ಪ್ರೇಮಿಗಳ ವಾರಕ್ಕೆ ಪಿವಿಆರ್​-ಐನಾಕ್ಸ್ ಕಡೆಯಿಂದ ಸಿಕ್ತು ಭರ್ಜರಿ ಉಡುಗೊರೆ

| Updated By: ರಾಜೇಶ್ ದುಗ್ಗುಮನೆ

Updated on: Feb 09, 2024 | 7:58 AM

ಸ್ಯಾಂಡಲ್​ವುಡ್, ಬಾಲಿವುಡ್, ಹಾಲಿವುಡ್, ಟಾಲಿವುಡ್ ಸಿನಿಮಾಗಳು ರೀ ರಿಲೀಸ್ ಆಗುತ್ತವೆ. ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿ ಭಾರತದ ಪ್ರಮುಖ ನಗರಗಳಲ್ಲಿ ನೀವು ಈ ಚಿತ್ರಗಳನ್ನು ನೋಡಬಹುದು. ಒಂದು ವಾರಗಳ ಕಾಲ ಈ ಆಫರ್ ಇರಲಿದೆ. ಟಿಕೆಟ್ ದರ ಕೂಡ 112 ರೂಪಾಯಿ ಮಾತ್ರ ಇರಲಿದೆ.

ಪ್ರೇಮಿಗಳ ವಾರಕ್ಕೆ ಪಿವಿಆರ್​-ಐನಾಕ್ಸ್ ಕಡೆಯಿಂದ ಸಿಕ್ತು ಭರ್ಜರಿ ಉಡುಗೊರೆ
ಪಿವಿಆರ್
Follow us on

ಪ್ರೇಮಿಗಳ ದಿನವನ್ನು ಫೆಬ್ರವರಿ 14ರಂದು ಆಚರಿಸಲಾಗುತ್ತಿದೆ. ಅದಕ್ಕೂ ಮೊದಲು ಒಂದು ವಾರಗಳಿಂದಲೇ ಸಂಭ್ರಮಾಚರಣೆ ಆರಂಭ ಆಗಿರುತ್ತದೆ. ಈ ಸಂದರ್ಭದಲ್ಲಿ ಅನೇಕ ಲವ್​ಸ್ಟೋರಿ ಸಿನಿಮಾಗಳು ರಿಲೀಸ್ ಆಗುತ್ತವೆ. ಈಗ ಪಿವಿಆರ್​ ಐನಾಕ್ಸ್ (PVR Inox) ಕಡೆಯಿಂದ ಪ್ರೇಮಿಗಳ ದಿನಾಚರಣೆಗೆ ಸ್ಪೆಷಲ್ ಉಡುಗೊರೆ ಸಿಗುತ್ತಿದೆ. ಲವ್​ಸ್ಟೋರಿಗಳಿಗೆ ಫೇಮಸ್ ಆದ ಚಿತ್ರಗಳನ್ನು ಮತ್ತೆ ರಿಲೀಸ್ ಮಾಡಲು ಈ ಮಲ್ಟಿಪ್ಲೆಕ್ಸ್ ಚೈನ್ ಮುಂದಾಗಿದೆ. ಇಂದಿನಿಂದ (ಫೆಬ್ರವರಿ 9) ಆರಂಭಿಸಿ, ಫೆಬ್ರವರಿ 15ರವರೆಗೆ ಈ ಆಫರ್ ಇರಲಿದೆ.

ಪಿವಿಆರ್ ಐನಾಕ್ಸ್ ವ್ಯಾಲೆಂಟೈನ್ಸ್​ಡೇ ಆಚರಿಸಲು ಮುಂದಾಗಿದೆ. ಐಕಾನಿಕ್ ಸಿನಿಮಾಗಳು ಎನಿಸಿಕೊಂಡ ಹಿಂದಿಯ ‘ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ‘, ‘ಯೇ ಜವಾನಿ ಹೇ ದಿವಾನಿ’, ‘ಜಬ್​ ವಿ ಮೆಟ್’, ‘ತು ಜೂಟಿ ಮೇ ಮಕ್ಕರ್’ ಹಾಲಿವುಡ್​ನ ‘ಟೈಟಾನಿಕ್’ ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ. ಈ ವಿಚಾರ ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಬುಕ್ ಮೈ ಶೋನಲ್ಲಿ ಬುಕಿಂಗ್ ಓಪನ್ ಆಗಿದೆ.

ಬಾಲಿವುಡ್, ಹಾಲಿವುಡ್ ಹಾಗೂ ಸ್ಥಳೀಯ ಭಾಷೆಯ ಸಿನಿಮಾಗಳು ಈ ಸಾಲಿನಲ್ಲಿ ಇವೆ. ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿ ಭಾರತದ ಪ್ರಮುಖ 70ಕ್ಕೂ ಹೆಚ್ಚು ನಗರಗಳಲ್ಲಿ ನೀವು ಈ ಚಿತ್ರಗಳನ್ನು ನೋಡಬಹುದು. ಒಂದು ವಾರಗಳ ಕಾಲ ಈ ಆಫರ್ ಇರಲಿದೆ. ಮೇಲೆ ಹೆಸರಿಸಿದ ಸಿನಿಮಾಗಳ ಜೊತೆ ‘ವೀರ್ ಜರಾ’, ‘ಮೊಹಾಬತೆ’, ‘ಸೋನು ಕೆ ಟಿಟು ಕಿ ಸ್ವೀಟಿ’, ‘ತು ಜೂಟಿ ಮೇ ಮಕ್ಕರ್’, ‘ಪ್ಯಾರ್​ ಕಾ ಪಂಚನಾಮ’, ‘ದೇ ದೇ ಪ್ಯಾರ್’ ಸಿನಿಮಾಗಳು ರಿಲೀಸ್ ಆಗುತ್ತಿವೆ.

ಕನ್ನಡದ ಕೆಲ ಸಿನಿಮಾಗಳೂ ರೀ ರಿಲೀಸ್ ಆಗುತ್ತಿವೆ. ಈಗಾಗಲೇ ಥಿಯೇಟರ್​ನಲ್ಲಿ ಯಶಸ್ವಿ ಪ್ರದರ್ಶನ ಕಂಡು ಒಟಿಟಿಯಲ್ಲಿ ಪ್ರಸಾರ ಕಾಣುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ ಹಾಗೂ ಬಿ’ ಸಿನಿಮಾಗಳು ಥಿಯೇಟರ್​ನಲ್ಲಿ ರೀ ರೀಲೀಸ್ ಆಗುತ್ತಿವೆ. ಈ ಚಿತ್ರಗಳನ್ನು ಒಟಿಟಿಯಲ್ಲಿ ನೋಡಿ ದೊಡ್ಡ ಪರದೆಯಲ್ಲಿ ಇವನ್ನು ನೋಡಬೇಕಿತ್ತು ಎಂದು ಕೊರಗಿದವರು ಇರುತ್ತಾರೆ. ಅಂಥವರು ಈ ಚಿತ್ರವನ್ನು ಥಿಯೇಟರ್​ನಲ್ಲಿ ನೋಡಬಹುದು. ಇದರ ಜೊತೆಗೆ ರಾಜ್​ ಬಿ ಶೆಟ್ಟಿ ನಟನೆಯ ‘ಸ್ವಾತಿ ಮುತ್ತಿನ ಮಳೆಹನಿಯೇ’ ಚಿತ್ರ ಕೂಡ ರೀರಿಲೀಸ್ ಆಗುತ್ತಿದೆ.

ತೆಲುಗಿನಲ್ಲಿ ರಿಲೀಸ್ ಆದ ಐಕಾನಿಕ್ ಸಿನಿಮಾ ‘ಸೀತಾ ರಾಮಂ’ ಥಿಯೇಟರ್​ನಲ್ಲಿ ಮರು ಬಿಡುಗಡೆ ಆಗುತ್ತಿದೆ. ದುಲ್ಕರ್ ಸಲ್ಮಾನ್ ಹಾಗೂ ಮೃಣಾಲ್​ ಠಾಕೂರ್ ಕಾಂಬಿನೇಷನ್​ನ ಈ ಸಿನಿಮಾ ಗಮನ ಸೆಳೆದಿದೆ.

ಇದನ್ನೂ ಓದಿ: ಮಲ್ಟಿಪ್ಲೆಕ್ಸ್​ಗಳ ವಿರುದ್ಧ ಸಿಡಿದೆದ್ದ ಹೊಂಬಾಳೆ, ಸರಣಿ ಟ್ವೀಟ್ ಮಾಡಿದ ಪಿವಿಆರ್ ಸಿಇಒ

ಈ ಚಿತ್ರಗಳಿಗೆ ಟಿಕೆಟ್ ಮೇಲೆ ಆಫರ್ ನೀಡಲಾಗಿದೆ. ಈ ಸಿನಿಮಾಗಳನ್ನು ನೀವು ಕೇವಲ 112 ರೂಪಾಯಿಗಳಿಗೆ ನೋಡಬಹುದು. ಮಲ್ಟಿಪ್ಲೆಕ್ಸ್​ನಲ್ಲಿ ಟಿಕೆಟ್ ದರ ದುಬಾರಿ ಎಂದು ದೂರಿದವರು ಅನೇಕರಿದ್ದಾರೆ. ಅವರಿಗೆ 112 ರೂಪಾಯಿ ಟಿಕೆಟ್ ಆಫರ್ ಸಹಕಾರಿ ಆಗಲಿದೆ. ವ್ಯಾಲೆಂಟೈನ್ಸ್​ ಡೇನ ವಿಶೇಷವಾಗಿ ಆಚರಿಸಬೇಕು ಎನ್ನುವ ಕಾರಣಕ್ಕೆ ಈ ಆಫರ್ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ