ಭಾರತದಲ್ಲಿ 410 ಕೋಟಿ ರೂ. ದಾಟಿತು ‘ಜವಾನ್​’ ಕಲೆಕ್ಷನ್​; ವಿಶ್ವಾದ್ಯಂತ 700 ಕೋಟಿ

|

Updated on: Sep 16, 2023 | 11:51 AM

10ನೇ ದಿನ ಕೂಡ ‘ಜವಾನ್​’ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಗೌರಿ-ಗಣೇಶ ಹಬ್ಬದ ರಜೆಯಲ್ಲಿ ಭಾರಿ ಕಲೆಕ್ಷನ್​ ಆಗುವ ಸಾಧ್ಯತೆ ಇದೆ. ಶಾರುಖ್​ ಖಾನ್​ ನಟನೆಯ ಈ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ. ಇಂಡಿಯನ್​ ಬಾಕ್ಸ್​ ಆಫೀಸ್​ನಲ್ಲಿ 410 ಕೋಟಿ ರೂಪಾಯಿಗೂ ಹೆಚ್ಚು ಕಮಾಯಿ ಮಾಡಿ ಮುನ್ನುಗ್ಗುತ್ತಿದೆ.

ಭಾರತದಲ್ಲಿ 410 ಕೋಟಿ ರೂ. ದಾಟಿತು ‘ಜವಾನ್​’ ಕಲೆಕ್ಷನ್​; ವಿಶ್ವಾದ್ಯಂತ 700 ಕೋಟಿ
ಶಾರುಖ್​ ಖಾನ್​
Follow us on

ಅಂದುಕೊಂಡ ರೀತಿಯೇ ‘ಜವಾನ್’ ಸಿನಿಮಾ (Jawan Movie) ಸೂಪರ್ ಹಿಟ್​ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಆರ್ಭಟಿಸುತ್ತಿದೆ. ಶಾರುಖ್​ ಖಾನ್​ (Shah Rukh Khan) ಅವರ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ಮೆರುಗು ಹೆಚ್ಚಿದೆ. ಬಿಡುಗಡೆಯಾಗಿ 9 ದಿನ ಕಳೆದರೂ ಕೂಡ ಈ ಸಿನಿಮಾ ಬಹುಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಿದೆ. ಎರಡನೇ ವೀಕೆಂಡ್​ನಲ್ಲಿ ಇನ್ನೂ ಹೆಚ್ಚಿನ ಕಲೆಕ್ಷನ್​ ಆಗುವ ನಿರೀಕ್ಷೆ ಇದೆ. ಅಲ್ಲದೇ, ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಜನರು ಈ ಸಿನಿಮಾವನ್ನು ಮುಗಿಬಿದ್ದು ನೋಡುವ ಸಾಧ್ಯತೆ ಇದೆ. ಭಾರತದ ಬಾಕ್ಸ್​ ಆಫೀಸ್​ನಲ್ಲಿ ಜವಾನ್​’ ಸಿನಿಮಾದ ಕಲೆಕ್ಷನ್​ (Jawan Box Office Collection) 410 ಕೋಟಿ ರೂಪಾಯಿ ಆಗಿದೆ. ವಿಶ್ವಾದ್ಯಂತ ಈ ಚಿತ್ರ 700 ಕೋಟಿ ರೂಪಾಯಿ ದಾಟಿದೆ. ಇದರಿಂದ ಶಾರುಖ್​ ಖಾನ್​ ಅಭಿಮಾನಿಗಳಿಗೆ ಸಖತ್​ ಖುಷಿ ಆಗಿದೆ.

2023ರ ವರ್ಷ ಶಾರುಖ್​ ಖಾನ್​ ಪಾಲಿಗೆ ತುಂಬ ಸ್ಪೆಷಲ್​ ಆಗಿದೆ. ಈ ವರ್ಷ ಆರಂಭದಲ್ಲಿ ‘ಪಠಾಣ್​’ ಸಿನಿಮಾ ಬಿಡುಗಡೆ ಆಯಿತು. ಆ ಚಿತ್ರಕ್ಕೂ ದೊಡ್ಡ ಮಟ್ಟದ ಕಲೆಕ್ಷನ್​ ಆಗಿತ್ತು. ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಆ ಸಿನಿಮಾ ಅಬ್ಬರಿಸಿತ್ತು. ಅದೇ ರೀತಿ ಈಗ ‘ಜವಾನ್​’ ಸಿನಿಮಾ ಕೂಡ ಅತ್ಯುತ್ತಮವಾಗಿ ಕಲೆಕ್ಷನ್​ ಮಾಡುತ್ತಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಅವರು ಭರ್ಜರಿ ಆ್ಯಕ್ಷನ್​ ಮೆರೆದಿದ್ದಾರೆ. ದ್ವಿಪಾತ್ರದಲ್ಲಿ ಅವರು ಮಿಂಚು ಹರಿಸಿದ್ದಾರೆ. ಇದು ಅಭಿಮಾನಿಗಳಿಗೆ ಇಷ್ಟವಾಗಿದೆ.

ಇದನ್ನೂ ಓದಿ: ದಳಪತಿ ವಿಜಯ್​ ಹೆಸರಲ್ಲಿ ಪ್ರಿಯಾಮಣಿಗೆ ಮೋಸ ಮಾಡಿದ ‘ಜವಾನ್​’ ನಿರ್ದೇಶಕ ಅಟ್ಲಿ

‘ಜವಾನ್​’ ಚಿತ್ರದಲ್ಲಿ ಬಹುತಾರಾಗಣ ಇದೆ. ಶಾರುಖ್​ ಖಾನ್​ಗೆ ಜೋಡಿಯಾಗಿ ನಯನತಾರಾ ನಟಿಸಿದ್ದಾರೆ. ಅಲ್ಲದೇ ದೀಪಿಕಾ ಪಡುಕೋಣೆ, ಪ್ರಿಯಾಮಣಿ, ವಿಜಯ್​ ಸೇತುಪತಿ, ಸುನೀಲ್​ ಗ್ರೋವರ್​ ಮುಂತಾದ ಪ್ರತಿಭಾವಂತ ಕಲಾವಿದರು ಕೂಡ ಇದರಲ್ಲಿ ನಟಿಸಿದ್ದಾರೆ. ಎಲ್ಲರಿಗೂ ಈ ಸಿನಿಮಾದಿಂದ ಯಶಸ್ಸು ಸಿಕ್ಕಿದೆ. ಆ ಗೆಲುವನ್ನು ಎಲ್ಲರೂ ಸಂಭ್ರಮಿಸುತ್ತಿದ್ದಾರೆ. ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ‘ಜವಾನ್​’ ಸಿನಿಮಾ ಬಿಡುಗಡೆಯಾಗಿ ಜನಮೆಚ್ಚುಗೆ ಪಡೆದಿದೆ.

ಇದನ್ನೂ ಓದಿ: ‘ಜವಾನ್​’ ಚಿತ್ರದ ವಿಮರ್ಶೆ ತಿಳಿಸಿದ ಅಲ್ಲು ಅರ್ಜುನ್​; ಪ್ರತಿಯೊಬ್ಬರಿಗೂ ಮೆಚ್ಚುಗೆ ಸೂಚಿಸಿದ ನಟ

ಜನಸಾಮಾನ್ಯರಿಗೆ ಮಾತ್ರವಲ್ಲದೇ ಸೆಲೆಬ್ರಿಟಿಗಳಿಗೆ ಕೂಡ ‘ಜವಾನ್​’ ಸಿನಿಮಾ ಇಷ್ಟ ಆಗಿದೆ. ಇತ್ತೀಚೆಗಷ್ಟೇ ನಟ ಅಲ್ಲು ಅರ್ಜುನ್​ ಅವರು ಈ ಸಿನಿಮಾ ನೋಡಿ ತಮ್ಮ ಅನಿಸಿಕೆ ಹಂಚಿಕೊಂಡರು. ಎಲ್ಲರ ನಟನೆಗೆ ಅವರು ಭೇಷ್​ ಎಂದಿದ್ದಾರೆ. ಅನಿರುದ್ಧ್​ ರವಿಚಂದರ್​ ಅವರ ಸಂಗೀತವನ್ನು ಅಲ್ಲು ಅರ್ಜುನ್ ಹೊಗಳಿದ್ದಾರೆ. ನಿರ್ದೇಶಕ ಅಟ್ಲಿ ಅವರ ಕೆಲಸಕ್ಕೂ ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಸೆಪ್ಟೆಂಬರ್ 7ರ ತನಕ ಇಂಡಿಯನ್​ ಬಾಕ್ಸ್​ ಆಫೀಸ್​ನಲ್ಲಿ ‘ಗದರ್​ 2’ ಸಿನಿಮಾ ಅಬ್ಬರಿಸುತ್ತಿತ್ತು. ‘ಜವಾನ್​’ ಸಿನಿಮಾ ರಿಲೀಸ್​ ಆದ ಬಳಿಕ ‘ಗದರ್​ 2’ ಸೈಲೆಂಟ್​ ಆಗಿದೆ. ಶಾರುಖ್​ ಖಾನ್​ ಮತ್ತು ಅಟ್ಲಿ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲುಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.