ನಟಿ ಸಾರಾ ಅಲಿ ಖಾನ್ (Sara Ali Khan) ಅವರು ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ಸೋಲು ಗೆಲುವು ಏನೇ ಇದ್ದರೂ ಅವರಿಗೆ ಸಿಗುವ ಅವಕಾಶ ಕಡಿಮೆ ಆಗಿಲ್ಲ. ಈ ತಿಂಗಳು ಅವರ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಈ ನಡುವೆ ಅವರು ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕವೂ ಸುದ್ದಿ ಆಗುತ್ತಾರೆ. ಸಾರಾ ಅಲಿ ಖಾನ್ ಈಗ ಜುಹೂನಲ್ಲಿ ಇರುವ ಶನಿ ದೇವಸ್ಥಾನಕ್ಕೆ (Shani Temple) ಭೇಟಿ ನೀಡಿದ್ದಾರೆ. ದೇವಸ್ಥಾನದ ಹೊರಗೆ ಇರುವ ಅನೇಕರಿಗೆ ಅವರು ಸಿಹಿ ಹಂಚಿದ್ದಾರೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋ ವೈರಲ್ ಆಗಿವೆ. ಸಿಹಿ ಹಂಚುವಾಗ ತಮ್ಮ ಫೋಟೋ ತೆಗೆಯುವುದು ಬೇಡ ಎಂದು ಪಾಪರಾಜಿಗಳ ಬಳಿ ಸಾರಾ ಅಲಿ ಖಾನ್ ಅವರು ಮನವಿ ಮಾಡಿಕೊಂಡಿದ್ದಾರೆ.
ಸಾರಾ ಅಲಿ ಖಾನ್ ಅವರು ಹಿಂದೂ ದೇವಾಲಯಗಳಿಗೆ ತೆರಳಿದಾಗೆಲ್ಲ ಒಂದಷ್ಟು ಮಂದಿ ಟ್ರೋಲ್ ಮಾಡುತ್ತಾರೆ. ಈ ಬಾರಿಯೂ ಅದು ಮುಂದುವರಿದಿದೆ. ಸಾರಾ ಅವರು ಶನಿ ದೇವಸ್ಥಾನದ ಎದುರು ಸಿಹಿ ಹಂಚಿದ ವಿಡಿಯೋಗಳು ಪಾಪರಾಜಿಗಳ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವೈರಲ್ ಆಗಿವೆ. ಪ್ರಚಾರಕ್ಕಾಗಿ ಸಾರಾ ಅಲಿ ಖಾನ್ ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಸೈಫ್ ಅಲಿ ಖಾನ್ ಅವರ ಮಗಳು ಸಾರಾ ಅಲಿ ಖಾನ್. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಸುಲಭವಾಗಿ ಅವಕಾಶಗಳು ಸಿಗುತ್ತಿವೆ. ಅವರು ನೆಪೋಟಿಸಂನ ಫಲಾನುಭವಿ ಎಂದು ಅನೇಕರು ಟೀಕಿಸುತ್ತಿದ್ದಾರೆ. ಸಾರಾ ಅಲಿ ಖಾನ್ ನಟನೆಯ ‘ಯೇ ವತನ್ ಮೇರೆ ವತನ್’ ಹಾಗೂ ‘ಮರ್ಡರ್ ಮುಬಾರಕ್’ ಸಿನಿಮಾಗಳು ಮಾರ್ಚ್ನಲ್ಲಿ ಒಟಿಟಿ ಮೂಲಕ ನೇರವಾಗಿ ಬಿಡುಗಡೆ ಆದವು.
ಹೊಗಳಿಕೆ ನಿರೀಕ್ಷಿಸಿದ್ದ ಸಾರಾ ಅಲಿ ಖಾನ್ಗೆ ಸಿಕ್ಕಿದ್ದು ಟ್ರೋಲ್ ಮಾತ್ರ
‘ಯೇ ವತನ್ ಮೇರೆ ವತನ್’ ಸಿನಿಮಾದಲ್ಲಿ ರೆಟ್ರೋ ಕಾಲದ ರಿಯಲ್ ಲೈಫ್ ಕಥೆ ಇದೆ. ಈ ಸಿನಿಮಾ ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ಮಾ.21ರಂದು ಬಿಡುಗಡೆ ಆಯಿತು. ಅದೇ ರೀತಿ, ‘ಮರ್ಡರ್ ಮುಬಾರಕ್’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಮಾರ್ಚ್ 15ರಂದು ಪ್ರಸಾರ ಆರಂಭಿಸಿತು. ಕೆಲವರು ಸಾರಾ ಅಲಿ ಖಾನ್ ನಟನೆಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅವರು ಮತ್ತೆ ಪ್ರಚಾರದ ಮೂಲಕ ಮುನ್ನೆಲೆಗೆ ಬರಲು ದೇವಸ್ಥಾನದ ಎದುರು ಸಿಹಿ ಹಂಚುವ ಗಿಮಿಕ್ ಮಾಡಿದ್ದಾರೆ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಈ ಟೀಕೆಗಳಿಗೆ ಸಾರಾ ಅಲಿ ಖಾನ್ ಯಾವ ರೀತಿ ಉತ್ತರಿಸುತ್ತಾರೆ ಎಂಬುದನ್ನು ಕಾದುನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.