AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ ಶಾರುಖ್ ಖಾನ್ ಹಾದಿಯಲ್ಲೇ ಆರ್ಯನ್ ಖಾನ್: ಅಪ್ಪನದ್ದೇ ಬಂಡವಾಳ

Aryan Khan: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮನೊರಂಜನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಅವರ ನಿರ್ದೇಶನದ ವೆಬ್ ಸರಣಿಯ ಚಿತ್ರೀಕರಣ ಮುಗಿಸಿದ್ದಾರೆ. ವೆಬ್ ಸರಣಿಗೆ ಶಾರುಖ್ ಖಾನ್ ಅವರೇ ಬಂಡವಾಳ ಹೂಡಿದ್ದಾರೆ.

ಅಪ್ಪ ಶಾರುಖ್ ಖಾನ್ ಹಾದಿಯಲ್ಲೇ ಆರ್ಯನ್ ಖಾನ್: ಅಪ್ಪನದ್ದೇ ಬಂಡವಾಳ
ಆರ್ಯನ್ ಖಾನ್
Follow us
ಮಂಜುನಾಥ ಸಿ.
|

Updated on: Sep 19, 2023 | 8:47 PM

ಶಾರುಖ್ ಖಾನ್ (Shah Rukh Khan) ಪುತ್ರ ಆರ್ಯನ್ ಖಾನ್ (Aryan Khan) ಕಳೆದೆರಡು ವರ್ಷಗಳಿಂದ ಬಹಳ ಸುದ್ದಿಯಲ್ಲಿದ್ದಾರೆ. ಅದರಲ್ಲಿಯೂ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಬಳಿಕವಂತೂ ಆರ್ಯನ್ ಖಾನ್ ವಿಶ್ವಮಟ್ಟದಲ್ಲಿ ಸುದ್ದಿಯಾಗಿದ್ದರು. ಡ್ರಗ್ಸ್ ಪ್ರಕರಣದ ಸುಳಿಯಿಂದ ಆರ್ಯನ್ ಹೊರಬಂದಾಗಿದೆ. ಆರ್ಯನ್ ಹೆಸರನ್ನು ತನಿಖಾ ಸಂಸ್ಥೆಯೇ ಚಾರ್ಜ್​ಶೀಟ್​ನಿಂದ ಕೈಬಿಟ್ಟಿದೆ. ಡ್ರಗ್ಸ್ ಪ್ರಕರಣದ ಬಳಿಕ ಆರ್ಯನ್ ಖಾನ್ ತಮ್ಮದೇ ಬ್ರ್ಯಾಂಡ್ ಒಂದನ್ನು ಪ್ರಾರಂಭಿಸಿ ಬ್ಯುಸಿನೆಸ್​ಗೆ ಇಳಿದಿದ್ದರು. ಇದೀಗ ತಂದೆಯ ಹಾದಿಯಲ್ಲೇ ನಡೆಯಲು ನಿಶ್ಚಯಿಸಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಗನ ಪ್ರಯತ್ನಕ್ಕೆ ಅಪ್ಪನೇ ಬಂಡವಾಳ ಹೂಡುತ್ತಿದ್ದಾರೆ.

ಶಾರುಖ್ ಖಾನ್, ಸೂಪರ್ ಸ್ಟಾರ್ ನಟ ಆದರೆ ಅಪ್ಪನಂತೆಯೇ ಲುಕ್ಸ್ ಆರ್ಯನ್ ಖಾನ್​ಗೆ ಇದೆಯಾದರೂ ಆರ್ಯನ್ ಖಾನ್ ನಟನೆಯನ್ನು ಆರಿಸಿಕೊಂಡಿಲ್ಲ ಬದಲಿಗೆ ತೆರೆ ಹಿಂದೆ ಕೆಲಸ ಮಾಡುವ ನಿರ್ಣಯ ಮಾಡಿದ್ದಾರೆ. ಆರ್ಯನ್ ಖಾನ್ ನಿರ್ದೇಶನದ ಬಗ್ಗೆ ಆಸಕ್ತಿ ಹೊಂದಿದ್ದು, ವೆಬ್ ಸರಣಿಯೊಂದನ್ನು ನಿರ್ದೇಶನ ಮಾಡಲು ಮುಂದಾಗಿದ್ದು, ಅದರ ಬಗ್ಗೆ ಸ್ವತಃ ಆರ್ಯನ್ ಖಾನ್ ಅಪ್​ಡೇಟ್ ಹಂಚಿಕೊಂಡಿದ್ದರು.

‘ಸ್ಟಾರ್​ಡಮ್’ ಹೆಸರಿನ ಹೊಸ ವೆಬ್ ಸರಣಿಯನ್ನು ಆರ್ಯನ್ ಖಾನ್ ನಿರ್ದೇಶನ ಮಾಡಿದ್ದಾರೆ. ಕಳೆದ ಡಿಸೆಂಬರ್ ತಿಂಗಳಲ್ಲಿಯೇ ವೆಬ್ ಸರಣಿಯ ಚಿತ್ರೀಕರಣ ಆರಂಭವಾಗಿತ್ತು. ಇದೀಗ ವೆಬ್ ಸರಣಿಯ ಚಿತ್ರೀಕರಣವನ್ನು ಆರ್ಯನ್ ಖಾನ್ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ವೆಬ್ ಸರಣಿಯ ನಟರು, ತಂತ್ರಜ್ಞರು ಇತ್ಯಾದಿಗಳ ಬಗ್ಗೆ ಆರ್ಯನ್ ಖಾನ್ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಶೀಘ್ರವೇ ಈ ವೆಬ್ ಸರಣಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಜವಾನ್’ ಸಿನಿಮಾ ಶೂಟಿಂಗ್ ಸೆಟ್​​ನಲ್ಲಿ ಶಾರುಖ್ ಖಾನ್ ತಮಿಳು ಮಾತನಾಡಿದ ಅಪರೂಪದ ವಿಡಿಯೋ

ಈ ಹಿಂದೆ ಐಪಿಎಲ್ ಹರಾಜು ಪ್ರಕ್ರಿಯೆಗಳಲ್ಲಿ ಭಾಗವಹಿಸಿ ಕುತೂಹಲ ಮೂಡಿಸಿದ್ದ ಆರ್ಯನ್ ಖಾನ್, ವೆಬ್ ಸರಣಿ ಚಿತ್ರೀಕರಣ ಆರಂಭಿಸಿದ ಜೊತೆಗೆ ಬ್ಯುಸಿನೆಸ್ ಕ್ಷೇತ್ರಕ್ಕೂ ಪದಾರ್ಪಣೆ ಮಾಡಿದ್ದರು. ‘ಡಿ ಯವೋಲ್’ ಹೆಸರಿನ ತಮ್ಮದೇ ಬ್ರ್ಯಾಂಡ್ ತೆರೆದಿರುವ ಆರ್ಯನ್ ಖಾನ್, ಬಟ್ಟೆಗಳು, ಪ್ಯಾಷನ್ ಆಕ್ಸಸೆರಿ ಹಾಗೂ ವೋಡ್ಕಾ ಮಾರಾಟ ಮಾಡುತ್ತಿದ್ದಾರೆ. ಭಾರಿ ಬೆಲೆಯ ಈ ಬ್ರ್ಯಾಂಡ್ ಗೆ ಆರ್ಯನ್ ತಂದೆ ಶಾರುಖ್ ಖಾನ್ ಅವರೇ ರಾಯಭಾರಿ.

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಹ ಮನೊರಂಜನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಸುಹಾನಾ ಖಾನ್ ‘ಆರ್ಚಿಸ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾವನ್ನು ಜೋಯಾ ಅಖ್ತರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಕೆಲವೇ ದಿನಗಳಲ್ಲಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದೆ. ಇದರ ಜೊತೆಗೆ ಕೆಲವು ಜಾಹೀರಾತುಗಳಲ್ಲಿ ನಟಿಸಲು ಆರಂಭಿಸಿದ್ದಾರೆ ಸುಹಾನಾ. ಟಿರಾ ಹೆಸರಿನ ಸೌಂದರ್ಯವರ್ಧಕ ಉತ್ಪನ್ನಗಳ ಜಾಹೀರಾತಿನಲ್ಲಿ ಸುಹಾನಾ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ