ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಆಯ್ತಾ ‘ಡಂಕಿ’ ಚಿತ್ರದ ಫಸ್ಟ್ ಹಾಫ್? ಈ ರಿಪೋರ್ಟ್ ನೋಡಿ..
Dunki First Half Review: ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮಾಡಿರುವ ‘ಡಂಕಿ’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮುಂತಾದವರು ನಟಿಸಿದ್ದಾರೆ. ಇಂದು (ಡಿ.21) ಈ ಸಿನಿಮಾ ಬಿಡುಗಡೆ ಆಗಿದ್ದು, ಮುಂಜಾನೆಯೇ ದೇಶಾದ್ಯಂತ ಶೋ ಆರಂಭ ಆಗಿದೆ. ‘ಡಂಕಿ’ ಫಸ್ಟ್ ಹಾಫ್‌ನಲ್ಲಿ ಏನೆಲ್ಲ ಇದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ..
ಶಾರುಖ್ ಖಾನ್
Follow us on
ಈ ವರ್ಷ ಶಾರುಖ್ ಖಾನ್ (Shah Rukh Khan) ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿವೆ. ಈ ಮೊದಲು ತೆರೆಕಂಡಿದ್ದ ‘ಜವಾನ್’, ‘ಪಠಾಣ್’ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿವೆ. ಈಗ ಮೂರನೇ ಚಿತ್ರ ‘ಡಂಕಿ’ (Dunki Movie) ರಿಲೀಸ್ ಆಗಿದೆ. ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಲು ಹಲವು ಕಾರಣಗಳಿವೆ. ರಾಜ್‌ಕುಮಾರ್ ಹಿರಾನಿ ಅವರಂತಹ ಸ್ಟಾರ್ ನಿರ್ದೇಶಕರ ಜೊತೆ ಶಾರುಖ್ ಖಾನ್ ಇದೇ ಮೊದಲ ಬಾರಿಗೆ ಕೈ ಜೋಡಿಸಿದ್ದಾರೆ. ಒಂದು ವಿಶೇಷವಾದ ಕಾನ್ಸೆಪ್ಟ್ ಇಟ್ಟುಕೊಂಡು ರಾಜ್‌ಕುಮಾರ್ ಹಿರಾನಿ (Rajkumar Hirani) ಅವರು ಈ ಸಿನಿಮಾ ಮಾಡಿದ್ದಾರೆ. ಇಂದು (ಡಿಸೆಂಬರ್ 21) ಬಿಡುಗಡೆ ಆಗಿರುವ ‘ಡಂಕಿ’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮುಂತಾದವರು ನಟಿಸಿದ್ದಾರೆ. ಮುಂಜಾನೆಯೇ ದೇಶಾದ್ಯಂತ ಈ ಚಿತ್ರದ ಶೋ ಆರಂಭ ಆಗಿದೆ. ‘ಡಂಕಿ’ ಫಸ್ಟ್ ಹಾಫ್‌ನಲ್ಲಿ ಏನೆಲ್ಲ ಇದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ…
ಹಾರ್ಡಿ ಸಿಂಗ್ ಎಂಬ ಪಾತ್ರ ಮಾಡಿರುವ ಶಾರುಖ್ ಖಾನ್. ವಯಸ್ಸಾದ ವ್ಯಕ್ತಿಯ ಗೆಟಪ್‌ನಲ್ಲಿ ಎಂಟ್ರಿ ನೀಡಿದ ಕಿಂಗ್ ಖಾನ್. ಅವರ ಎಂಟ್ರಿ ಕ್ಲಾಸ್ ಆಗಿದೆ.
ಭಾರತ ಬಿಟ್ಟು ಇಂಗ್ಲೆಂಡ್‌ಗೆ ಹೋಗಿ ಸೆಟ್ಲ್ ಆಗಬೇಕು ಎಂದು ಕನಸು ಕಂಡವರ ಕಥೆ ಹೇಳುತ್ತದೆ ‘ಡಂಕಿ’ ಸಿನಿಮಾ.
ಕಥೆಯ ಆರಂಭದಲ್ಲಿ ಕಾಮಿಡಿ ಮತ್ತು ಎಮೋಷನ್‌ಗೆಹೆಚ್ಚು ಆದ್ಯತೆ ನೀಡಿದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ.
ಕಥೆಗೆ ಮೇಜರ್ ಟರ್ನ್ ನೀಡುವ ಪಾತ್ರದಲ್ಲಿ ಕಾಣಿಸಿಕೊಂಡ ನಟ ವಿಕ್ಕಿ ಕೌಶಲ್. ಅವರ ನಟನೆ ಇಷ್ಟವಾಗುತ್ತದೆ.
ಶಾರುಖ್ ಖಾನ್, ತಾಪ್ಸಿ ಪನ್ನು ನಡುವಿನ ಕೆಮಿಸ್ಟ್ರಿ ಡಿಫರೆಂಟ್ ಆಗಿದೆ. ‘ಲುಟ್ ಪುಟ್ ಗಯಾ..’ ಹಾಡು ಫಸ್ಟ್ ಹಾಫ್‌ನಲ್ಲೇ ಮನರಂಜನೆ ನೀಡುತ್ತದೆ.
ಪಂಜಾಬ್‌ನಲ್ಲಿ ನಡೆಯುವ ಫಸ್ಟ್ ಹಾಫ್ ಕಥೆ. ಹೀರೋಗಿರಿ ಬದಿಗೊತ್ತಿ ಕಾಮನ್ ಮ್ಯಾನ್ ರೀತಿಯಲ್ಲಿ ಅಭಿಮಾನಿಗಳಿಗೆ ಇಷ್ಟವಾಗುವ ಶಾರುಖ್ ಖಾನ್.
ಇಂಗ್ಲಿಷ್ ಟೀಚರ್ ಪಾತ್ರದಲ್ಲಿ ನಗುವಿನ ಕಚಗುಳಿ ಇಡುವ ನಟ ಬೊಮನ್ ಇರಾನಿ.
ಇಂಟರ್‌ವಲ್‌ನಲ್ಲಿ ಭಾವನಾತ್ಮಕ ಟ್ವಿಸ್ಟ್ ಪಡೆದುಕೊಳ್ಳುತ್ತದೆ ‘ಡಂಕಿ’ ಕಹಾನಿ. ಅಸಲಿ ಡಾಂಕಿ ಜರ್ನಿ ಶುರುವಾಗುವುದು ಸೆಕೆಂಡ್ ಹಾಫ್‌ನಲ್ಲಿ.
‘ಡಂಕಿ’ ಫಸ್ಟ ಹಾಫ್‌ನಲ್ಲಿ ಯಾವುದೇ ಆ್ಯಕ್ಷನ್ ದೃಶ್ಯಗಳಿಲ್ಲ. ಮಾಸ್ ಮನರಂಜನೆ ಬಯಸುವ ಪ್ರೇಕ್ಷಕರಿಗೆ ಕೊಂಚ ನಿರಾಸೆ ಆಗಬಹುದು.
ತಮ್ಮ ಈ ಹಿಂದಿನ ಸಿನಿಮಾಗಳ ರೀತಿಯೇ ಒಂದು ಗಂಭೀರವಾದ ವಿಷಯವನ್ನು ಕಾಮಿಡಿ ಮೂಲಕ ಪ್ರಸ್ತುತಪಡಿಸಿದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ.