‘ಡಂಕಿ’ ಚಿತ್ರದ ಕಲಾವಿದರು ಪಡೆದ ಸಂಭಾವನೆ ಬಗ್ಗೆ ಇಲ್ಲಿದೆ ಮಾಹಿತಿ..
ಡಂಕಿ’ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ನಟರ ಸಂಭಾವನೆ ಬಗ್ಗೆ ಇಲ್ಲಿದೆ ವಿವರ.
![‘ಡಂಕಿ’ ಚಿತ್ರದ ಕಲಾವಿದರು ಪಡೆದ ಸಂಭಾವನೆ ಬಗ್ಗೆ ಇಲ್ಲಿದೆ ಮಾಹಿತಿ..](https://images.tv9kannada.com/wp-content/uploads/2023/11/dunki-4.jpg?w=1280)
ಶಾರುಖ್ ಖಾನ್ (Shah Rukh Khan) ನಟನೆಯ ‘ಡಂಕಿ’ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ರಾಜ್‌ಕುಮಾರ್ ಹಿರಾನಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಾಪ್ಸೀ ಪನ್ನು, ವಿಕ್ಕಿ ಕೌಶಲ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಭಾಸ್ ನಟನೆಯ ‘ಸಲಾರ್: ಪಾರ್ಟ್ 1 ಸೀಸ್ಫೈರ್’ ಚಿತ್ರದ ಎದುರು ‘ಡಂಕಿ’ ಸಿನಿಮಾ ರಿಲೀಸ್ ಆಗುತ್ತಿದೆ. ಸದ್ಯ ಕಲಾವಿದರ ಸಂಭಾವನೆ ಬಗ್ಗೆ ವರದಿ ಹರಿದಾಡುತ್ತಿದೆ.
‘ಡಂಕಿ’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ತಾಪ್ಸೀ ಪನ್ನು, ವಿಕ್ಕಿ ಕೌಶಲ್, ಬೋಮನ್ ಇರಾನಿ, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ಮೊದಲಾದವರು ನಟಿಸಿದ್ದಾರೆ. ‘ಡಂಕಿ’ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ನಟರ ಸಂಭಾವನೆ ಬಗ್ಗೆ ಇಲ್ಲಿದೆ ವಿವರ.
ಶಾರುಖ್ ಖಾನ್
ಶಾರುಖ್ ಖಾನ್ ‘ಜವಾನ್’ ಹಾಗೂ ‘ಪಠಾಣ್’ ಯಶಸ್ಸಿನ ನಂತರ ‘ಡಂಕಿ’ ಚಿತ್ರಕ್ಕೆ 100 ಕೋಟಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ, ಈಗ ಕೇಳಿ ಬರುತ್ತಿರುವ ವರದಿ ಪ್ರಕಾರ ಕೇವಲ 28 ಕೋಟಿ ರೂಪಾಯಿ ಪಡೆದಿದ್ದಾರಂತೆ. ಉಳಿದ ಹಣವನ್ನು ನಿರ್ಮಾಣದಲ್ಲಿ ಹೂಡಿಕೆ ಮಾಡಿದ್ದಾರೆ. ಅವರು ಲಾಭದಲ್ಲಿ ಪಾಲು ಪಡೆಯಲಿದ್ದಾರೆ.
ವಿಕ್ಕಿ ಕೌಶಲ್
ವಿಕ್ಕಿ ಕೌಶಲ್ ಅವರು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅವರು ಹಲವು ಸೂಪರ್ ಹಿಟ್ ಸಿನಿಮಾ ನೀಡಿದ್ದಾರೆ. ‘ಡಂಕಿ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅವರು ಈ ಚಿತ್ರಕ್ಕೆ 12 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ.
ಬೋಮನ್ ಇರಾನಿ
ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಹಲವು ಸಿನಿಮಾಗಳಲ್ಲಿ ಬೋಮನ್ ಇರಾನಿ ಅವರು ಕೆಲಸ ಮಾಡಿದ್ದಾರೆ. ‘ಪಿಕೆ’, ‘3 ಈಡಿಯಟ್ಸ್’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರು ‘ಡಂಕಿ’ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಅವರು ‘ಡಂಕಿ’ ಚಿತ್ರದ ನಟನೆಗೆ 15 ಕೋಟಿ ರೂಪಾಯಿ ಪಡೆದಿದ್ದಾರೆ.
ತಾಪ್ಸೀ ಪನ್ನು
ಬಾಲಿವುಡ್ನ ಬೇಡಿಕೆಯ ನಟಿ ತಾಪ್ಸೀ ಪನ್ನು ಅವರು ಈ ಚಿತ್ರಕ್ಕೆ 11 ಕೋಟಿ ರೂಪಾಯಿ ಪಡೆದಿದ್ದಾರೆ. ಅವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ ಎನ್ನಲಾಗುತ್ತಿದೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.
ಇದನ್ನೂ ಓದಿ: ಮಾಸ್ ಬಿಟ್ಟು ಕ್ಲಾಸ್ ಆದ ಶಾರುಖ್ ಖಾನ್; ಬರ್ತ್ಡೇಗೆ ‘ಡಂಕಿ’ ಸಿನಿಮಾ ಟೀಸರ್ ರಿಲೀಸ್
ಕಳಪೆ ವಿಎಫ್ಎಕ್ಸ್?
‘ಡಂಕಿ’ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇತ್ತೀಚೆಗೆ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ವಿಎಫ್ಎಕ್ಸ್ ಉತ್ತಮವಾಗಿಲ್ಲ ಎಂದು ಚಿತ್ರವನ್ನು ಕೆಲವರು ಟೀಕಿಸಿದ್ದರು. ಆದರೆ, ಕೆಲವರಿಗೆ ಈ ಟೀಸರ್ ಸಾಕಷ್ಟು ಇಷ್ಟ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Mon, 6 November 23