ನಟ ಶಾರುಖ್ ಖಾನ್ ಅವರು ‘ಡಂಕಿ’ (Dunki) ಸಿನಿಮಾದಲ್ಲಿ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮುಂತಾದವರ ಜೊತೆ ತೆರೆ ಹಂಚಿಕೊಂಡಿದ್ದಾರೆ. ನಿರೀಕ್ಷಿಸಿದ ಮಟ್ಟದಲ್ಲಿ ಈ ಸಿನಿಮಾ ಕಲೆಕ್ಷನ್ ಮಾಡಿಲ್ಲ. ಹಾಗಿದ್ದರೂ ಕೂಡ ಬಾಕ್ಸ್ ಆಫೀಸ್ ಗಳಿಕೆಯಲ್ಲಿ 130 ಕೋಟಿ ರೂಪಾಯಿ ದಾಟುವಲ್ಲಿ ಯಶಸ್ವಿ ಆಗಿದೆ. ಅದೇ ಖುಷಿಯಲ್ಲಿ ಶಾರುಖ್ ಖಾನ್ (Shah Rukh Khan) ಅವರು ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಬಜೆಟ್ (Dunki Movie Budget) ಬಗ್ಗೆ ಪ್ರಶ್ನೆ ಮಾಡಿದವರಿಗೆ ಅವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
‘ಡಂಕಿ ಸಿನಿಮಾದ ಬಜೆಟ್ ಬಗ್ಗೆ ಅನೇಕ ಗಾಸಿಪ್ ಇದೆ ಸರ್. ಕೆಲವರು 85 ಕೋಟಿ ರೂಪಾಯಿ ಅಂತಾರೆ. ಕೆಲವರು 120 ಕೋಟಿ ರೂಪಾಯಿ ಅಂತಾರೆ. ಇನ್ನೂ ಕೆಲವರು 350 ಕೋಟಿ ರೂಪಾಯಿ ಅಂತ ಹೇಳುತ್ತಿದ್ದಾರೆ. ಹಾಗಾಗಿ ಡಂಕಿ ಮಾಡಿದವರ ಬಳಿಯೇ ನೇರವಾಗಿ ಕೇಳೋಣ ಅಂದುಕೊಂಡೆ’ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಈ ಪ್ರಶ್ನೆಗೆ ಶಾರುಖ್ ಖಾನ್ ಅವರು ನಿಖರ ಉತ್ತರ ನೀಡಿಲ್ಲ.
Dunki Movie Review: ನಗಿಸಿ, ಅಳಿಸಿ, ಸಂದೇಶ ನೀಡುವ ಟಿಪಿಕಲ್ ರಾಜ್ಕುಮಾರ್ ಹಿರಾನಿ ಸಿನಿಮಾ ‘ಡಂಕಿ’
‘ಅಣ್ಣ.. ಯಾರದ್ದು ಬಿಸ್ನೆಸ್ ಇದೆಯೋ ಅವರೇ ಅದನ್ನು ಮಾಡಲಿ. ನೀನು ನಿನ್ನ ಸಮಯವನ್ನು ಬೇರೆ ಯಾವುದಾದರೂ ವಿಷಯಕ್ಕೆ ನೀಡು’ ಎಂದು ಶಾರುಖ್ ಖಾನ್ ಅವರು ಉತ್ತರಿಸಿದ್ದಾರೆ. ಆ ಮೂಲಕ ಅವರು ನಿಜವಾದ ಬಜೆಟ್ ಏನು ಎಂಬುದನ್ನು ಬಹಿರಂಗ ಮಾಡಿಲ್ಲ. ಈ ಸಿನಿಮಾಗೆ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಹಾಗೂ ರಾಜ್ಕುಮಾರ್ ಹಿರಾನಿ ಅವರು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
Bhai jiska business hai usse karne de. Apna time kisi aur cheez mein laga please. #Dunki https://t.co/e3eRK7BeEO
— Shah Rukh Khan (@iamsrk) December 27, 2023
ಡಿಸೆಂಬರ್ 21ರಂದು ‘ಡಂಕಿ’ ಸಿನಿಮಾ ಬಿಡುಗಡೆ ಆಯಿತು. ಮರುದಿನವೇ (ಡಿಸೆಂಬರ್ 22) ‘ಸಲಾರ್’ ಚಿತ್ರ ತೆರೆಕಂಡಿತು. ಹಾಗಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಕ್ಲ್ಯಾಶ್ ಏರ್ಪಟ್ಟಿತು. ‘ಡಂಕಿ’ ಸಿನಿಮಾ ವಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದರಿಂದ ಹೆಚ್ಚು ಕಲೆಕ್ಷನ್ ಆಗಲಿಲ್ಲ. ಈ ಮೊದಲು ಬಿಡುಗಡೆ ಆಗಿದ್ದ ಶಾರುಖ್ ಖಾನ್ ಅವರ ‘ಜವಾನ್’ ಮತ್ತು ‘ಪಠಾಣ್’ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡಿದ್ದವು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.