2023ರಲ್ಲಿ ಸಲ್ಮಾನ್ ಖಾನ್ (Salman Khan) ನಟನೆಯ ಎರಡು ಸಿನಿಮಾಗಳು ರಿಲೀಸ್ ಆದವು. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಸೋತರೆ, ‘ಟೈಗರ್ 3’ ಚಿತ್ರ ಸಾಧಾರಣ ಗೆಲುವು ಕಂಡಿತು. ಈಗ ಸಲ್ಮಾನ್ ಖಾನ್ ಹೊಸ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ‘ದಿ ಬುಲ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾಗಾಗಿ ಅವರು ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸಲ್ಲು ಜಿಮ್ನಲ್ಲಿ ನಿತ್ಯ ಮೂರುವರೆ ಗಂಟೆ ವರ್ಕೌಟ್ ಮಾಡುತ್ತಿದ್ದಾರೆ.
ಸಲ್ಮಾನ್ ಖಾನ್ ಅವರು ಈ ಬಾರಿ ಕರಣ್ ಜೋಹರ್ ಒಡೆತನದ ‘ಧರ್ಮ ಪ್ರೊಡಕ್ಷನ್’ ಜೊತೆ ಕೈ ಜೋಡಿಸಿದ್ದಾರೆ. 1988ರಲ್ಲಿ ಮಾಲ್ಡೀವ್ಸ್ನಲ್ಲಿ ಭಾರತದ ಶಸಸ್ತ್ರ ಪಡೆ ಆಪರೇಷನ್ ನಡೆಸಿತ್ತು. ಬ್ರಿಗೇಡಿಯರ್ ಫಾರುಕ್ ಪುಲ್ಸಾರಾ ಅವರು ಈ ಆಪರೇಷನ್ನ ನೇತೃತ್ವ ವಹಿಸಿದ್ದರು. ಫಾರುಕ್ ಪಾತ್ರದಲ್ಲಿ ಸಲ್ಲು ನಟಿಸುತ್ತಿದ್ದಾರೆ. ಕಳೆದ ಡಿಸೆಂಬರ್ 29ರಂದು ‘ದಿ ಬುಲ್’ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ಫೆಬ್ರವರಿಯಲ್ಲಿ ಶೂಟಿಂಗ್ ಶುರವಾಗಲಿದೆ.
ಸಲ್ಮಾನ್ ಖಾನ್ ಅವರು ಬಾಡಿ ಬಿಲ್ಡ್ ಮಾಡಿಕೊಳ್ಳಲು ನಿತ್ಯ ಮೂರುವರೆಗೆ ಗಂಟೆ ಜಿಮ್ ಮಾಡುತ್ತಿದ್ದಾರೆ. ಅವರು ಆಹಾರ ಕ್ರಮದಲ್ಲೂ ಬದಲಾವಣೆ ಮಾಡಿಕೊಂಡಿದ್ದಾರೆ. ಒಂದು ತಿಂಗಳುಗಳ ಕಾಲ ಸಲ್ಲು ವರ್ಕೌಟ್ ಬಗ್ಗೆ ಹೆಚ್ಚು ಒತ್ತು ನೀಡಲಿದ್ದಾರೆ. ಅವರ ಟ್ರಾನ್ಸ್ಫಾರ್ಮೇಷನ್ ನೋಡಲು ಫ್ಯಾನ್ಸ್ ಕಾದಿದ್ದಾರೆ. ಇದಲ್ಲದೆ, ‘ಬಿಗ್ ಬಾಸ್ ಹಿಂದಿ ಸೀಸನ್ 17’ ನಡೆಸಿಕೊಡುತ್ತಿದ್ದಾರೆ. ಈ ತಿಂಗಳಾಂತ್ಯಕ್ಕೆ ಫಿನಾಲೆ ನಡೆಯಲಿದೆ.
As per the buzz, #SalmanKhan is going through a rigorous training of 3.5 hrs daily to prepare for his role in the upcoming film #TheBull
The superstar is playing the role of Brigadier Farukh Bulsara, who led Operation Cactus in 1988 in the Maldives!
Are you excited?… pic.twitter.com/sBJBvqJjQt
— Siddharth Kannan (@sidkannan) January 3, 2024
ಇದನ್ನೂ ಓದಿ: ನಟ ಸಲ್ಮಾನ್ ಖಾನ್ ಅವರು ಇನ್ನೂ ಮದುವೆ ಆಗದಿರಲು ಕಾರಣವೇನು?
ವಿಷ್ಣು ವರ್ಧನ್ ಅವರು ‘ದಿ ಬುಲ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಉದ್ಯಮಿ ಅಬ್ದುಲ್ ಲುಥುಪಿ ಹಾಗೂ ಪಿಪಲ್ಸ್ ಲಿಬರೇಷನ್ ಆರ್ಗನೈಸೇಷನ್ ಆಫ್ ತಮಿಳ್ ಈಳಂ ಅವರು ಥೈಲೆಂಡ್ನ ಕಬ್ಜ ಮಾಡಿದ್ದರು. ನಂತರ ಭಾರತದ ಸಹಾಯದಿಂದ ಮತ್ತೆ ಸರ್ಕಾರ ಮರುಸ್ಥಾಪನೆ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ