್ 30) ಬಿಡುಗಡೆ ಆಗಿದೆ. ಸಿನಿಮಾದ ಮೊದಲ ಶೋ ನೋಡಿರುವ ಪ್ರೇಕ್ಷಕರು ಸಿನಿಮಾ ಬಗ್ಗೆ ಅಭಿಪ್ರಾಯಗಳನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ‘ಸಿಖಂಧರ್’ ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ ನೋಡಿ, ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟವಾಗಿದೆಯೇ?

‘ಸಿಖಂಧರ್’ ಸಿನಿಮಾ ನೋಡಿದ ಪ್ರೇಕ್ಷಕರು ನೀಡಿದ ತೀರ್ಪೇನು?
Salman Khan
Follow us on

ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಖಂಧರ್’ ಸಿನಿಮಾ ಇಂದು (ಮಾರ್ಚ್ 30) ಬಿಡುಗಡೆ ಆಗಿದೆ. ಸಿನಿಮಾ ಅನ್ನು ಎಆರ್ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಪಕ್ಕಾ ಕಮರ್ಶಿಯಲ್ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾ ಅನ್ನು ಎಆರ್ ಮುರುಗದಾಸ್ ನಿರ್ದೇಶನ ಮಾಡಿರುವ ಕಾರಣ ನಿರೀಕ್ಷೆ ತುಸು ಹೆಚ್ಚಾಗಿದೆ. ಸಿನಿಮಾ ದೇಶದಾದ್ಯಂತ ಬಿಡುಗಡೆ ಆಗಿದ್ದು, ಮೊದಲ ಶೋ ಮುಗಿದಿದ್ದು ಸಿನಿಮಾ ನೋಡಿದ ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಸಿಖಧಂರ್’ ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ…

ಸ್ಯಾಮ್ ಎಂಬುವರು ಟ್ವೀಟ್ ಮಾಡಿ, ‘ಸಿಖಂಧರ್’ ಸಿನಿಮಾ ಮಾಸ್ ಎಂಟರ್ಟೈನರ್ ಸಿನಿಮಾ ಜೊತೆಗೆ ಎಮೋಷನ್ಸ್ ಸಹ ಇದೆ. ಸಲ್ಮಾನ್ ತಮ್ಮ ಮ್ಯಾನರಿಸಂ, ಸ್ಟೈಲ್​ನಿಂದ ಮೋಡಿ ಮಾಡಿದ್ದಾರೆ. ಆಕ್ಷನ್ ದೃಶ್ಯಗಳಂತೂ ವಿಶಲ್ ಹೊಡೆಯಲು ಯೋಗ್ಯವಾಗಿವೆ. ಇದೊಂದು ಸಾಮಾಜಿಕ ವಿಷಯ ಹೊಂದಿರುವ ಕಮರ್ಶಿಯಲ್ ಸಿನಿಮಾ ಆಗಿದ್ದು, ನಿರ್ಮಾಪಕ ಸಾಜಿದ್ ನಾಡಿಯಾವಾಲಗೆ ಸಲ್ಮಾನ್​​ಗೆ ಯಾವ ರೀತಿಯ ಕತೆಯನ್ನು ಸಿನಿಮಾ ಮಾಡಬೇಕು ಎಂಬುದು ಗೊತ್ತಿದೆ ಎಂದಿದ್ದಾರೆ. ರಶ್ಮಿಕಾ, ಕಾಜಲ್ ಅಗರ್ವಾಲ್, ಶರ್ಮನ್ ಜೋಶಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಒಂದು ಸರ್ಪ್ರೈಸ್ ಸಹ ಇದೆ’ ಎಂದಿದ್ದಾರೆ.

ಸೆಲೆಬ್ರಿಟಿ ಸಿನಿಮಾ ವಿಮರ್ಶಕ ತರಣ್ ಆದರ್ಶನ್ ಟ್ವೀಟ್ ಮಾಡಿದ್ದು, ‘ಬ್ಲಾಕ್ ಬಸ್ಟರ್, ಬ್ಲಾಕ್ ಬಸ್ಟರ್, ಬ್ಲಾಕ್ ಬಸ್ಟರ್’ ಎಂದು ತೀರ್ಪು ಕೊಟ್ಟಿಬಿಟ್ಟಿದ್ದಾರೆ. ‘ಭಜರಂಗಿ ಭಾಯಿಜಾನ್’ ಸಿನಿಮಾದ ಬಳಿಕ ಸಲ್ಮಾನ್ ನಟಿಸಿರುವ ಅತ್ಯುತ್ತಮ ಸಿನಿಮಾ ಇದು. ‘ಸುಲ್ತಾನ್’, ‘ಟೈಗರ್ ಜಿಂದಾ ಹೇ’ ಸಿನಿಮಾಗಳಿಗಿಂತಲೂ ಈ ಸಿನಿಮಾ ಚೆನ್ನಾಗಿದೆ. ಸಿನಿಮಾ ನೋಡುವಾಗ ಕೆಲ ದೃಶ್ಯಗಳಲ್ಲಿ ಕಣ್ಣೀರು ಬಂತು, ಆಕ್ಷನ್ ಮತ್ತು ಸೆಂಟಿಮೆಂಟ್ ಎರಡನ್ನೂ ಅದ್ಭುತವಾಗಿ ಮಿಳಿತ ಮಾಡಲಾಗಿದೆ. ಹಲವು ಮೈನವಿರೇಳಿಸುವ ದೃಶ್ಯಗಳು ಸಿನಿಮಾದಲ್ಲಿವೆ’ ಎಂದಿದ್ದಾರೆ.

ಆದರೆ ಬಾಲಿವುಡ್ ಆಫ್ ಬಾಕ್ಸ್​ಆಫೀಸ್​ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಸಿನಿಮಾದ ಬಗ್ಗೆ ಸಂಪೂರ್ಣವಾಗಿ ನೆಗೆಟಿವ್ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ‘ಸಿಖಂಧರ್’ ಸಿನಿಮಾ ನೋಡಲಾಗದಷ್ಟು ಕೆಟ್ಟದಾಗಿದೆ. ಸಿನಿಮಾದ ಯಾವ ಅಂಶದಲ್ಲಿಯೂ ಜೀವವೇ ಇಲ್ಲ. ಒಂದು ಡಲ್ ಸಿನಿಮಾ ಇದು. ಸಲ್ಮಾನ್ ಖಾನ್ ಒಂದೇ ಎಕ್ಸ್​ಪ್ರೆಶನ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಎಆರ್ ಮುರುಗದಾಸ್, ಕತೆ ಹೇಳುವ ಶೈಲಿಯಲ್ಲಿ ಹೊಸತನ ಇಲ್ಲ. ಆಕ್ಷನ್ ದೃಶ್ಯಗಳು ಸಹ ಫ್ಲ್ಯಾಟ್ ಆಗಿವೆ. ರಶ್ಮಿಕಾ ಹಾಗೂ ಕಾಜಲ್ ಇಬ್ಬರ ಪಾತ್ರಕ್ಕೂ ಪ್ರಾಧಾನ್ಯತೆ ಇಲ್ಲ. ಹಿನ್ನೆಲೆ ಸಂಗೀತ ಕೆಟ್ಟದಾಗಿದೆ’ ಎಂದು ಬರೆದಿದ್ದಾರೆ.

ಶಾಹಿದ್ ದರ್ಮಾನಿ ಎಂಬುವರು ಲಂಡನ್​ನಲ್ಲಿ ‘ಸೀಖಂಧರ್’ ಸಿನಿಮಾ ವೀಕ್ಷಿಸಿದ್ದು, ಲಂಡನ್​ನಲ್ಲಿ ಪ್ರೇಕ್ಷಕರು ಸ್ಕ್ರೀನ್ ಮುಂದೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ‘ಸಿಖಂಧರ್’ ಸಿನಿಮಾ ಅದ್ಭುತವಾಗಿದೆ. ಒಂದೊಳ್ಳೆ ಕಮರ್ಶಿಯಲ್ ಸಿನಿಮಾ, ಸಂಗೀತ, ಆಕ್ಷನ್, ಎಮೋಷನ್ ಎಲ್ಲವೂ ಹದವಾಗಿ ಬೆರೆತಿವೆ. ಒಳ್ಳೆಯ ಎಂಟರ್ಟೈನರ್ ಎಂದಿದ್ದಾರೆ.

ಅಖಿಲೇಶ್ ಕುಮಾರ್ ಎಂಬುವರು ಟ್ವೀಟ್ ಮಾಡಿ ಸಲ್ಮಾನ್ ಅವರ ಕಳೆದ ಕೆಲವು ಸಿನಿಮಾಗಳಿಗೆ ಹೋಲಿಸಿದರೆ ಸೂಪರ್ ಆಗಿದೆ. ಸಿನಿಮಾದಲ್ಲಿ ಸಲ್ಮಾನ್​ರ ಎಂಟ್ರಿ ಸೀನ್ ಅತ್ಯದ್ಭುತವಾಗಿದೆ. ಆಕ್ಷನ್, ಸೆಂಟಿಮೆಂಟ್ ಮತ್ತು ಹಾಡುಗಳು ಚೆನ್ನಾಗಿವೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:09 pm, Sun, 30 March 25