ಶಾರುಖ್ ಖಾನ್ ಆರೋಗ್ಯ ಹೇಗಿದೆ? ಅಪ್​ಡೇಟ್ ಕೊಟ್ಟ ಜೂಹಿ ಚಾವ್ಲಾ

|

Updated on: May 23, 2024 | 7:01 AM

Shah Rukh Khan Health Update: ಇತ್ತೀಚೆಗೆ ಅಹಮದಾಬಾದ್​ನಲ್ಲಿ ನಡೆದ ಎಸ್​ಆರ್​ಎಚ್​ ವಿರುದ್ಧದ ಪಂದ್ಯದಲ್ಲಿ ಕೆಕೆಆರ್​ ಜಯ ಗಳಿಸಿತ್ತು. ಆಗ ಶಾರುಖ್ ಖಾನ್ ಅವರು ಇಡೀ ಗ್ರೌಂಡ್ ಸುತ್ತಾಡಿದ್ದರು. ಅಭಿಮಾನಿಗಳತ್ತ ಕೈ ಬೀಸಿದ್ದರು. ಆ ಬಳಿಕ ಅವರಿಗೆ ಅನಾರೋಗ್ಯ ಉಂಟಾಗಿದೆ. ಅವರು ಆಸ್ಪತ್ರೆಯಲ್ಲಿದ್ದಾರೆ.

ಶಾರುಖ್ ಖಾನ್ ಆರೋಗ್ಯ ಹೇಗಿದೆ? ಅಪ್​ಡೇಟ್ ಕೊಟ್ಟ ಜೂಹಿ ಚಾವ್ಲಾ
ಶಾರುಖ್
Follow us on

ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ (Shah Rukh Khan) ಅವರಿಗೆ ಏಕಾಏಕಿ ಅನಾರೋಗ್ಯ ಉಂಟಾಗಿದೆ. ಅವರಿಗೆ ಹೀಟ್ ಸ್ಟ್ರೋಕ್ ಹಾಗೂ ನಿರ್ಜಲೀಕರಣ ಉಂಟಾಗಿದೆ. ಈ ಕಾರಣಕ್ಕೆ ಅವರನ್ನು ಅಹಮದಾಬಾದ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಶಾರುಖ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಶೀಘ್ರವೇ ಅವರು ಡಿಸ್ಚಾರ್ಜ್ ಆಗಲಿದ್ದಾರೆ. ಚೆನ್ನೈನಲ್ಲಿ ನಡೆಯಲಿರುವ ಫಿನಾಲೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ಶಾರುಖ್ ಖಾನ್ ಒಡೆತನದ ಕೆಕೆಆರ್​ ತಂಡ ಐಪಿಎಲ್​ನಲ್ಲಿ ಫಿನಾಲೆ ತಲುಪಿದೆ. ಇತ್ತೀಚೆಗೆ ಅಹಮದಾಬಾದ್​ನಲ್ಲಿ ನಡೆದ ಎಸ್​ಆರ್​ಎಚ್​ ವಿರುದ್ಧದ ಪಂದ್ಯದಲ್ಲಿ ಕೆಕೆಆರ್​ ಜಯ ಗಳಿಸಿತ್ತು. ಆಗ ಶಾರುಖ್ ಖಾನ್ ಅವರು ಇಡೀ ಗ್ರೌಂಡ್ ಸುತ್ತಾಡಿದ್ದರು. ಅಭಿಮಾನಿಗಳತ್ತ ಕೈ ಬೀಸಿದ್ದರು. ಅಹಮದಾಬಾದ್​ನಲ್ಲಿ ಸಾಕಷ್ಟು ಸೆಖೆ ಇದೆ. ಈ ಕಾರಣಕ್ಕೆ ಅವರಿಗೆ ಸನ್ ಸ್ಟ್ರೋಕ್ ಆಗಿರಬಹುದು ಎಂದು ಊಹಿಸಲಾಗಿದೆ.

ಅಹಮದಾಬಾದ್​ನ ಕೆಡಿ ಆಸ್ಪತ್ರೆಯಲ್ಲಿ ಶಾರುಖ್ ಖಾನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟಿ ಹಾಗೂ ಕೆಕೆಆರ್​ನ ಸಹ ಮಾಲೀಕರಾದ ಜೂಹಿ ಚಾವ್ಲಾ ಕೂಡ ಆಸ್ಪತ್ರೆಗೆ ತೆರಳಿ ಶಾರುಖ್ ಖಾನ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಜೂಹಿ ಜೊತೆ ಅವರ ಪತಿ ಜಯ್ ಮೆಹ್ತಾ ಕೂಡ ಇದ್ದರು. ನ್ಯೂಸ್​18 ಇಂಗ್ಲಿಷ್ ಜೊತೆ ಮಾತನಾಡಿರುವ ಜೂಹಿ, ‘ಮೇ 21ರಂದು ಅವರಿಗೆ ಅನಾರೋಗ್ಯ ಕಾಡಿತ್ತು. ಆದಾಗ್ಯೂ ಅವರು ಮ್ಯಾಚ್​​ ವೀಕ್ಷಿಸಿದರು. ಈಗ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರು ಶೀಘ್ರವೇ ಸಂಪೂರ್ಣ ಚೇತರಿಕೆ ಕಾಣಲಿದ್ದಾರೆ. ಫಿನಾಲೆ ವೀಕ್ಷಿಸಲಿದ್ದಾರೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಕೆಕೆಆರ್ ಫೈನಲ್​ಗೆ, ತಂಡದ ಮಾಲೀಕ ಶಾರುಖ್ ಖಾನ್​ ಆಸ್ಪತ್ರೆಗೆ

ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಕೂಡ ಕೆಡಿ ಆಸ್ಪತ್ರೆಗೆ ತೆರಳಿ ಶಾರುಖ್ ಆರೋಗ್ಯ ವಿಚಾರಿಸಿದ್ದಾರೆ. ಈ ಮಧ್ಯೆ ಸುಹಾನಾ ಖಾನ್ ಅವರು ಮುಂಬೈಗೆ ಮರಳಿದ್ದು, ಅನನ್ಯಾ ಪಾಂಡೆ, ಶನಾಯಾ ಕಪೂರ್, ನವ್ಯಾ ನಂದ ಜೊತೆ ಖಾಸಗಿ ವಿಮಾನ ನಿಲ್ದಾಣ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.