AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶಾರುಖ್ ಖಾನ್; ಇಲ್ಲಿದೆ ವಿಡಿಯೋ

ಶಾರುಖ್ ಖಾನ್ ಅವರು ಎಲ್ಲಾ ಧರ್ಮದವರನ್ನು ಪ್ರೀತಿಸುತ್ತಾರೆ. ಅವರು ಎಲ್ಲಾ ಧರ್ಮವನ್ನು ಪಾಲಿಸುತ್ತಾರೆ. ಈ ಮೊದಲು ಅವರು ಗಣೇಶ ಚತುರ್ಥಿ ಮೊದಲಾದ ಹಿಂದೂ ಹಬ್ಬಗಳನ್ನು ಆಚರಿಸಿದ್ದಿದೆ. ಕ್ರಿಸ್​ಮಸ್ ಕೂಡ ಆಚರಿಸಿದ್ದರು. ಈಗ ‘ಜವಾನ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ದೇವಾಲಯಗಳಿಗೆ ಭೇಟಿ ನೀಡುವ ಕೆಲಸ ಮಾಡುತ್ತಿದ್ದಾರೆ.

Shah Rukh Khan: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶಾರುಖ್ ಖಾನ್; ಇಲ್ಲಿದೆ ವಿಡಿಯೋ
ಶಾರುಖ್ ಖಾನ್
ರಾಜೇಶ್ ದುಗ್ಗುಮನೆ
|

Updated on: Sep 05, 2023 | 8:56 AM

Share

ಶಾರುಖ್ ಖಾನ್ ಅವರು ಇಂದು (ಸೆಪ್ಟೆಂಬರ್ 5) ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾರುಖ್ ಖಾನ್ (Shah Rukh Khan)​  ಜೊತೆ ಮಗಳು ಸುಹಾನಾ ಖಾನ್, ಸಹ ಕಲಾವಿದೆ ನಯನತಾರಾ ಹಾಗೂ ನಟಿಯ ಪತಿ ವಿಘ್ನೇಶ್ ಶಿವನ್ ಕೂಡ ಇದ್ದರು. ಈ ವಿಡಿಯೋನ ಎಎನ್​ಐ ಸುದ್ದಿ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಶಾರುಖ್ ಭಕ್ತಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಶಾರುಖ್ ಖಾನ್ ಅವರು ಎಲ್ಲಾ ಧರ್ಮದವರನ್ನು ಪ್ರೀತಿಸುತ್ತಾರೆ. ಅವರು ಎಲ್ಲಾ ಧರ್ಮವನ್ನು ಪಾಲಿಸುತ್ತಾರೆ. ಈ ಮೊದಲು ಅವರು ಗಣೇಶ ಚತುರ್ಥಿ ಮೊದಲಾದ ಹಿಂದೂ ಹಬ್ಬಗಳನ್ನು ಆಚರಿಸಿದ್ದಿದೆ. ಕ್ರಿಸ್​ಮಸ್ ಕೂಡ ಆಚರಿಸಿದ್ದರು. ಈಗ ‘ಜವಾನ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ದೇವಾಲಯಗಳಿಗೆ ಭೇಟಿ ನೀಡುವ ಕೆಲಸ ಮಾಡುತ್ತಿದ್ದಾರೆ. ಅವರ ಭಕ್ತಿಯ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

‘ಶಾರುಖ್ ಖಾನ್, ಅವರ ಮಗಳು ಸುಹಾನಾ ಖಾನ್, ನಟಿ ನಯನತಾರಾ ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವರ ದರ್ಶನ ಪಡೆದರು’ ಎಂದು ಎಎನ್​ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ‘ಜವಾನ್ ಸಿನಿಮಾ ಗೆಲ್ಲಲ್ಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನೂ ಕೆಲವರು ‘ಇದು ನಟನೆಯ ಭಾಗವೇ’ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ತಿರುಪತಿಗೆ ಭೇಟಿ ನೀಡಲು ರೆಡಿ ಆದ ಶಾರುಖ್ ಖಾನ್; ವ್ಯಕ್ತವಾಗುತ್ತಿದೆ ಭಾರೀ ವಿರೋಧ

ಶಾರುಖ್ ಖಾನ್ ಅವರು ‘ಜವಾನ್’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ‘ರೆಡ್​ ಚಿಲ್ಲೀಸ್ ಎಂಟರ್​ಟೇನ್​ಮೆಂಟ್’ ಮೂಲಕ ‘ಜವಾನ್’ ಚಿತ್ರವನ್ನು ಅವರು ನಿರ್ಮಾಣ ಮಾಡಿದ್ದಾರೆ. ನಯನತಾರಾ, ವಿಜಯ್ ಸೇತುಪತಿ ಸೇರಿ ಅನೇಕರು ಸಿನಿಮಾದಲ್ಲಿ ನಟಿಸಿದ್ದು ದೊಡ್ಡ ಮಟ್ಟದ ಸಂಭಾವನೆ ಪಡೆದುಕೊಂಡಿದ್ದಾರೆ. ಚಿತ್ರದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಮುಂಜಾನೆ ಟಿಕೆಟ್​ಗಳು ಸೋಲ್ಡ್​ಔಟ್ ಆಗುತ್ತಿದೆ. ಈ ವರ್ಷ ತೆರೆಗೆ ಬರುತ್ತಿರುವ ಶಾರುಖ್ ಖಾನ್ ನಟನೆಯ ಎರಡನೇ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ