ಶಾರುಖ್ ಖಾನ್ (Shah Rukh Khan) ಅವರಿಗೆ ದೊಡ್ಡ ಮಟ್ಟದ ಸ್ಟಾರ್ಗಿರಿ ಇದೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಕಳೆದ ವರ್ಷ ಅವರ ನಟನೆಯ ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಿ ಗೆದ್ದಿವೆ. ಅವರ ಖ್ಯಾತಿ ಎಷ್ಟೇ ಹೆಚ್ಚಿದರೂ ಅವರು ಸಿಂಪಲ್ ಆಗಿರೋಕೆ ಪ್ರಯತ್ನಿಸುತ್ತಾರೆ. ದಕ್ಷಿಣದ ಈ ಸೂಪರ್ ಸ್ಟಾರ್ ಜೊತೆ ಅವರಿಗೆ ಊಟ ಮಾಡೋ ಆಸೆ ಇದೆ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ಶಾರುಖ್ ಖಾನ್ಗೆ ಮಲಯಾಳಂ ನಟ ಮೋಹನ್ಲಾಲ್ ಬಗ್ಗೆ ವಿಶೇಷ ಗೌರವ ಇದೆ. ಇತ್ತೀಚೆಗೆ ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದ ‘ಜಿಂದಾ ಬಂದಾ..’ ಹಾಡಿಗೆ ಮೋಹನ್ಲಾಲ್ ಅವರು ಡ್ಯಾನ್ಸ್ ಮಾಡಿದ್ದರು. ಇದನ್ನು ಶಾರುಖ್ ಖಾನ್ ಅಭಿಮಾನಿ ಬಳಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಇದಕ್ಕೆ ಶಾರುಖ್ ಖಾನ್ ಅವರು ಉತ್ತರಿಸಿದ್ದಾರೆ.
‘ಜಿಂದಾ ಬಂದಾ ಹಾಡಿಗೆ ಮೋಹನ್ ಲಾಲ್ ಅವರ ಎಲೆಕ್ಟ್ರಿಫೈ ಡ್ಯಾನ್ಸ್’ ಎಂದು ಶಾರುಖ್ ಖಾನ್ ಯೂನಿವರ್ಸ್ ಫ್ಯಾನ್ಸ್ ಕ್ಲಬ್ ಪೋಸ್ಟ್ ಒಂದನ್ನು ಹಂಚಿಕೊಂಡಿತ್ತು. ಇದಕ್ಕೆ ಶಾರುಖ್ ಖಾನ್ ಅವರು ಉತ್ತರ ನೀಡಿದ್ದಾರೆ. ‘ಈ ಹಾಡನ್ನು ಮತ್ತಷ್ಟು ವಿಶೇಷ ಮಾಡಿದ್ದಕ್ಕೆ ಮೋಹನ್ಲಾಲ್ ಸರ್ ಅವರಿಗೆ ಧನ್ಯವಾದ’ ಎಂದು ಶಾರುಖ್ ಖಾನ್ ಬರೆದುಕೊಂಡಿದ್ದಾರೆ. ‘ನಿಮ್ಮ ಡ್ಯಾನ್ಸ್ನ ಅರ್ಧದಷ್ಟು ನಾನು ಮಾಡಿದ್ದೇನೆ. ಮನೆಯಲ್ಲಿ ನಿಮ್ಮ ಜೊತೆ ಊಟ ಮಾಡಲು ಕಾಯುತ್ತಿದ್ದೇನೆ. ನೀವು ಒರಿಜಿನಲ್ ಗ್ಯಾಂಗ್ಸ್ಟರ್ ಜಿಂದಾ ಬಂದಾ’ ಎಂದಿದ್ದಾರೆ ಶಾರುಖ್ ಖಾನ್.
ಇದನ್ನೂ ಓದಿ: ಶಾರುಖ್ ಖಾನ್ ಹೆಸರಿಗಷ್ಟೇ ಗ್ಲೋಬಲ್ ಸ್ಟಾರ್; ಅವರು ನಡೆದುಕೊಳ್ಳೋದು ಹೇಗೆ ನೋಡಿ
ಸದ್ಯ ಮೋಹನ್ಲಾಲ್ ಅವರ ಡ್ಯಾನ್ಸ್ ವಿಡಿಯೋ ಸಖತ್ ವೈರಲ್ ಆಗಿದೆ. ಅವರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಮೋಹನ್ಲಾಲ್ ಅವರು ವಯಸ್ಸಲ್ಲಿ ಶಾರುಖ್ ಖಾನ್ಗಿಂತ ಹಿರಿಯರು. ಹೀಗಾಗಿ, ಅವರ ಮೇಲೆ ಶಾರುಖ್ ಖಾನ್ ವಿಶೇಷ ಗೌರವ ತೋರಿಸುತ್ತಾರೆ. ಸದ್ಯ ಶಾರುಖ್ ಖಾನ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ನ ಐಪಿಎಲ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಅವರು ಹೊಸ ಸಿನಿಮಾ ಘೋಷಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.