ಶಾರುಖ್​ಗೆ ಅಪಘಾತ ಆಗಿತ್ತು ಅನ್ನೋದೇ ಸುಳ್ಳು? ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ ‘ಜವಾನ್’ ನಟ

|

Updated on: Jul 05, 2023 | 9:08 AM

‘ಶಾರುಖ್ ಖಾನ್ ಸಿನಿಮಾ ಒಂದರ ಶೂಟಿಂಗ್​ಗೆ ಲಾಸ್ ಏಂಜಲೀಸ್​ಗೆ ತೆರಳಿದ್ದರು. ಶೂಟಿಂಗ್ ವೇಳೆ ಸಂಭವಿಸಿದ ಅವಘಡದಿಂದ ಶಾರುಖ್ ಮೂಗಿಗೆ ಬಲವಾದ ಏಟು ಬಿದ್ದಿದೆ’ ಎಂದು ವರದಿ ಆಗಿತ್ತು.

ಶಾರುಖ್​ಗೆ ಅಪಘಾತ ಆಗಿತ್ತು ಅನ್ನೋದೇ ಸುಳ್ಳು? ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ ‘ಜವಾನ್’ ನಟ
ಶಾರುಖ್ ಖಾನ್
Follow us on

ಶಾರುಖ್ ಖಾನ್ (Shah Rukh Khan) ಅವರ ಅಭಿಮಾನಿಗಳು ಆತಂಕ್ಕೆ ಒಳಗಾಗುವಂಥ ಸುದ್ದಿ ಒಂದು ಹರಿದಾಡಿತ್ತು. ಶೂಟಿಂಗ್ ವೇಳೆ ಅವರ ಮೂಗಿಗೆ ಬಲವಾದ ಪೆಟ್ಟು ಬಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದರು ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ, ಇದು ಸುಳ್ಳು ಅನ್ನೋದು ಸಾಬೀತಾಗಿದೆ. ಶಾರುಖ್ ಖಾನ್ ಅವರು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಕಾಣಿಸಿಕೊಂಡಿದ್ದು, ಸರ್ಜರಿಗೆ ಒಳಗಾದ ಯಾವುದೇ ಗುರುತು ಅವರ ದೇಹದ ಮೇಲೆ ಇರಲಿಲ್ಲ. ಹೀಗಾಗಿ, ಅಪಘಾತ ಸುದ್ದಿ ಸುಳ್ಳೇ ಎನ್ನುವ ಪ್ರಶ್ನೆ ಮೂಡಿದೆ.

‘ಶಾರುಖ್ ಖಾನ್ ಸಿನಿಮಾ ಒಂದರ ಶೂಟಿಂಗ್​ಗೆ ಲಾಸ್ ಏಂಜಲೀಸ್​ಗೆ ತೆರಳಿದ್ದರು. ಶೂಟಿಂಗ್ ವೇಳೆ ಸಂಭವಿಸಿದ ಅವಘಡದಿಂದ ಶಾರುಖ್ ಮೂಗಿಗೆ ಬಲವಾದ ಏಟು ಬಿದ್ದಿದೆ’ ಎಂದು ಇಟೈಮ್ಸ್ ವರದಿ ಮಾಡಿತ್ತು. ಇಷ್ಟೇ ಅಲ್ಲ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಈಗ ಈ ಬಗ್ಗೆ ಅಪ್​ಡೇಟ್ ಸಿಕ್ಕಿದೆ. ಶಾರುಖ್ ಆರೋಗ್ಯವಾಗಿದ್ದಾರೆ.

ಜುಲೈ 4ರ ರಾತ್ರಿ ಶಾರುಖ್ ಖಾನ್ ಅವರು ಮುಂಬೈ ವಿಮಾನ ನಿಲ್ದಾಣದಿಂದ ಹೊರ ಬರುವಾಗ ಕಾಣಿಸಿಕೊಂಡಿದ್ದಾರೆ. ಅವರ ಮೂಗು ಸರಿಯಾಗಿಯೇ ಇದೆ. ಹೀಗಾಗಿ ಅವರಿಗೆ ಅಪಘಾತ ಆಗಿತ್ತು ಎಂಬ ಸುದ್ದಿ ಎಷ್ಟು ಸತ್ಯ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ. ಇನ್ನೂ ಕೆಲವರು ‘ಮೂಗಿನ ಒಳಭಾಗದಲ್ಲಿ ಗಾಯ ಉಂಟಾಗಿರಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Shah Rukh Khan: ಅಮೆರಿಕದಲ್ಲಿ ಶೂಟಿಂಗ್ ವೇಳೆ ಅವಘಡ; ನಟ ಶಾರುಖ್ ಖಾನ್ ಮೂಗಿಗೆ ಬಲವಾದ ಪೆಟ್ಟು

ಒಂದು ವರ್ಗದ ಜನರು ಶಾರುಖ್ ಖಾನ್ ಅವರು ಆರೋಗ್ಯವಾಗಿ ಮರಳಿ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ‘ಕಿಂಗ್ ಈಸ್ ಬ್ಯಾಕ್’ ಎಂದು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಅವರು ಸದ್ಯ ‘ಪಠಾಣ್’ ಗೆಲುವಿನ ಖುಷಿಯಲ್ಲಿ ಇದ್ದಾರೆ. ‘ಜವಾನ್’ ಸಿನಿಮಾ ಸೆಪ್ಟೆಂಬರ್ 7ಕ್ಕೆ ರಿಲೀಸ್ ಆಗಲಿದೆ. ಇದಲ್ಲದೆ ‘ಡಂಕಿ’ ಚಿತ್ರದ ಕೆಲಸಗಳಲ್ಲೂ ಅವರು ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ