
ನಟ ಸಲ್ಮಾನ್ ಖಾನ್ (Salman Khan) ಅವರು ಬಿಗ್ ಬಾಸ್ ಹಿಂದಿ ಸೀಸನ್ 19ರ ಶೋ ನಡೆಸಿಕೊಡುತ್ತಿದ್ದರೆ. ಅವರು ಈ ಬಾರಿ ವೀಕೆಂಡ್ ಕಾ ವಾರ್ ನಡೆಸಿಕೊಟ್ಟಿದ್ದಾರೆ. ಈ ವೇಳೆ ಅವರು ಸ್ಟ್ಯಾಂಡಪ್ ಕಾಮಿಡಿಯನ್ ಪ್ರಣೀತ್ ಮೋರೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ‘ನನ್ನ ಗೇಲಿ ಮಾಡುವುದರಿಂದ ನಿಮಗೆ ಊಟ ಸಿಗುತ್ತಿದೆ ಎಂದರೆ ಖುಷಿ ಪಡ್ತೀನಿ’ ಎಂದು ಸಲ್ಲು ನೇರವಾಗಿ ಹೇಳಿದರು. ಸಲ್ಲು ಯಾವಾಗಲೂ ಕೋಪಗೊಳ್ಳುತ್ತಿದ್ದರು. ಆದರೆ, ಈ ಬಾರಿ ಅವರು ಸೈಲೆಂಟ್ ಆಗಿ ಮಾತನಾಡಿದ್ದಾರೆ.
ಪ್ರಣೀತ್ ಮೋರೆ ಒಮ್ಮೆ ಸ್ಟ್ಯಾಂಡ್-ಅಪ್ ಮಾಡುವಾಗ ಸಲ್ಮಾನ್ ಖಾನ್ ಅವರನ್ನು ಸಾಕಷ್ಟು ಗೇಲಿ ಮಾಡಿದ್ದರು. ಅದೇ ವಿಷಯ ಈಗ ಅವರಿಗೆ ತುಂಬಾ ನಷ್ಟ ತಂದಿದೆ. ‘ಪ್ರಣಿತ್ ನೀವು ಓರ್ವ ಸ್ಟ್ಯಾಂಡ್-ಅಪ್ ಕಾಮಿಡಿಯನ್. ನೀವು ನನ್ನ ಬಗ್ಗೆ ಏನು ಹೇಳಿದ್ದೀರಿ ಎಂದು ನನಗೆ ಗೊತ್ತಿದೆ. ಆದರೆ, ಅದು ಸರಿಯಲ್ಲ. ನೀವು ನನ್ನ ಮೇಲೆ ಮಾಡಿದ ಹಾಸ್ಯಗಳು ಸರಿಯಲ್ಲ. ನೀವು ನನ್ನ ಸ್ಥಾನದಲ್ಲಿದ್ದರೆ ಮತ್ತು ನಾನು ನಿಮ್ಮ ಸ್ಥಾನದಲ್ಲಿದ್ದರೆ, ನೀವು ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ’ ಎಂದು ಕೇಳಿದ್ದಾರೆ ಸಲ್ಲು.
‘ಆದರೆ ನೀವು ನನ್ನ ಹೆಸರನ್ನು ಬಳಸಿಕೊಂಡು ಜನರನ್ನು ನಗಿಸಲು ಬಯಸಿದ್ದೀರಿ. ನೀವು ಅಷ್ಟು ಕೆಳಮಟ್ಟಕ್ಕೆ ಇಳಿಯಬಾರದು. ಪಂಚ್ ಲೈನ್ ಕೊಡಬೇಕಿತ್ತು ಕೊಟ್ಟಿದ್ದೀರಿ. ನನ್ನ ಹೆಸರನ್ನು ಹೇಗೆಲ್ಲ ಬಳಸಬೇಕೋ ಹಾಗೆ ಬಳಸಿಕೊಳ್ಳುವುದರಿಂದ ನಿಮ್ಮ ದಿನ ನಿತ್ಯದ ಊಟ ಆಗುತ್ತಿದೆ ಎಂದರೆ ನಾನು ಖುಷಿಪಡುತ್ತೇನೆ. ಏನು ಹೇಳುಬೇಕೋ ಅನಿಸುತ್ತದೆಯೋ ಹೇಳಿ. ಅದರಿಂದ ನಿಮಗೆ ಸಹಾಯ ಆಗುತ್ತಿದೆ ಎಂದರೆ ನನಗೆ ಖುಷಿ’ ಎಂದರು.
ಇದನ್ನೂ ಓದಿ: ‘ಕಡಿಮೆ ಬೆಲೆ ಎಂದು ಮುಸ್ಲಿಮರು ಗೋಮಾಂಸ ಸೇವಿಸುತ್ತಾರೆ, ನಾನು ಅದನ್ನು ತಿಂದೇ ಇಲ್ಲ’
ಸಲ್ಮಾನ್ ಅವರ ಈ ಮಾತುಗಳನ್ನು ಕೇಳಿ ಪ್ರಣಿತ್ ಮೋರ್ ಸಂಪೂರ್ಣವಾಗಿ ಮೌನವಾಗುತ್ತಾರೆ. ‘ಬಿಗ್ ಬಾಸ್’ ಮನೆಯಲ್ಲಿ ಹಾಜರಿದ್ದ ಇತರ ಸ್ಪರ್ಧಿಗಳು ಸಹ ಗಪ್ಚುಪ್ ಆದರು. ‘ಬಿಗ್ ಬಾಸ್ 19′ ಆಗಸ್ಟ್ 24 ರಂದು ಪ್ರಾರಂಭವಾಯಿತು. ಈ ಕಾರ್ಯಕ್ರಮದ ಮೊದಲ ವೀಕೆಂಡ್ ಕಾ ವಾರ್ ಇದಾಗಿತ್ತು. ಈ ಶೋ ಕಲರ್ಸ್ ಟಿವಿಯಲ್ಲಿ ರಾತ್ರಿ 10:30 ಕ್ಕೆ ಮತ್ತು ಒಟಿಟಿ ಪ್ಲಾಟ್‌ಫಾರ್ಮ್ ಜಿಯೋ ಹಾಟ್‌ಸ್ಟಾರ್‌ನಲ್ಲಿ ರಾತ್ರಿ 9 ಗಂಟೆಗೆ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:43 am, Mon, 1 September 25