‘ಗದರ್ 2 ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಯ ಎಲ್ಲಾ ಅರ್ಹತೆಗಳಿವೆ’; ಅಕಾಡೆಮಿ ಅವಾರ್ಡ್​ ಕುರಿತು ನಿರ್ದೇಶಕರ ಮಾತು

ಸನ್ನಿ ಡಿಯೋಲ್​ ನಟನೆಯ ‘ಗದರ್ 2’ ಸಿನಿಮಾ ಎಲ್ಲರ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಈ ಸಿನಿಮಾ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್​ ಆಗಬೇಕು ಎಂಬ ಆಸೆ ಅಭಿಮಾನಿಗಳಿಗೆ ಇದೆ. ಈ ಕುರಿತು ಸಿನಿಮಾದ ನಿರ್ದೇಶಕ ಅನಿಲ್ ಶರ್ಮಾ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಗದರ್ 2 ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಯ ಎಲ್ಲಾ ಅರ್ಹತೆಗಳಿವೆ’; ಅಕಾಡೆಮಿ ಅವಾರ್ಡ್​ ಕುರಿತು ನಿರ್ದೇಶಕರ ಮಾತು
ಸನ್ನಿ ಡಿಯೋಲ್​
Follow us
TV9 Web
| Updated By: ಮದನ್​ ಕುಮಾರ್​

Updated on: Sep 01, 2023 | 7:29 PM

ಸೂಪರ್​ ಹಿಟ್ ಆಗಿರುವ ‘ಗದರ್ 2’ (Gadar 2) ಸಿನಿಮಾವು ಬಾಲಿವುಡ್​ನ ಬಾಕ್ಸ್​ ಆಫೀಸ್​ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಸಿನಿಮಾದ ನಾಯಕ ಸನ್ನಿ ಡಿಯೋಲ್ ವೃತ್ತಿ ಬದುಕಿಗೆ ಹೊಸ ತಿರುವನ್ನೂ ತಂದುಕೊಟ್ಟಿದೆ. ಗಳಿಕೆಯ ಮೂಲಕ ಸದ್ದು ಮಾಡುತ್ತಿದ್ದ ಸಿನಿಮಾ ಈ ಬಾರಿ ಪ್ರಶಸ್ತಿ ವಿಷಯಕ್ಕೆ ಸುದ್ದಿಯಲ್ಲಿದೆ. ಸಿನಿಮಾ ನಿರ್ದೇಶಕ ಅನಿಲ್ ಶರ್ಮಾ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ‘ಗದರ್ 2 ಸಿನಿಮಾವನ್ನು ಆಸ್ಕರ್ ಪ್ರಶಸ್ತಿಯ (Oscar Award) ನಾಮಿನೇಷನ್​ಗೆ ಕಳಿಸಬೇಕೆಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ’ ಎಂದು ಅನಿಲ್ ಶರ್ಮಾ (Anil Sharma) ಹೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್​ ಅವರಿಗೆ ಜೋಡಿಯಾಗಿ ಅಮೀಷಾ ಪಟೇಲ್​ ನಟಿಸಿದ್ದಾರೆ.

2001ರಲ್ಲಿ ‘ಗದರ್ ಏಕ್ ಪ್ರೇಮ್​ಕಥಾ’ ಸಿನಿಮಾ ಬಿಡುಗಡೆ ಆಗಿತ್ತು. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್, ಅಮೀಷಾ ಪಟೇಲ್​, ಉತ್ಕರ್ಷ ಶರ್ಮಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇದೇ ಸಿನಿಮಾದ ಸೀಕ್ವೆಲ್ ಆಗಿ ‘ಗದರ್ 2’ ಚಿತ್ರ ಈ ವರ್ಷ ಆಗಸ್ಟ್ 11ರಂದು ತೆರೆಕಂಡಿತು. ಎರಡು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಮಾಡಿವೆ. ಈ ಮೊದಲು ‘ಗದರ್ ಏಕ್ ಪ್ರೇಮ್​ಕಥಾ’ ಸಿನಿಮಾವನ್ನು ಕೂಡ ಆಸ್ಕರ್ ಸ್ಪರ್ಧೆಯ ನಾಮಿನೇಷನ್​ಗೆ ಕಳಿಸಬೇಕು ಎಂಬ ಆಸೆಯಿದ್ದರೂ ಅದು ಈಡೇರಲಿಲ್ಲ. ಆದರೆ ‘ಗದರ್ 2’ ಚಿತ್ರವನ್ನು ಆಸ್ಕರ್ ನಾಮಿನೇಷನ್​ಗೆ ಕಳಿಸಬೇಕು ಎಂದು ಪ್ರೇಕ್ಷಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 60 ಕೋಟಿ ರೂಪಾಯಿ ಗಳಿಸಿದ ‘ಡ್ರೀಮ್ ಗರ್ಲ್ 2’: ‘ಗದರ್ 2’ ಅಬ್ಬರದ ನಡುವೆಯೂ ಗೆದ್ದ ಆಯುಷ್ಮಾನ್​

‘ಈ ಹಿಂದೆ ‘ಗದರ್’ ಸಿನಿಮಾ ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿಲ್ಲದೇ ಇದ್ದರಿಂದ ‘ಗದರ್ 2’ ಆ ಸ್ಥಾನ ಪಡೆದುಕೊಳ್ಳುತ್ತದೆ ಎಂದು ಹೇಳುವುದು ಕಷ್ಟ. ಆದರೆ ‘ಗದರ್’ ಸಿನಿಮಾ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುವ ಎಲ್ಲಾ ಅರ್ಹತೆ ಹೊಂದಿತ್ತು. ಈ ಸಿನಿಮಾದಲ್ಲಿ 1947ರ ಭಾರತ-ಪಾಕಿಸ್ತಾನ ವಿಭಜನೆಯಲ್ಲಾದ ಕಥೆಯನ್ನೇ ಬೇರೆ ವಿಧಾನದಲ್ಲಿ ಹೇಳಲಾಗಿತ್ತು. ಅದೇ ರೀತಿ ‘ಗದರ್ 2’ ಸಿನಿಮಾದಲ್ಲಿಯೂ ನೈಜ ಕಥೆಯನ್ನೇ ಆಯ್ದುಕೊಂಡಿದ್ದೇವೆ. ಆದರೆ ಕಥೆ ಹೇಳುವಾಗ ಬೇಕಾಗುವ ಮಾರ್ಪಾಡುಗಳನ್ನು ಮಾಡಿಕೊಂಡಿದ್ದೇವೆ. ಆದ್ದರಿಂದ ಪ್ರಶಸ್ತಿಗೆ ಆಯ್ಕೆಯಾಗಬೇಕೆಂಬ ಇರಾದೆ ಇದೆ’ ಎಂದು ಅನಿಲ್​ ಶರ್ಮಾ ಹೇಳಿದ್ದಾರೆ. 2001ರಲ್ಲಿ ವಿದೇಶಿ ಭಾಷಾ ಚಿತ್ರದ ವಿಭಾಗದಲ್ಲಿ ಆಮಿರ್ ಖಾನ್ ಅಭಿನಯದ ‘ಲಗಾನ್’ ಸಿನಿಮಾ ಆಯ್ಕೆಯಾಗಿತ್ತು.

ಇದನ್ನೂ ಓದಿ: ‘ಗದರ್​ 2’ ಘರ್ಜನೆಗೆ ‘ಕೆಜಿಎಫ್​ 2’ ಚಿತ್ರದ ದಾಖಲೆ ಉಡೀಸ್​; ಎಷ್ಟಾಯಿತು ಒಟ್ಟು ಕಲೆಕ್ಷನ್​?

ಈ ಹಿಂದೆ ಒಂದು ಸಂದರ್ಶನದಲ್ಲಿ ಬಾಲಿವುಡ್ ನಟ ಧರ್ಮೇಂದ್ರ ಅವರು, ‘ನಾನು ಚಿತ್ರರಂಗದ ಒಂದು ಭಾಗ ಎಂದು ಅನ್ನಿಸಲೇ ಇಲ್ಲ’ ಎಂದಿದ್ದರು. ಇದನ್ನು ನೆನಪಿಸಿಕೊಂಡ ಅನಿಲ್ ಶರ್ಮಾ ‘ನನಗೂ ಹೀಗೆ ಹಲವು ಸಲ ಸನ್ನಿಸಿದ್ದುಂಟು’ ಎಂದಿದ್ದಾರೆ. ‘ಪ್ರಶಸ್ತಿಗಳ ವಿಚಾರದಲ್ಲಿಯೂ ಹಾಗೇ ಆಗುತ್ತದೆ. ಜನರ ಮೆಚ್ಚುಗೆಗೆ ಪಾತ್ರವಾದ ಸಿನಿಮಾ ಕೂಡ ಪ್ರಶಸ್ತಿಯನ್ನು ಪಡೆದುಕೊಳ್ಳುವುದಿಲ್ಲ. ನಾನು ಹಲವು ಬಾರಿ ಪ್ರಶಸ್ತಿಗೆ ಅರ್ಹನಾದರೂ ಯಾವುದೇ ಪ್ರಶಸ್ತಿ ಲಭ್ಯವಾಗಲಿಲ್ಲ. ಏಕೆಂದರೆ ಒಂದು ಪ್ರಶಸ್ತಿಯ ಹಿಂದೆ ಹಲವಾರು ಲಾಬಿಗಳಿರುವುದರಿಂದ ಪ್ರೇಕ್ಷಕನನ್ನು ತಲುಪುವ ಸಿನಿಮಾಗಳನ್ನು ಮಾಡಿದರೂ ನನಗೆ ಇನ್ನೂ ಯಾವುದೇ ಪ್ರಶಸ್ತಿ ದೊರೆಯಲಿಲ್ಲ. ಲಾಬಿಗಳನ್ನು ನಡೆಸಿ ಪ್ರಶಸ್ತಿ ಗಳಿಸಿಕೊಳ್ಳಲು ನಾನು ರಾಜಕೀಯ ವ್ಯಕ್ತಿಯಲ್ಲ’ ಎಂದು ಚಿತ್ರರಂಗದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಗಡಿ ಭಾಗದಲ್ಲಿನ ಪ್ರೇಮಕಥೆಯನ್ನು ಹೇಳುವ ‘ಗದರ್’, ‘ಗದರ್ 2’ ಸಿನಿಮಾಗಳು ವೀಕ್ಷಕರಿಂದ ಭೇಷ್ ಎನಿಸಿಕೊಂಡಿವೆ. ಪ್ರಶಸ್ತಿಯನ್ನು ಗಿಟ್ಟಿಸಿಕೊಳ್ಳಲು ಸಫಲವಾಗುತ್ತಾ ಎಂಬುದನ್ನು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?