ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ (Jawan Movie) ಟ್ರೇಲರ್ ಮೂಲಕ ಗಮನ ಸೆಳೆಯುತ್ತಿದೆ. ಈ ಸಿನಿಮಾ ಸೆಪ್ಟೆಂಬರ್ 7ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಅವರು ಹಲವು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ರಿಲೀಸ್ಗೆ ಒಂದು ವಾರ ಇರುವಾಗ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದೆ. ಶಾರುಖ್ ಖಾನ್ ನಟನೆಯ ಈ ಚಿತ್ರದ ಟಿಕೆಟ್ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಲ್ಲಿ 2400 ರೂಪಾಯಿವರೆಗೆ ‘ಜವಾನ್’ ಸಿನಿಮಾದ ಟಿಕೆಟ್ಗಳು ಮಾರಾಟ ಆಗುತ್ತಿವೆ.
ಶಾರುಖ್ ಖಾನ್ ಅವರು ಮಾಸ್ ಅವತಾರ ತಾಳುತ್ತಿದ್ದಾರೆ. ‘ಪಠಾಣ್’ ಸಿನಿಮಾದಲ್ಲಿ ಅವರು ಸಖತ್ ಆ್ಯಕ್ಷನ್ ಮೆರೆದಿದ್ದರು. ‘ಜವಾನ್’ ಚಿತ್ರದಲ್ಲೂ ಅದು ಮುಂದುವರಿಯಲಿದೆ ಅನ್ನೋದಕ್ಕೆ ಪ್ರಿವ್ಯೂ ವಿಡಿಯೋ ಹಾಗೂ ಟ್ರೇಲರ್ಗಳೇ ಸಾಕ್ಷಿ . ಇದೊಂದು ರೀತಿಯಲ್ಲಿ ದಕ್ಷಿಣ ಭಾರತ ಹಾಗೂ ಬಾಲಿವುಡ್ ಸಮ್ಮಿಶ್ರಣದ ಸಿನಿಮಾ. ಈ ಚಿತ್ರದಲ್ಲಿ ಶಾರುಖ್ ಖಾನ್ ಹೀರೋ ಆಗಿ ನಟಿಸಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ‘ಜವಾನ್’ ನಿರ್ದೇಶನ ಮಾಡಿದ್ದಾರೆ. ನಯನತಾರಾ ಚಿತ್ರದ ನಾಯಕಿ. ತಮಿಳು ಹೀರೋ ವಿಜಯ್ ಸೇತುಪತಿ ವಿಲನ್ ಪಾತ್ರ ಮಾಡಿದ್ದಾರೆ. ಬಾಲಿವುಡ್ ನಾಯಕಿಯರಾದ ಸಾನ್ಯಾ ಮಲ್ಹೋತ್ರಾ ಹಾಗೂ ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಭಾರತದಾದ್ಯಂತ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ.
ಬೆಂಗಳೂರಿನ ಡೈರೆಕ್ಟರ್ಸ್ ಕಟ್ ಥಿಯೇಟರ್ನಲ್ಲಿ ‘ಜವಾನ್’ ಟಿಕೆಟ್ ದರ 2400 ರೂಪಾಯಿ ಇದೆ. ಐಷಾರಾಮಿ ಮಲ್ಟಿಪ್ಲೆಕ್ಸ್ ಆಗಿರುವುದರಿಂದ ಟಿಕೆಟ್ ದರ ಇಷ್ಟೊಂದು ದುಬಾರಿ ಇದೆ. ಇನ್ನು, ಸಾಮಾನ್ಯ ಮಲ್ಟಿಪ್ಲೆಕ್ಸ್ಗಳಲ್ಲೂ ಟಿಕೆಟ್ ದರ ಜೋರಾಗಿಯೇ ಇದೆ. ಲುಲು ಮಾಲ್ನಲ್ಲಿರುವ ಸಿನಿಪೊಲಿಸ್ನಲ್ಲಿ ರಾತ್ರಿ ಶೋಗಳ ಟಿಕೆಟ್ ಬೆಲೆ ಗರಿಷ್ಟ 1600 ರೂಪಾಯಿ ಇದೆ. ಬಿನ್ನಿಪೇಟೆ ಸಿನಿಪೊಲಿಸ್ನಲ್ಲಿ ಗರಿಷ್ಠ ಬೆಲೆ 750 ರೂಪಾಯಿ ಇದೆ.
ಇದನ್ನೂ ಓದಿ: ‘ಜವಾನ್’ ಸಿನಿಮಾ ಆಡಿಯೋ ಲಾಂಚ್ಗೆ ಬರಲೇ ಇಲ್ಲ ನಯನತಾರಾ; ಅಸಲಿ ಕಾರಣ ಹುಡುಕಿದ ಫ್ಯಾನ್ಸ್
ಬಹುತೇಕ ಮಲ್ಟಿಪ್ಲೆಕ್ಸ್ನಲ್ಲಿ 250 ರೂಪಾಯಿಯಿಂದ ‘ಜವಾನ್’ ಸಿನಿಮಾ ಟಿಕೆಟ್ ಬೆಲೆ ಆರಂಭ ಆಗುತ್ತಿದೆ. ಸಿಂಗಲ್ ಸ್ಕ್ರೀನ್ಗಳಲ್ಲಿನ ದರದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಟಿಕೆಟ್ ದರ ಇಷ್ಟೊಂದು ದುಬಾರಿ ಆದರೆ ಜನಸಾಮಾನ್ಯರು ಸಿನಿಮಾ ನೋಡೋದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಈ ಮೊದಲು ಸರ್ಕಾರದಿಂದ ಈ ರೀತಿಯ ಕ್ರಮ ಜಾರಿಗೆ ಬಂದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ