ರಾಮ್ ಚರಣ್​ಗೆ ‘ಇಡ್ಲಿ ವಡಾ’ ಎಂದು ಸಂಬೋಧಿಸಿದ ಶಾರುಖ್; ಹೇಳಿಕೆಗೆ ಆಪ್ತ ವಲಯದಿಂದಲೇ ಟೀಕೆ

ರಾಧಿಕಾ ಮರ್ಚಂಟ್ ಹಾಗೂ ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಶಾರುಖ್ ಖಾನ್, ಆಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ ಆಗಮಿಸಿದ್ದರು. ಇವರು ಒಟ್ಟಾಗಿ ‘ಆರ್​ಆರ್​ಆರ್’ ಸಿನಿಮಾದ ‘ನಾಟು ನಾಟು..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆದರೆ, ಅಂದುಕೊಂಡಂತೆ ಹೆಜ್ಜೆ ಹಾಕೋಕೆ ಸಾಧ್ಯವಾಗಿಲ್ಲ. ಆಗ ರಾಮ್​ ಚರಣ್​​ನ ಕರೆದಿದ್ದಾರೆ ಶಾರುಖ್.

ರಾಮ್ ಚರಣ್​ಗೆ ‘ಇಡ್ಲಿ ವಡಾ’ ಎಂದು ಸಂಬೋಧಿಸಿದ ಶಾರುಖ್; ಹೇಳಿಕೆಗೆ ಆಪ್ತ ವಲಯದಿಂದಲೇ ಟೀಕೆ
ಶಾರುಖ್​-ರಾಮ್ ಚರಣ್

Updated on: Mar 06, 2024 | 1:46 PM

ಶಾರುಖ್ ಖಾನ್ (Shah Rukh Khan) ಅವರು ದೊಡ್ಡ ಸ್ಟಾರ್ ಪಟ್ಟ ಪಡೆದಿದ್ದಾರೆ. ಅವರಿಗೆ ಬಾಲಿವುಡ್ ಮಾತ್ರವಲ್ಲದೆ ವಿಶ್ವಾದ್ಯಂತ ಅಭಿಮಾನಿಗಳು ಸೃಷ್ಟಿ ಆಗಿದ್ದಾರೆ. ಶಾರುಖ್ ಖಾನ್ ಅವರು ಎಲ್ಲರ ಜೊತೆಗೂ ಉತ್ತಮ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಆದರೆ, ಇತ್ತೀಚೆಗೆ ಅವರು ಮಾತನಾಡಿದ ರೀತಿ ಅನೇಕರಿಗೆ ಇಷ್ಟ ಆಗಿಲ್ಲ. ‘ಇಡ್ಲಿ ವಡಾ’ ರಾಮ್ ಚರಣ್ ಎಂದು ಕರೆಯುವ ಮೂಲಕ ಶಾರುಖ್ ಕೆಲವರಿಂದ ಟೀಕೆ ಅನುಭವಿಸಿದ್ದಾರೆ. ರಾಮ್ ಚರಣ್ ಆಪ್ತ ಬಳಗದವರೇ ಈ ಬಗ್ಗೆ ಅಪಸ್ವರ ಎತ್ತಿದ್ದಾರೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಶಾರುಖ್ ಖಾನ್, ಆಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ ಆಗಮಿಸಿದ್ದರು. ಇವರು ಒಟ್ಟಾಗಿ ‘ಆರ್​ಆರ್​ಆರ್’ ಸಿನಿಮಾದ ‘ನಾಟು ನಾಟು..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆದರೆ, ಅಂದುಕೊಂಡಂತೆ ಹೆಜ್ಜೆ ಹಾಕೋಕೆ ಸಾಧ್ಯವಾಗಿಲ್ಲ. ಹೀಗಾಗಿ, ಇವರು ರಾಮ್​ ಚರಣ್ ಅವರನ್ನು ಕರೆಯಲು ಪ್ರಯತ್ನಿಸಿದರು. ಶಾರುಖ್ ಖಾನ್ ಅವರು ತಮಿಳಿನಲ್ಲಿ ಏನೇನೋ ಮಾತನಾಡಿದಂತೆ ಆ್ಯಕ್ಟ್ ಮಾಡಿ ‘ಇಡ್ಲಿ ವಡಾ ರಾಮ್​ ಚರಣ್​ ಎಲ್ಲಿದ್ದೀರಿ’ ಎಂದು ಕೂಗಿದರು. ಈ ಬಗ್ಗೆ ಟೀಕೆ ವ್ಯಕ್ತವಾಗಿದೆ.

ರಾಮ್ ಚರಣ್ ಪತ್ನಿ ಉಪಾಸನಾ ಅವರ ಮೇಕಪರ್ ಆರ್ಟಿಸ್ಟ್​ ಜೆಬಾ ಹಸನ್ ಅವರು ಈ ವಿಚಾರವನ್ನು ಖಂಡಿಸಿದ್ದಾರೆ. ‘ಇದರ ನಂತರ ನಾನು ಹೊರನಡೆದೆ. ರಾಮ್ ಚರಣ್‌ನಂಥ ಸ್ಟಾರ್‌ಗೆ ತುಂಬಾ ಅಗೌರವ’ ಎಂದು ಉಪಾಸನಾ ಮೇಕಪ್ ಆರ್ಟಿಸ್ಟ್ ಬರೆದುಕೊಂಡಿದ್ದಾರೆ. ಜೆಬಾ ಅವರ ಹೇಳಿಕೆಯನ್ನು ಅನೇಕರು ಬೆಂಬಲಿಸಿದ್ದಾರೆ.

ಇದನ್ನೂ ಓದಿ: ‘ಡಂಕಿ’ ಸಿನಿಮಾ ಹಾಡಿದ ಅಲ್ಲು ಅರ್ಜುನ್ ಮಗ; ಸ್ವೀಟ್ ಆಗಿ ಉತ್ತರಿಸಿದ ಶಾರುಖ್ ಖಾನ್ 

‘ದಕ್ಷಿಣದ ಸ್ಟಾರ್​ಗಳನ್ನು ಟೀಕಿಸುವ ಕೆಲಸ ಮೊದಲಿನಿಂದಲೂ ಆಗುತ್ತಲೇ ಇದೆ. ಆಸ್ಕರ್ ಗೆದ್ದ ಸಿನಿಮಾದ ನಟನಿಗೂ ಈ ರೀತಿ ಅಗೌರವ ಸೂಚಿಸೋದು ಎಷ್ಟು ಸರಿ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ‘ಶಾರುಖ್ ಖಾನ್ ಅವರು ತಿಳಿದವರು. ಅವರಿಗೆ ಬಿರಿಯಾನಿ ಶಾರುಖ್ ಖಾನ್ ಎಂದರೆ ಬೇಸರ ಆಗುವುದಿಲ್ಲವೇ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ರಾಮ್ ಚರಣ್ ಅವರು ಸದ್ಯ ‘ಗೇಮ್ ಚೇಂಜರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಶಿವಣ್ಣ ಜೊತೆಯೂ ಅವರು ಒಂದು ಸಿನಿಮಾ ಮಾಡುವವರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:06 am, Tue, 5 March 24

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us