
ಆರ್ಎಸ್ ಅಧಿಕಾರಿ ಸಮೀರ್ ವಾಂಖೆಡೆ ಅವರು ಈ ಮೊದಲು ಶಾರುಖ್ ಖಾನ್ ಮಗ ಆರ್ಯನ್ ಖಾನ್ನ ಡ್ರಗ್ ಕೇಸ್ನಲ್ಲಿ ಬಂಧಿಸಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು.ಈ ಪ್ರಕರಣದಲ್ಲಿ ಆರ್ಯನ್ ಖಾನ್ ನಿರ್ದೋಷಿ ಎಂಬುದು ಸಾಬೀತಾಯಿತು. ಈ ಬೆನ್ನಲ್ಲೇ ಆರ್ಯನ್ ಖಾನ್ ನಿರ್ದೇಶನದ ‘ಬ್ಯಾಡ್ಸ್ ಆಫ್ ಬಾಲಿವುಡ್’ನಲ್ಲಿ ಸಮೀರ್ (Sameer Wankhede) ಅವರನ್ನೇ ಹೋಲುವ ಪಾತ್ರ ಬಂದಿತ್ತು. ಇದನ್ನು ಪ್ರಶ್ನಿಸಿ ಸಮೀರ್ ಕೋರ್ಟ್ ಮೆಟ್ಟಿಲೇರಿದ್ದರು. ಶಾರುಖ್ ಖಾನ್ ನಿರ್ಮಾಣ ಸಂಸ್ಥೆ ಪರ ವಕೀಲರು ಸಮೀರ್ಗೆ ತಿರುಗೇಟು ನೀಡಿದ್ದಾರೆ.
‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಯನ್ನು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ನಿರ್ಮಾಣ ಮಾಡಿದೆ. ಈ ಸರಣಿಯಲ್ಲಿ ಎನ್ಸಿಬಿ ಅಧಿಕಾರಿ ಒಬ್ಬರನ್ನು ತೋರಿಸಲಾಗಿದ್ದು, ಅವರು ಬಾಲಿವುಡ್ನವರನ್ನು ಮಾತ್ರ ಟಾರ್ಗೆಟ್ ಮಾಡೋ ರೀತಿ ತೋರಿಸಲಾಗಿದೆ.ಅನೇಕರಿಗೆ ಇದು ಸಮೀರ್ ವಾಂಖೆಡೆ ಎಂದು ಅನಿಸಿದೆ. ಹೀಗಾಗಿ, ಸಮೀರ್ ಅವರು ದೂರು ದಾಖಲಿಸಿದ್ದರು.
‘ಈ ಸರಣಿ ಪ್ರಸಾರ ತಡೆಗೆ ನಿರ್ಬಂಧ ಹೇರಬೇಕು’ ಎಂದು ಸಮೀರ್ ಕೋರಿದ್ದು, ಇತ್ತೀಚೆಗೆ ದೆಹಲಿ ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆದಿದೆ.
ರೆಡ್ ಚಿಲ್ಲೀಸ್ ಅನ್ನು ಪ್ರತಿನಿಧಿಸಿದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್, ನ್ಯಾಯಮೂರ್ತಿ ಪುರುಶೈಂದ್ರ ಕುಮಾರ್ ಕೌರವ್ ಅವರು ಇದು ಫಿಕ್ಷನ್ ಕಥೆ ಎಂದರು. ಇದಕ್ಕೂ ಕ್ರ್ಯೂಸ್ ಕೇಸ್ಗೂ ಸಂಬಂಧ ಇಲ್ಲ ಎಂದರು.
‘ಈ ವೆಬ್ ಸರಣಿಯು ಸುಮಾರು 20 ವಿಭಿನ್ನ ವಿಷಯಗಳನ್ನು ಒಳಗೊಂಡಿದೆ. ನಾವು ಕಾರ್ಡೆಲಿಯಾ ಕ್ರೂಸ್ ಘಟನೆಯ ಕುರಿತು ಸಾಕ್ಷ್ಯಚಿತ್ರವನ್ನು ತೋರಿಸಿಲ್ಲ. ಅತಿ ಉತ್ಸಾಹಿ ಅಧಿಕಾರಿಗಳಿಂದ ಸ್ಫೂರ್ತಿ ಪಡೆದು ಇದನ್ನು ಮಾಡಲಾಗಿದೆ. ಇದು ಕಾರ್ಡೆಲಿಯಾ ಕ್ರೂಸ್ ಕಥೆ ಅಲ್ಲ’ ಎಂದು ವಕೀಲರು ವಾದ ಮಂಡಿಸಿದರು.
ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಬಳಿಕ ಮತ್ತೆ ಶಾರುಖ್ ಖಾನ್ ಮಗನ ಮೇಲೆ ಕೇಸ್ ಹಾಕಿದ ಸಮೀರ್ ವಾಂಖೆಡೆ
ಈ ಪ್ರಕರಣದಲ್ಲಿ ನೆಟ್ಫ್ಲಿಕ್ಸ್ ಕೂಡ ಭಾಗಿ ಆಗಿದೆ. ಏಕೆಂದರೆ ಈ ಸರಣಿಯು ಇದೇ ಒಟಿಟಿಯಲ್ಲಿ ಪ್ರಸಾರ ಕಂಡಿದೆ. ಹೀಗಾಗಿ, ಅವರ ವಿಚಾರಣೆಯನ್ನು ಗುರುವಾರ (ಡಿಸೆಂಬರ್ 4) ಮಾಡಲು ನಿರ್ಧರಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.