ಬಾಕ್ಸ್ ಆಫೀಸ್ನಲ್ಲಿ ‘ಟೈಗರ್ 3’ ಸಿನಿಮಾ (Tiger 3 Movie) ಒಳ್ಳೆಯ ಗಳಿಕೆ ಮಾಡಿದೆ. ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ (Katrina Kaif) ನಟನೆಯ ಈ ಚಿತ್ರದ ಬುಧವಾರದ (ನವೆಂಬರ್ 15) ಗಳಿಕೆಯ ಲೆಕ್ಕ ಸಿಕ್ಕಿದ್ದು, ಕೊಂಚ ಇಳಿಕೆ ಕಂಡಿದೆ. ಬುಧವಾರ ಈ ಸಿನಿಮಾ 20 ಕೋಟಿ ರೂಪಾಯಿಗೆ ತೃಪ್ತಿಪಟ್ಟುಕೊಂಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 160 ಕೋಟಿ ರೂಪಾಯಿ ದಾಟಿದೆ. ಹಲವು ವರ್ಷಗಳಿಂದ ಸತತ ಸೋಲು ಕಾಣುತ್ತಿದ್ದ ಸಲ್ಮಾನ್ ಖಾನ್ (Salman Khan) ಅವರು ‘ಟೈಗರ್ 3’ ಚಿತ್ರದಿಂದ ದೊಡ್ಡ ಗೆಲುವು ಕಂಡು ಬೀಗಿದ್ದಾರೆ.
ಸಲ್ಮಾನ್ ಖಾನ್ ನಟನೆಯ ಸಾಲು ಸಾಲು ಸಿನಿಮಾಗಳು ಸೋಲು ಕಂಡಿದ್ದವು. ಇದು ಅವರ ಚಿಂತೆಗೆ ಕಾರಣ ಆಗಿತ್ತು. ಹಿಂದಿ ಹಾಗೂ ದಕ್ಷಿಣ ಭಾರತದ ಸಿನಿಮಾಗಳು 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತಿದ್ದರೆ ಸಲ್ಮಾನ್ ಖಾನ್ ನಟನೆಯ ಸಿನಿಮಾಗಳು 100 ಕೋಟಿ ರೂಪಾಯಿ ಮಾಡಲು ಒದ್ದಾಡುತ್ತಿದ್ದವು. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಈಗ ‘ಟೈಗರ್ 3’ ಸಿನಿಮಾದಿಂದ ಅವರ ವೃತ್ತಿಜೀವನದ ಮೈಲೇಜ್ ಹೆಚ್ಚಿದೆ.
ಇದನ್ನೂ ಓದಿ: Salman Khan: ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಿದವರಿಗೆ ಸಲ್ಮಾನ್ ಖಾನ್ ಹೇಳಿದ ಬುದ್ಧಿಮಾತು ಏನು?
ಸಾಮಾನ್ಯವಾಗಿ ಸಿನಿಮಾಗಳು ಗುರುವಾರ ಅಥವಾ ಶುಕ್ರವಾರ ರಿಲೀಸ್ ಆಗೋದು ವಾಡಿಕೆ. ಆದರೆ, ಯಶ್ ರಾಜ್ ಫಿಲ್ಮ್ಸ್ ಬೇರೆಯದೇ ಲೆಕ್ಕಾಚಾರ ಹಾಕಿತ್ತು. ಭಾನುವಾರ (ನವೆಂಬರ್ 12) ‘ಟೈಗರ್ 3’ ಸಿನಿಮಾ ರಿಲೀಸ್ ಮಾಡಿತು. ದೀಪಾವಳಿ ಪ್ರಯುಕ್ತ ಸಾಲು ಸಾಲು ರಜೆ ಇರುವುದು ಸಿನಿಮಾಗೆ ಸಹಕಾರಿ ಆಗಲಿದೆ ಅನ್ನೋದು ಲೆಕ್ಕಾಚಾರ ಆಗಿತ್ತು. ಈ ಲೆಕ್ಕಾಚಾರ ಕೆಲಸ ಮಾಡಿದೆ. ಮೊದಲ ದಿನ ಈ ಚಿತ್ರ 44 ಕೋಟಿ ರೂಪಾಯಿ, ಸೋಮವಾರ 59 ಕೋಟಿ ರೂಪಾಯಿ, ಮಂಗಳವಾರ 43.5 ಕೋಟಿ ರೂಪಾಯಿ ಹಾಗೂ ಬುಧವಾರ 20 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ದೀಪಾವಳಿ ಪ್ರಯುಕ್ತ ಸೋಮವಾರ ಹಾಗೂ ಮಂಗಳವಾರ ರಜೆ ಇತ್ತು. ಈ ಕಾರಣದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್ಗೆ ಆಗಮಿಸಿದ್ದರು. ಆದರೆ ಬುಧವಾರ (ನವೆಂಬರ್ 15) ಯಾವುದೇ ರಜೆ ಇರಲಿಲ್ಲ. ಈ ಕಾರಣಕ್ಕೆ ಜನರು ಚಿತ್ರಮಂದಿರಕ್ಕೆ ಬರಲಿಲ್ಲ. ಹೀಗಾಗಿ ಗಳಿಕೆ ಕಡಿಮೆ ಆಗಿದೆ.
ಇದನ್ನೂ ಓದಿ: Tiger 3: ಸಲ್ಮಾನ್ ಖಾನ್ ಮೇಲಿನ ಭಯಕ್ಕೆ ಕದ್ದುಮುಚ್ಚಿ ‘ಟೈಗರ್ 3’ ನೋಡಿದ ಅರ್ಜುನ್ ಕಪೂರ್?
ಸಲ್ಮಾನ್ ಖಾನ್, ಕತ್ರಿನಾ ಕೈಫ್, ಇಮ್ರಾನ್ ಹಷ್ಮಿ ನಟನೆಯ ‘ಟೈಗರ್ 3’ ಚಿತ್ರಕ್ಕೆ ಮನೀಷ್ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ ಅಡಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇದೆ. ಈ ಮೊದಲು ರಿಲೀಸ್ ಆದ ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’ ಚಿತ್ರದ ಮುಂದಿವರಿದ ಭಾಗ ಇದು. ಈ ಸಿನಿಮಾದಲ್ಲಿ ಶಾರುಖ್ ಖಾನ್ ಹಾಗೂ ಹೃತಿಕ್ ರೋಷನ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಕಾರಣದಿಂದಲೂ ಸಿನಿಮಾದ ಮೈಲೇಜ್ ಹೆಚ್ಚಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.