AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಗನ ಮುಟ್ಟುವ ಮೊದಲು ನನ್ನನ್ನು ಎದುರಿಸು’; ಎಚ್ಚರಿಕೆ ನೀಡಿದ ಶಾರುಖ್ ಖಾನ್

ಶಾರುಖ್ ಖಾನ್​ಗೆ ಕುಟುಂಬದ ಮೇಲೆ ಹೆಚ್ಚು ಪ್ರೀತಿ ಇದೆ. ಆರ್ಯನ್​ ಖಾನ್​ನ ಅವರು ಸಖತ್ ಪ್ರೀತಿ ಮಾಡುತ್ತಾರೆ. ಈ ಮೊದಲು ಅವರು ಡ್ರಗ್ ಕೇಸ್​ನಲ್ಲಿ ಅರೆಸ್ಟ್ ಆದರು. ಇದು ಶಾರುಖ್ ಖಾನ್ ಅವರನ್ನು ಸಾಕಷ್ಟು ಅಪ್ಸೆಟ್ ಮಾಡಿತ್ತು. ಮಗ ಅರೆಸ್ಟ್​ ಆದ ವಿಚಾರದಲ್ಲಿ ಶಾರುಖ್ ಖಾನ್​ಗೆ ಸಿಕ್ಕಾಪಟ್ಟೆ ಸಿಟ್ಟಿದೆ.

‘ಮಗನ ಮುಟ್ಟುವ ಮೊದಲು ನನ್ನನ್ನು ಎದುರಿಸು’; ಎಚ್ಚರಿಕೆ ನೀಡಿದ ಶಾರುಖ್ ಖಾನ್
ಶಾರುಖ್ ಖಾನ್-ಆರ್ಯನ್
ರಾಜೇಶ್ ದುಗ್ಗುಮನೆ
|

Updated on: Sep 01, 2023 | 7:12 AM

Share

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ (Jawan Movie) ರಿಲೀಸ್​ಗೆ ಮೊದಲು ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರದ ಟ್ರೇಲರ್ ಆಗಸ್ಟ್​ 31ರಂದು ರಿಲೀಸ್ ಆಗಿದ್ದು, ಟ್ರೆಂಡ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಇದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ವಿಜಯ್ ಸೇತುಪತಿ (Vijay Sethupathi) ಅವರು ವಿಲನ್ ಪಾತ್ರದಲ್ಲಿ ಗಮನ ಸೆಳೆಯುತ್ತಿದ್ದಾರೆ. ಶಾರುಖ್ ಖಾನ್ ಅವರದ್ದು ಹಲವು ಅವತಾರ. ಟ್ರೇಲರ್​ನಲ್ಲಿ ಶಾರುಖ್ ಖಾನ್ ಹೇಳಿದ ಡೈಲಾಗ್ ಒಂದು ಸದ್ದು ಮಾಡುತ್ತಿದೆ. ಇದು ವಿಲನ್​ಗೆ ಹೇಳಿದ ಮಾತೇ ಆದರೂ ಫ್ಯಾನ್ಸ್ ಬೇರೆ ರೀತಿಯಲ್ಲಿ ಅರ್ಥೈಸುತ್ತಿದ್ದಾರೆ.

ಶಾರುಖ್ ಖಾನ್​ಗೆ ಕುಟುಂಬದ ಮೇಲೆ ಹೆಚ್ಚು ಪ್ರೀತಿ ಇದೆ. ಆರ್ಯನ್​ ಖಾನ್​ನ ಅವರು ಸಖತ್ ಪ್ರೀತಿ ಮಾಡುತ್ತಾರೆ. ಈ ಮೊದಲು ಅವರು ಡ್ರಗ್ ಕೇಸ್​ನಲ್ಲಿ ಅರೆಸ್ಟ್ ಆದರು. ಇದು ಶಾರುಖ್ ಖಾನ್ ಅವರನ್ನು ಸಾಕಷ್ಟು ಅಪ್ಸೆಟ್ ಮಾಡಿತ್ತು. ಹಲವು ಸಮಯ ಆರ್ಯನ್ ಖಾನ್ ಜೈಲಿನಲ್ಲಿ ಇದ್ದು ಬಂದರು. ಆರ್ಯನ್ ಖಾನ್​ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಆರ್ಯನ್ ಬಿಡುಗಡೆ ಆದರು. ಮಗ ಅರೆಸ್ಟ್​ ಆದ ವಿಚಾರದಲ್ಲಿ ಶಾರುಖ್ ಖಾನ್​ಗೆ ಸಿಕ್ಕಾಪಟ್ಟೆ ಸಿಟ್ಟಿದೆ. ನೇರವಾಗಿ ಇದನ್ನು ಹೇಳೋಕೆ ಸಾಧ್ಯವಿಲ್ಲ. ಹೀಗಾಗಿ, ಸಿನಿಮಾ ಮೂಲಕ ಹೇಳಿರಬಹುದು ಎಂದು ಅನೇಕರು ಊಹಿಸಿದ್ದಾರೆ.

ಈ ಚಿತ್ರದಲ್ಲಿ ಜವಾನ್ (ಶಾರುಖ್ ಖಾನ್) ಹಾಗೂ ಕಲೀ (ವಿಜಯ್ ಸೇತುಪತಿ) ಮುಖಾಮುಖಿ ಆಗುತ್ತಾರೆ. ಈ ವೇಳೆ ವಿಲನ್​ಗೆ ಶಾರುಖ್ ಹೇಳುವ ಡೈಲಾಗ್ ಗಮನ ಸೆಳೆದಿದೆ. ‘ನನ್ನ ಮಗನ ಮುಟ್ಟುವ ಮೊದಲು ತಂದೆಯ ಜೊತೆ ಮಾತನಾಡು’ ಎಂದು ಹೇಳುತ್ತಾರೆ ಶಾರುಖ್.  ಇದು ವಿಲನ್​ಗೆ ಹೇಳಿದ ಮಾತೇ ಆದರೂ ಅನೇಕರು ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುತ್ತಿದ್ದಾರೆ. ಶಾರುಖ್​ ಖಾನ್ ತಮ್ಮ ಮಗನ ವಿಚಾರದಲ್ಲಿ ಎಚ್ಚರಿಕೆ ನೀಡಿದ್ದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಜವಾನ್’ ಸಿನಿಮಾ ಆಡಿಯೋ ಲಾಂಚ್​​ಗೆ ಬರಲೇ ಇಲ್ಲ ನಯನತಾರಾ; ಅಸಲಿ ಕಾರಣ ಹುಡುಕಿದ ಫ್ಯಾನ್ಸ್

‘ಜವಾನ್’ ಸೆಪ್ಟೆಂಬರ್ 7ರಂದು ರಿಲೀಸ್ ಆಗುತ್ತಿದೆ. ಶಾರುಖ್ ಖಾನ್​ಗೆ ಜೊತೆಯಾಗಿ ನಯನತಾರಾ ನಟಿಸಿದ್ದಾರೆ. ಅಟ್ಲಿ ನಿರ್ದೇಶನ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್