ರಸ್ತೆ ಬದಿಯ ತಿಂಡಿಗಳನ್ನು ಮಿಸ್ ಮಾಡಿಕೊಳ್ತಾರಾ ಶಾರುಖ್ ಖಾನ್? ಸ್ಟಾರ್​ಡಂ ಬಗ್ಗೆ ಮಾತನಾಡಿದ್ದ ಕಿಂಗ್ ಖಾನ್

| Updated By: ರಾಜೇಶ್ ದುಗ್ಗುಮನೆ

Updated on: Oct 08, 2023 | 8:30 AM

ಸಂದರ್ಶಕರೊಬ್ಬರು ಶಾರುಖ್​ಗೆ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ‘ಶಾರುಖ್ ಖಾನ್ ಅವರೇ ನೀವು ಸ್ಟಾರ್ ಆಗಿದ್ದೀರಿ. ಈ ಕಾರಣದಿಂದಲೇ ನೀವು ಕೆಲವು ವಿಚಾರಗಳನ್ನು ಮಿಸ್ ಮಾಡಿಕೊಂಡರಬಹುದು ಅಲ್ಲವೇ’ ಎಂದು ಕೇಳಲಾಗಿದೆ. ಇದಕ್ಕೆ ಶಾರುಖ್ ಖಾನ್ ಕಡೆಯಿಂದ ಇಲ್ಲ ಎನ್ನುವ ಉತ್ತರ ಬಂದಿತ್ತು.

ರಸ್ತೆ ಬದಿಯ ತಿಂಡಿಗಳನ್ನು ಮಿಸ್ ಮಾಡಿಕೊಳ್ತಾರಾ ಶಾರುಖ್ ಖಾನ್? ಸ್ಟಾರ್​ಡಂ ಬಗ್ಗೆ ಮಾತನಾಡಿದ್ದ ಕಿಂಗ್ ಖಾನ್
ಶಾರುಖ್
Follow us on

ಸ್ಟಾರ್ ಪಟ್ಟ ಸಿಕ್ಕ ನಂತರದಲ್ಲಿ ಬೇಡ ಬೇಡ ಎಂದರೂ ಒಂದಷ್ಟು ಕಟ್ಟುಪಾಡುಗಳನ್ನು ಪಾಲಿಸಲೇಬೇಕು. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಭದ್ರತೆ ಬೇಕೇ ಬೇಕು. ಇಲ್ಲದಿದ್ದರೆ ಅಭಿಮಾನಿಗಳು ಮುತ್ತಿಗೆ ಹಾಕುತ್ತಾರೆ. ಇನ್ನು, ರಸ್ತೆ ಬದಿಯ ಅಂಗಡಿಗಳಲ್ಲಿ ಜನಸಾಮಾನ್ಯರಂತೆ ನಿಂತು ತಿನ್ನಲು ಅವರ ಬಳಿ ಸಾಧ್ಯವೇ ಇಲ್ಲ. ಆರಂಭದಲ್ಲಿ ಜನಸಾಮಾನ್ಯರಂತೆ ಇದ್ದು ಆ ಬಳಿಕ ಸ್ಟಾರ್ ಆದಾಗ ಸಣ್ಣ ಪುಟ್ಟ ವಿಚಾರಗಳನ್ನು ಮಿಸ್ ಮಾಡಿಕೊಂಡವರು ಅನೇಕರಿದ್ದಾರೆ. ಈ ಕಾರಣದಿಂದಲೇ ನಟ ಕಾರ್ತಿಕ್ ಆರ್ಯನ್ (Kartik Aryan) ಆಗಾಗ ರಸ್ತೆ ಬದಿ ಅಂಗಡಿಗಳಿಗೆ ತೆರಳಿ ಇಷ್ಟವಾದದ್ದನ್ನು ತಿಂದು ಬರುತ್ತಾರೆ. ಶಾರುಖ್ ಖಾನ್ (Shah Rukh Khan) ಕೂಡ ಸಾಮಾನ್ಯ ವ್ಯಕ್ತಿ ಆಗಿದ್ದವರು. ಅವರು ಈಗ ದೊಡ್ಡ ಸ್ಟಾರ್ ಆಗಿದ್ದಾರೆ. ಅವರು ಎಂದಿಗೂ ಸಾಮಾನ್ಯರಂತೆ ಬದುಕುವುದನ್ನು ಮಿಸ್ ಮಾಡಿಕೊಂಡೇ ಇಲ್ಲವಂತೆ.

ಶಾರುಖ್ ಖಾನ್ ಅವರು ಹಲವು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿ ಇದ್ದಾರೆ. ಹಲವು ಸಿನಿಮಾಗಳನ್ನು ಮಾಡಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ಈ ವರ್ಷ ರಿಲೀಸ್ ಆದ ಅವರ ನಟನೆಯ ‘ಜವಾನ್’ ಹಾಗೂ ‘ಪಠಾಣ್’ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇದು ಶಾರುಖ್ ಖಾನ್ ಖುಷಿಯನ್ನು ಹೆಚ್ಚಿಸಿದೆ. ಅವರ ಸ್ಟಾರ್​ಡಂ ದೊಡ್ಡದಾಗಿದೆ. ಶಾರುಖ್ ಖಾನ್ ಅವರ ಹಳೆಯ ವಿಡಿಯೋ ಒಂದು ಈಗ ವೈರಲ್ ಆಗಿದೆ.

ಸಂದರ್ಶಕರೊಬ್ಬರು ಶಾರುಖ್​ಗೆ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ‘ಶಾರುಖ್ ಖಾನ್ ಅವರೇ ನೀವು ಸ್ಟಾರ್ ಆಗಿದ್ದೀರಿ. ಈ ಕಾರಣದಿಂದಲೇ ನೀವು ಕೆಲವು ವಿಚಾರಗಳನ್ನು ಮಿಸ್ ಮಾಡಿಕೊಂಡರಬಹುದು ಅಲ್ಲವೇ’ ಎಂದು ಕೇಳಲಾಗಿದೆ. ಇದಕ್ಕೆ ಶಾರುಖ್ ಖಾನ್ ಕಡೆಯಿಂದ ಇಲ್ಲ ಎನ್ನುವ ಉತ್ತರ ಬಂದಿತ್ತು. ‘ಎಲ್ಲರಂತೆ ಸಮುದ್ರ ತೀರಕ್ಕೆ ಹೋಗಿ ಅಲ್ಲಿರುವ ಅಂಗಡಿಯಲ್ಲಿ ಪಾವ್ ಬಾಜಿ ತಿನ್ನಬೇಕು ಎಂದು ನನಗೆ ಯಾವಾಗಲೂ ಅನಿಸುವುದಿಲ್ಲ. ನನಗೆ ಆ ರೀತಿಯ ಪಾವ್ ಬಾಜಿಯೇ ಬೇಡ’ ಎಂದು ಮಾತು ಆರಂಭಿಸಿದ್ದಾರೆ ಶಾರುಖ್ ಖಾನ್.

‘ನನಗೆ ಲೋಕಲ್ ಟ್ರೇನ್​ನಲ್ಲಿ ಹೋಗಬೇಕು ಅನಿಸುವುದಿಲ್ಲ. ಈ ರೀತಿಯ ಯಾವುದೇ ಆಸೆಗಳು ನನಗೆ ಇಲ್ಲ. ಈ ಕಾರಣದಿಂದಲೇ ನಾನು ಸ್ಟಾರ್ ಆಗಿದ್ದೀನಿ. ಈಗ ಸ್ಟಾರ್ ಆದ ಬಳಿಕ ನನಗೆ ಸಾಮಾನ್ಯ ಜೀವನ ನಡೆಸಬೇಕು ಎಂದು ಅನಿಸುವುದೇ ಇಲ್ಲ. ನಾನು ಐದು ಬಾಡಿಗಾರ್ಡ್​ಗಳ ಜೊತೆ ಓಡಾಡುತ್ತೇನೆ. ಐಷಾರಾಮಿ ಕಾರಿನಲ್ಲಿ ಸುತ್ತಾಡುತ್ತೇನೆ. ಖಾಸಗಿ ಜೆಟ್​ನಲ್ಲಿ ಪ್ರಯಾಣಿಸುತ್ತೇನೆ. ಲಕ್ಷಾಂತರ ಮಂದಿ ನನ್ನ ಹೆಸರನ್ನು ಕೂಗುತ್ತಾರೆ. ನನಗೆ ಐಸ್​ಕ್ರೀಮ್ ಬೇಕು ಎಂದು ಹೇಳಿದರೆ ಐದು ಫ್ಲೇವರ್ ಸಿಗುತ್ತದೆ. ಫೈ ​ಸ್ಟಾರ್ ಹೋಟೆಲ್​ನಲ್ಲಿ ಆರಾಮಾಗಿ ಕೂರುತ್ತೇನೆ. ನನಗೆ ಬೀಚ್​ ಸೈಡ್​​ನಿಂದ ಪಾವ್ ಬಾಜಿ ಬೇಕು ಎಂದು ಹೇಳಿದರೆ ಪಾವ್ ಬಾಜಿ ಜೊತೆ ಒಂದು ಡಬ್ಬದಲ್ಲಿ ಮರಳನ್ನೂ ಕಳುಹಿಸುತ್ತಾರೆ’ ಎಂದು ಹೇಳುವ ಮೂಲಕ ಸ್ಟಾರ್​ಡಂನ ಎಂಜಾಯ್ ಮಾಡುತ್ತಿರುವುದಾಗಿ ಶಾರುಖ್ ಹೇಳಿಕೊಂಡಿದ್ದರು.

ಇದನ್ನೂ ಓದಿ:  ರಿವೀಲ್ ಆಯ್ತು ‘ಡಂಕಿ’ ಸಿನಿಮಾದ ಕಥೆ; ಶಾರುಖ್ ಖಾನ್ ಪಾತ್ರ ಹೇಗಿರಲಿದೆ?

ಶಾರುಖ್ ಖಾನ್​ ಮುಂಬೈನಲ್ಲಿ ಮನ್ನತ್ ಹೆಸರಿನ ಮನೆ ಹೊಂದಿದ್ದಾರೆ. ಈ ಮನೆ ಎದರು ಅವರು ಬಂದು ನಿಂತರೆ ಸಾವಿರಾರು ಮಂದಿ ನೆರೆಯುತ್ತಾರೆ. ಇವರ ಕಡೆ ಕೈ ಬೀಸಿ ಸಂತಸ ಹೊರ ಹಾಕುತ್ತಾರೆ. ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ 1100+ ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಚಿತ್ರವನ್ನು ಅಟ್ಲಿ ನಿರ್ದೇಶನ ಮಾಡಿದ್ದಾರೆ. ಸದ್ಯ ರಾಜ್​ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಸಿನಿಮಾ ಕೆಲಸದಲ್ಲಿ ಅವರು ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ