‘ಟೈಗರ್ Vs ಪಠಾಣ್’ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟ ಸಲ್ಮಾನ್-ಶಾರುಖ್; ಸೆಟ್ಟೇರೋದು ಯಾವಾಗ?

ಆದಿತ್ಯ ಚೋಪ್ರಾ ಅವರು ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಇಬ್ಬರನ್ನೂ ಪ್ರತ್ಯೇಕವಾಗಿ ಭೇಟಿ ಮಾಡಿ ಚಿತ್ರದ ಕಥೆ ವಿವರಿಸಿದ್ದಾರೆ. ಇಬ್ಬರಿಗೂ ಕಥೆ ಇಷ್ಟವಾಗಿದ್ದು, ಸ್ಕ್ರಿಪ್ಟ್ ಫೈನಲ್ ಮಾಡಿದ್ದಾರೆ. 2024ರ ಮಾರ್ಚ್ ವೇಳೆಗೆ ಸಿನಿಮಾ ಸೆಟ್ಟೇರಲಿದೆ. 2025 ಆರಂಭದಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

‘ಟೈಗರ್ Vs ಪಠಾಣ್’ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟ ಸಲ್ಮಾನ್-ಶಾರುಖ್; ಸೆಟ್ಟೇರೋದು ಯಾವಾಗ?
ಸಲ್ಮಾನ್-ಶಾರುಖ್
Follow us
ರಾಜೇಶ್ ದುಗ್ಗುಮನೆ
|

Updated on: Sep 17, 2023 | 7:31 AM

ಶಾರುಖ್ ಖಾನ್ (Shah Rukh Kahn) ಹಾಗೂ ಸಲ್ಮಾನ್ ಖಾನ್ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇಬ್ಬರಿಗೂ ಸಾಕಷ್ಟು ಸಾಮ್ಯತೆ ಇದೆ. ಇಬ್ಬರೂ ಆ್ಯಕ್ಷನ್ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮೊದಲ ದಿನ ಇವರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತದೆ. ಇವರ ಬೇಡಿಕೆ ಸದ್ಯಕ್ಕೆ ಕಡಿಮೆ ಆಗುವಂಥದ್ದಲ್ಲ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹಲವು ವಿಚಾರಗಳು ಸಿಗುತ್ತವೆ. ಈಗ ಇವರಿಬ್ಬರೂ ಒಂದಾಗುತ್ತಿದ್ದಾರೆ. ‘ಟೈಗರ್ Vs ಪಠಾಣ್’ ಚಿತ್ರದಲ್ಲಿ ನಟಿಸೋಕೆ ಈ ಜೋಡಿ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

ಶಾರುಖ್ ಖಾನ್ ಸದ್ಯ ‘ಜವಾನ್’ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇದಾದ ಬಳಿಕ ಅವರು ‘ಡಂಕಿ’ ಸಿನಿಮಾ ಕೆಲಸ ಪೂರ್ಣಗೊಳಿಸಲಿದ್ದಾರೆ. ಇನ್ನು, ‘ಟೈಗರ್ 3’ ಸಿನಿಮಾ ಕೆಲಸಗಳಲ್ಲಿ ಸಲ್ಮಾನ್ ಖಾನ್ ಬ್ಯುಸಿ ಇದ್ದಾರೆ. ಈ ಕೆಲಸ ಪೂರ್ಣಗೊಂಡ ಬಳಿಕ ಇಬ್ಬರೂ ‘ಟೈಗರ್ Vs ಪಠಾಣ್’ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ.

ಯಶ್ ರಾಜ್ ಫಿಲ್ಮ್ಸ್​ ಈಗಾಗಲೇ ಸಿನಿಮಾ ಯೂನಿವರ್ಸ್ ಸಿದ್ಧಪಡಿಸಿದೆ. ಅದರ ಅಡಿಯಲ್ಲಿ ಈ ಸಿನಿಮಾ ಮೂಡಿ ಬರಲಿವೆ. ‘ಟೈಗರ್’ ಸಿನಿಮಾ ಸರಣಿಯಲ್ಲಿ ಸಲ್ಮಾನ್ ಖಾನ್ ನಿರ್ವಹಿಸಿದ ‘ಟೈಗರ್’ ಪಾತ್ರ ಹಾಗೂ ‘ಪಠಾಣ್’ ಸಿನಿಮಾದಲ್ಲಿ ಶಾರುಖ್ ಖಾನ್ ನಿರ್ವಹಿಸಿದ ಪಠಾಣ್ ಪಾತ್ರ ಹೊಸ ಚಿತ್ರದಲ್ಲಿ ಒಂದಾಗಲಿದೆ.

ಆದಿತ್ಯ ಚೋಪ್ರಾ ಅವರು ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಇಬ್ಬರನ್ನೂ ಪ್ರತ್ಯೇಕವಾಗಿ ಭೇಟಿ ಮಾಡಿ ಚಿತ್ರದ ಕಥೆ ವಿವರಿಸಿದ್ದಾರೆ. ಇಬ್ಬರಿಗೂ ಕಥೆ ಇಷ್ಟವಾಗಿದ್ದು, ಸ್ಕ್ರಿಪ್ಟ್ ಫೈನಲ್ ಮಾಡಿದ್ದಾರೆ. 2024ರ ಮಾರ್ಚ್ ವೇಳೆಗೆ ಸಿನಿಮಾ ಸೆಟ್ಟೇರಲಿದೆ. 2025 ಆರಂಭದಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಜವಾನ್’ ಸಿನಿಮಾ ಶೂಟಿಂಗ್ ಸೆಟ್​​ನಲ್ಲಿ ಶಾರುಖ್ ಖಾನ್ ತಮಿಳು ಮಾತನಾಡಿದ ಅಪರೂಪದ ವಿಡಿಯೋ

ಶಾರುಖ್ ಖಾನ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತಿದೆ. ಸಲ್ಮಾನ್ ಖಾನ್ ಸಿನಿಮಾಗೂ ಇದೇ ರೀತಿಯ ತಾಕತ್ತು ಇದೆ. ಈಗ ಇಬ್ಬರೂ ಸೇರಿದರೆ ಸಿನಿಮಾ ಎಷ್ಟು ಕೋಟಿ ಗಳಿಕೆ ಮಾಡಬಹುದು ಎನ್ನುವ ಕುತೂಹಲ ಅಭಿಮಾನಿಗಳದ್ದು. ಅಂದಹಾಗೆ, ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಸಿನಿಮಾದಲ್ಲಿ ಮುಖಾಮುಖಿ ಆಗುತ್ತಾರೋ ಅಥವಾ ಒಟ್ಟಾಗಿ ವೈರಿಗಳ ವಿರುದ್ಧ ಹೋರಾಡುತ್ತಾರೋ ಎಂಬುದು ಸ್ಪಷ್ಟವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ