AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಾರುಖ್ ಖಾನ್ ಬಳಿ ನಾನು ಲಂಚ ಕೇಳಿಲ್ಲ’: ಬಾಂಬೆ ಹೈಕೋರ್ಟ್‌ನಲ್ಲಿ ಸಮೀರ್ ವಾಂಖೆಡೆ ವಾದ

ಆರ್ಯನ್ ಖಾನ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಚದ ಆರೋಪ ಎದುರಿಸುತ್ತಿರುವ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ, ಈಗ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಶಾರುಖ್ ಖಾನ್ ಅವರಿಂದ ತಾವು ಯಾವುದೇ ಹಣದ ಬೇಡಿಕೆ ಇಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

‘ಶಾರುಖ್ ಖಾನ್ ಬಳಿ ನಾನು ಲಂಚ ಕೇಳಿಲ್ಲ’: ಬಾಂಬೆ ಹೈಕೋರ್ಟ್‌ನಲ್ಲಿ ಸಮೀರ್ ವಾಂಖೆಡೆ ವಾದ
Sameer Wankhede, Aryan Khan
ಮದನ್​ ಕುಮಾರ್​
|

Updated on: Mar 23, 2026 | 9:46 PM

Share

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಅವರನ್ನು ಡ್ರಗ್ಸ್ ಪ್ರಕರಣದಿಂದ ಪಾರು ಮಾಡಲು 25 ಕೋಟಿ ರೂಪಾಯಿ ಲಂಚ ಕೇಳಿದ ಆರೋಪ ಎದುರಿಸುತ್ತಿರುವ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ (Sameer Wankhede), ಸೋಮವಾರ (ಮಾರ್ಚ್ 23) ಬಾಂಬೆ ಹೈಕೋರ್ಟ್‌ನಲ್ಲಿ ತಮ್ಮ ವಾದ ಮಂಡಿಸಿದ್ದಾರೆ. ‘ನಾನು ಶಾರುಖ್ ಖಾನ್ (Shah Rukh Khan) ಅವರಿಂದ ಯಾವುದೇ ಲಂಚ ಕೇಳಿಲ್ಲ ಅಥವಾ ಸ್ವೀಕರಿಸಿಲ್ಲ’ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸಿಬಿಐ ಬಳಿ ಯಾವುದೇ ಪುರಾವೆಯಿಲ್ಲ ಎಂದು ಸಮೀರ್ ಪರ ವಕೀಲರು ವಾದ ಮಾಡಿದ್ದಾರೆ.

ಸಮೀರ್ ವಾಂಖೆಡೆ ಪರ ವಾದ ಮಂಡಿಸಿದ ಹಿರಿಯ ವಕೀಲ ಅಬಾದ್ ಪೋಂಡಾ ಅವರು ಸಿಬಿಐ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಮನವಿ ಮಾಡಿದರು. ‘ವಾಂಖೆಡೆ ಅವರು ಲಂಚ ಕೇಳಿದ್ದಾರೆ ಅಥವಾ ಪಡೆದಿದ್ದಾರೆ ಎನ್ನುವುದಕ್ಕೆ ಸಿಬಿಐ ಬಳಿ ಯಾವುದೇ ಬಲವಾದ ಪುರಾವೆಗಳಿಲ್ಲ. ಅಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಾರ್ಡೆಲಿಯಾ ಕ್ರೂಸ್ ಹಡಗಿನ ಮೇಲೆ ಕಾನೂನುಬದ್ಧವಾಗಿ ದಾಳಿ ನಡೆಸಲಾಗಿತ್ತು. ಆರ್ಯನ್ ಖಾನ್ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು’ ಎಂದು ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ಏನಿದು 25 ಕೋಟಿ ರೂ. ಲಂಚದ ಹಗರಣ?

2023ರ ಮೇ 11ರಂದು ಸಿಬಿಐ ದಾಖಲಿಸಿದ ಎಫ್‌ಐಆರ್ ಪ್ರಕಾರ, ಅಕ್ಟೋಬರ್ 2021ರ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಸಿಲುಕಿಸದಿರಲು ಶಾರುಖ್ ಖಾನ್ ಅವರಿಗೆ 25 ಕೋಟಿ ರೂಪಾಯಿ ಬೇಡಿಕೆ ಇಡಲಾಗಿತ್ತು. ನಂತರ ಈ ಲಂಚದ ಮೊತ್ತವನ್ನು 18 ಕೋಟಿ ರೂಪಾಯಿಗೆ ಇಳಿಕೆ ಮಾಡಲಾಗಿತ್ತು ಎಂಬ ಗಂಭೀರ ಆರೋಪವಿದೆ. ಇದರಲ್ಲಿ ವಾಂಖೆಡೆ ಮಾತ್ರವಲ್ಲದೆ, ಆಗಿನ ಎನ್‌ಸಿಬಿ ಎಸ್‌ಪಿ ವಿಶ್ವ ವಿಜಯ್ ಸಿಂಗ್, ಕಿರಣ್ ಗೋಸಾವಿ ಸೇರಿದಂತೆ ಹಲವರ ಹೆಸರಿದೆ.

ಆರ್ಯನ್ ಖಾನ್‌ಗೆ ಸಿಕ್ಕ ‘ಕ್ಲೀನ್ ಚಿಟ್’

2021ರ ಅಕ್ಟೋಬರ್ 3ರಂದು ಆರ್ಯನ್ ಖಾನ್ ಬಂಧನವಾಗಿತ್ತು. ಆದರೆ, ಎನ್‌ಸಿಬಿಯ ವಿಶೇಷ ತನಿಖಾ ತಂಡ ನಡೆಸಿದ ಆಂತರಿಕ ತನಿಖೆಯಲ್ಲಿ ಆರ್ಯನ್ ಖಾನ್ ಯಾವುದೇ ದೊಡ್ಡ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿಲ್ಲ ಎಂದು ತಿಳಿದುಬಂದಿತ್ತು. ವಾಂಖೆಡೆ ತಂಡವು ತನಿಖೆಯ ಸಮಯದಲ್ಲಿ ಫೋನ್ ವಶಪಡಿಸಿಕೊಳ್ಳುವಿಕೆ ಮತ್ತು ಹೇಳಿಕೆ ದಾಖಲಿಸುವಲ್ಲಿ ಸರಿಯಾದ ಪ್ರಕ್ರಿಯೆ ಅನುಸರಿಸಿಲ್ಲ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಲಾಗಿತ್ತು.

ಇದನ್ನೂ ಓದಿ: ಮಧ್ಯ ಬೆರಳು ತೋರಿಸಿದ ಆರ್ಯನ್ ಖಾನ್ ಮೇಲೆ ದೂರು; ಅಲ್ಲೇನಾಯಿತು ವಿವರಿಸಿದ ಝೈದ್ ಖಾನ್

ಸದ್ಯ ಸಮೀರ್ ವಾಂಖೆಡೆ ವಿರುದ್ಧ ಜಾರಿ ನಿರ್ದೇಶನಾಲಯ (ED) ಕೂಡ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯದ ಮುಂದಿನ ತೀರ್ಪಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸದ್ಯ ಆರ್ಯನ್ ಖಾನ್ ಅವರು ಬಾಲಿವುಡ್​​ನಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಡಿಕೆ ಶಿವಕುಮಾರ್​​​​​​​ ಸಿಎಂ ಆಗಲು ಈಕೆಯೇ ಕಾರಣ!
ಡಿಕೆ ಶಿವಕುಮಾರ್​​​​​​​ ಸಿಎಂ ಆಗಲು ಈಕೆಯೇ ಕಾರಣ!
ಅಪ್ಪನಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ ಪುಟ್ಟ ಬಾಲಕಿ
ಅಪ್ಪನಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ ಪುಟ್ಟ ಬಾಲಕಿ
ರಾಜೀನಾಮೆ ಬಳಿಕವೂ ಸಿದ್ದರಾಮಯ್ಯ-ಡಿಕೆಶಿ ನಡುವೆ ಅನ್ಯೂನ್ಯತೆ ಹೇಗಿದೆ ನೋಡಿ
ರಾಜೀನಾಮೆ ಬಳಿಕವೂ ಸಿದ್ದರಾಮಯ್ಯ-ಡಿಕೆಶಿ ನಡುವೆ ಅನ್ಯೂನ್ಯತೆ ಹೇಗಿದೆ ನೋಡಿ
ಎಸ್ಟೇಟ್​​​ನಲ್ಲಿ ಬೀಡುಬಿಟ್ಟ ಕಾಡಾನೆಗಳು: ಗಜಪಡೆ ಕಂಡು ಸ್ಥಳೀಯರು ಕಂಗಾಲು
ಎಸ್ಟೇಟ್​​​ನಲ್ಲಿ ಬೀಡುಬಿಟ್ಟ ಕಾಡಾನೆಗಳು: ಗಜಪಡೆ ಕಂಡು ಸ್ಥಳೀಯರು ಕಂಗಾಲು
ಕೊನೆಗೂ ಮೌನ ಮುರಿದ ಡಿಕೆಶಿ, ಪ್ರಮಾಣವಚನದ ಬಗ್ಗೆ ಹೇಳಿದ್ದಿಷ್ಟು
ಕೊನೆಗೂ ಮೌನ ಮುರಿದ ಡಿಕೆಶಿ, ಪ್ರಮಾಣವಚನದ ಬಗ್ಗೆ ಹೇಳಿದ್ದಿಷ್ಟು
ಯುವತಿ ದೇಹ ಸುಟ್ಟು ಹೋಗಿದ್ದರೂ ಆಕೆಯನ್ನೇ ಮದುವೆಯಾದ ವರ
ಯುವತಿ ದೇಹ ಸುಟ್ಟು ಹೋಗಿದ್ದರೂ ಆಕೆಯನ್ನೇ ಮದುವೆಯಾದ ವರ
ಸಿದ್ದರಾಮಯ್ಯ ಆಪ್ತರೇ ಸಹಿ ಸಂಗ್ರಹಿಸಿ ಬೆನ್ನಿಗೆ ಚೂರಿ ಹಾಕಿದ್ರಾ?
ಸಿದ್ದರಾಮಯ್ಯ ಆಪ್ತರೇ ಸಹಿ ಸಂಗ್ರಹಿಸಿ ಬೆನ್ನಿಗೆ ಚೂರಿ ಹಾಕಿದ್ರಾ?
ಸಿದ್ದರಾಮಯ್ಯ ಟೀಮ್​​​ಗೆ ಢವಢವ: ಈ 13 ಜನರಿಗೆ ಸಚಿವ ಸ್ಥಾನ ಫಿಕ್ಸ್​​?
ಸಿದ್ದರಾಮಯ್ಯ ಟೀಮ್​​​ಗೆ ಢವಢವ: ಈ 13 ಜನರಿಗೆ ಸಚಿವ ಸ್ಥಾನ ಫಿಕ್ಸ್​​?
ರಾಯಚೂರು ಡೀಸೆಲ್ ಕೊರತೆ: ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ
ರಾಯಚೂರು ಡೀಸೆಲ್ ಕೊರತೆ: ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ
ಕನ್ನಡ ಚಿತ್ರರಂಗಕ್ಕೆ ಗಟ್ಟಿ ನಾಯಕತ್ವದ ಅವಶ್ಯಕತೆ ಇದೆ: ಸುಮಲತಾ
ಕನ್ನಡ ಚಿತ್ರರಂಗಕ್ಕೆ ಗಟ್ಟಿ ನಾಯಕತ್ವದ ಅವಶ್ಯಕತೆ ಇದೆ: ಸುಮಲತಾ