ಸಖತ್ ಅದ್ದೂರಿಯಾಗಿರಲಿದೆ ಶಾರುಖ್ ಖಾನ್ ಬರ್ತ್​ಡೇ ಪಾರ್ಟಿ; ಯಾರಿಗೆಲ್ಲ ಆಹ್ವಾನ?

| Updated By: ರಾಜೇಶ್ ದುಗ್ಗುಮನೆ

Updated on: Oct 31, 2023 | 1:58 PM

ಬಾಲಿವುಡ್​ನಲ್ಲಿ ಸ್ಟಾರ್​​ಗಳು ಬರ್ತ್​ಡೇ ದಿನ ಪಾರ್ಟಿ ಆಯೋಜಿಸಿ ಇತರ ಸೆಲೆಬ್ರಿಟಿಗಳನ್ನು ಆಹ್ವಾನ ಮಾಡುವ ಟ್ರೆಂಡ್ ಮೊದಲಿನಿಂದಲೂ ನಡೆದು ಬಂದಿದೆ. ಈಗ ನವೆಂಬರ್ 2ರಂದು ಶಾರುಖ್ ಖಾನ್ ಅವರು ಬರ್ತ್​ಡೇ ಪಾರ್ಟಿ ಆಯೋಜಿಸಿದ್ದಾರೆ.

ಸಖತ್ ಅದ್ದೂರಿಯಾಗಿರಲಿದೆ ಶಾರುಖ್ ಖಾನ್ ಬರ್ತ್​ಡೇ ಪಾರ್ಟಿ; ಯಾರಿಗೆಲ್ಲ ಆಹ್ವಾನ?
ಶಾರುಖ್ ಖಾನ್
Follow us on

ಶಾರುಖ್ ಖಾನ್ (Shah Rukh Khan) ಅವರು ನವೆಂಬರ್ 2ರಂದು ಬರ್ತ್​​​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ನಟನೆಯಿಂದ ಅವರು ದೂರ ಇದ್ದರು. ಇದರ ಜೊತೆಗೆ ಮಗ ಆರ್ಯನ್ ಖಾನ್ ಡ್ರಗ್ ಕೇಸ್​ನಲ್ಲಿ ಸಿಕ್ಕಿ ಬಿದ್ದರು. ಹೀಗಾಗಿ, ಅವರಿಗೆ ಹುಟ್ಟಹಬ್ಬ ಆಚರಣೆ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಈ ವರ್ಷ ಬರ್ತ್​ಡೇನ ಅದ್ದೂರಿಯಾಗಿ ಆಚರಿಸಿಕೊಳ್ಳಲು ಅವರ ಬಳಿ ಹಲವು ಕಾರಣಗಳು ಇವೆ. ಈ ಕಾರಣದಿಂದ ಈ ವರ್ಷದ ಅವರ ಬರ್ತ್​​ಡೇ ಜೋರಾಗಿರಲಿದೆ. ಬಾಲಿವುಡ್​ ಮಂದಿಗಾಗಿ ಅವರು ಅದ್ದೂರಿ ಪಾರ್ಟಿ ಆಯೋಜಿಸುತ್ತಿದ್ದಾರೆ ಎನ್ನಲಾಗಿದೆ.

ಬಾಲಿವುಡ್​ನಲ್ಲಿ ಸ್ಟಾರ್​​ಗಳು ಬರ್ತ್​ಡೇ ದಿನ ಪಾರ್ಟಿ ಆಯೋಜಿಸಿ ಇತರ ಸೆಲೆಬ್ರಿಟಿಗಳನ್ನು ಆಹ್ವಾನ ಮಾಡುವ ಟ್ರೆಂಡ್ ಮೊದಲಿನಿಂದಲೂ ನಡೆದು ಬಂದಿದೆ. ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಅನೇಕರು ಈ ರೀತಿಯ ಪಾರ್ಟಿ ಮಾಡಿದ್ದರು. ಈಗ ನವೆಂಬರ್ 2ರಂದು ಶಾರುಖ್ ಖಾನ್ ಅವರು ಬರ್ತ್​ಡೇ ಪಾರ್ಟಿ ಆಯೋಜಿಸಿದ್ದಾರೆ.

ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಈ ವರ್ಷ ಜನವರಿ ತಿಂಗಳಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತು. ಶಾರುಖ್ ಖಾನ್ ಅವರು ಮಾಸ್ ಅವತಾರದಲ್ಲಿ ಮಿಂಚಿದರು. ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ ಮೊದಲಾದವರು ನಟಿಸಿದ್ದರು. ಇತ್ತೀಚೆಗೆ ರಿಲೀಸ್ ಆದ ‘ಜವಾನ್’ ಸಿನಿಮಾ ಕೂಡ ಗೆದ್ದು ಬೀಗಿದೆ. ಈ ಚಿತ್ರಕ್ಕೆ ತಮಿಳಿನ ಅಟ್ಲಿ ನಿರ್ದೇಶನ ಮಾಡಿದ್ದಾರೆ. ವಿಜಯ್ ಸೇತುಪತಿ, ನಯನತಾರಾ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ‘ಪಠಾಣ್’ ರೀತಿಯೇ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದೆ. ಶಾರುಖ್ ಮಗ್ ಆರ್ಯನ್ ಖಾನ್ ಅವರು ನಿರ್ದೇಶನಕ್ಕೆ ಕಾಲಿಡುತ್ತಿದ್ದಾರೆ. ಅವರು ಪ್ರಾರಂಭಿಸಿರುವ ಬಟ್ಟೆ ಬ್ರ್ಯಾಂಡ್ ಯಶಸ್ಸು ಕಂಡಿದೆ. ಈ ಕಾರಣದಿಂದಲೇ ಶಾರುಖ್ ಬರ್ತ್​ಡೇ ಅದ್ದೂರಿಯಾಗಿ ಇರಲಿದೆ.

ಮುಂಬೈನಲ್ಲೇ ಈ ಪಾರ್ಟಿ ಆಯೋಜನೆ ಮಾಡಲಾಗಿದೆ. ಸಲ್ಮಾನ್ ಖಾನ್, ಕರಣ್ ಜೋಹರ್, ಕಾಜೋಲ್​, ದೀಪಿಕಾ ಪಡುಕೋಣೆ, ಅಟ್ಲಿ, ರಾಜ್​ಕುಮಾರ್ ಹಿರಾನಿ, ಸಿದ್ದಾರ್ಥ್ ಆನಂದ್ ಮೊದಲಾದವರಿಗೆ ಆಹ್ವಾನ ಹೋಗಿದೆ. ಯಾರೆಲ್ಲ ಮದುವೆಯಲ್ಲಿ ಹಾಜರಿ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:  ರಿವೀಲ್ ಆಯ್ತು ‘ಡಂಕಿ’ ಸಿನಿಮಾದ ಕಥೆ; ಶಾರುಖ್ ಖಾನ್ ಪಾತ್ರ ಹೇಗಿರಲಿದೆ?

‘ಡಂಕಿ’ ಸಿನಿಮಾ ಕೆಲಸದ ಬಗ್ಗೆ ಶಾರುಖ್ ಖಾನ್ ಗಮನ ಹರಿಸುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಗಲಿದೆ. ರಾಜ್​ಕುಮಾರ್ ಹಿರಾನಿ ನಿರ್ದೇಶನ ಚಿತ್ರಕ್ಕೆ ಇದೆ. ತಾಪ್ಸಿ ಪನ್ನು ಈ ಚಿತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 2ರಂದು ಈ ಚಿತ್ರದ ಟೀಸರ್ ರಿಲೀಸ್ ಆಗುವ ಸಾಧ್ಯತೆ ಇದೆ. ಇದರ ಜೊತೆ ಶಾರುಖ್ ಹೊಸ ಸಿನಿಮಾ ಘೋಷಣೆ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ