ಕೋಲ್ಕತ್ತ ಇಡನ್ ಗಾರ್ಡನ್‌ನಲ್ಲಿ ಮಾರ್ಚ್ 22ರಂದು ಐಪಿಎಲ್ 2025ರ ಉದ್ಘಾಟನಾ ಸಮಾರಂಭ ನಡೆಯಲಿದೆ. ಅದ್ದೂರಿಯಾಗಿ ಈ ಬಾರಿಯ ಐಪಿಎಲ್ ಆಯೋಜಿಸಲು ಸಿದ್ಧತೆ ನಡೆದಿದೆ. ಈ ಬಾರಿಯ ಐಪಿಎಲ್ ಉದ್ಘಾಟನಾ ಸಮಾರಂಭ ಹಲವು ಸ್ಟಾರ್ಗಳ ಸಮಾಗಮಕ್ಕೆ ಸಾಕ್ಷಿ ಆಗಲಿದೆ. ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ, ಸಲ್ಮಾನ್ ಖಾನ್, ವಿಕ್ಕಿ ಕೌಶಲ್, ಶ್ರದ್ಧಾ ಕಪೂರ್, ಸಂಜಯ್ ದತ್ (Sanjay Dutt) ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ. ವೇದಿಕೆ ಮೇಲೆ ಅಮೆರಿಕದ ಪಾಪ್ ಬ್ಯಾಂಡ್ ಒನ್ ರಿಪಬ್ಲಿಕ್ ಪರ್ಫಾರ್ಮೆನ್ಸ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಐಪಿಎಲ್ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಆರ್ಸಿಬಿ ಮುಖಾಮುಖಿ ಆಗಲಿವೆ. ಕೋಲ್ಕತ್ತ ತಂಡದ ಮಾಲೀಕ ಶಾರುಖ್ ಖಾನ್ ಅವರು ಇದರಲ್ಲಿ ಭಾಗಿ ಆಗೋದು ಖಚಿತವಾಗಿದೆ. ಸಲ್ಮಾನ್ ಖಾನ್ ಅವರು ತಮ್ಮ ನಟನೆಯ ‘ಸಿಕಂದರ್’ ಚಿತ್ರವನ್ನು ಪ್ರಚಾರ ಮಾಡುವ ಸಾಧ್ಯತೆ ಇದೆ. ಹೀಗಾಗಿ, ಐಪಿಎಲ್ ವೇದಿಕೆಯ ರಂಗು ಮತ್ತಷ್ಟು ಹೆಚ್ಚಲಿದೆ.
ಇನ್ನು, ಅರಿಜಿತ್ ಸಿಂಗ್, ಶ್ರೇಯಾ ಘೋಶಾಲ್, ಕರಣ್ ಔಜ್ಲಾ, ದಿಶಾ ಪಟಾಣಿ, ಶ್ರದ್ಧಾ ಕಪೂರ್, ವರುಣ್ ಧವನ್ ಪರ್ಫಾರ್ಮೆನ್ಸ್ ಮಾಡೋ ಸಾಧ್ಯತೆ ಇದೆ. ‘ಟೆಲ್ ಮಿ’ ಸಾಂಗ್ಗಾಗಿ ಕರಣ್ ಔಜ್ಲಾ ಹಾಗೂ ದಿಶಾಪಟಾಣಿ ಅವರು ಒನ್ ರಿಪಬ್ಲಿಕ್ ಬ್ಯಾಂಡ್ ಜೊತೆ ಕೊಲ್ಯಾಬರೇಟ್ ಆಗಿದ್ದರು. ಅವರು ಪರ್ಫಾರ್ಮ್ ಮಾಡಲಿದ್ದಾರೆ.
ಇಷ್ಟಕ್ಕೆ ನಿಂತಿಲ್ಲ. ಕತ್ರಿನಾ ಕೈಫ್, ಅನನ್ಯಾ ಪಾಂಡೆ, ಮಾಧುರಿ ದೀಕ್ಷಿತ್, ಜಾನ್ವಿ ಕಪೂರ್, ಕರೀನಾ ಕಪೂರ್, ಪೂಜಾ ಹೆಗ್ಡೆ, ಆಯುಷ್ಮಾನ್ ಖುರಾನಾ, ಸಾರಾ ಅಲಿ ಖಾನ್ ಸೇರಿದಂತೆ ಬಾಲಿವುಡ್ನ ಅನೇಖ ಸ್ಟಾರ್ಗಳು ಇದರಲ್ಲಿ ಭಾಗಿ ಆಗಲಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಒಟ್ಟೂ 23 ಕಡೆಗಳಲ್ಲಿ 74 ಮ್ಯಾಚ್ಗಳು ನಡೆಯಲಿದ್ದು, ಮೇ 25ರಂದು ಫಿನಾಲೆ ನಡೆಯಲಿದೆ.
ಇದನ್ನೂ ಓದಿ: ಸಿನಿಮಾ ತಡವಾದರೂ ಚಾರ್ಮ್ ಕಳೆದುಕೊಳ್ಳದ ಶಾರುಖ್ ಖಾನ್
ಆರ್ಸಿಬಿ, ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಲಖನೋ ಸೂಪರ್ ಜಯಂಟ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಈ ಬಾರಿಯ ಐಪಿಎಲ್ನಲ್ಲಿ ಇರುವ ತಂಡಗಳಾಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:07 am, Wed, 19 March 25