ಶಾರುಖ್​ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲೇ ಇಲ್ಲ ಜಾಕಿ ಚಾನ್; ನಟನಿಗೆ ಇದೆ ಬೇಸರ

|

Updated on: Aug 12, 2024 | 1:01 PM

ಶಾರುಖ್ ಖಾನ್ ಅವರಿಗೆ ನಟ ಜಾಕಿ ಚಾನ್ ಮೇಲೆ ಎಲ್ಲಿಲ್ಲದ ಪ್ರೀತಿ. ಅವರ ಫೇವರಿಟ್ ಹೀರೋಗಳ ಸಾಲಿನಲ್ಲಿ ಶಾರುಖ್​ ಖಾನ್​ಗೆ ಮೊದಲ ಸ್ಥಾನ ಇದೆ. ಈಗ ಶಾರುಖ್ ಖಾನ್ ಅವರು ಜಾಕಿ ಚಾನ್ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ.

ಶಾರುಖ್​ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲೇ ಇಲ್ಲ ಜಾಕಿ ಚಾನ್; ನಟನಿಗೆ ಇದೆ ಬೇಸರ
ಶಾರುಖ್-ಜಾಕಿ ಚಾನ್
Follow us on

ಶಾರುಖ್ ಖಾನ್ ಅವರು ಸ್ವಿಜರ್​​ಲೆಂಡ್​ನಲ್ಲಿ ನಡೆದ ಲೊಕಾರ್ನೋ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅಲ್ಲಿ ನಟ ಜಾಕಿ ಚಾನ್ ಬಗ್ಗೆ ಪ್ರಶ್ನೆ ಎದುರಾಗಿದೆ. ಜಾಕಿ ಚಾನ್ ಬಗ್ಗೆ ಶಾರುಖ್ ಖಾನ್​ಗೆ ಸಾಕಷ್ಟು ಪ್ರೀತಿ ಇದೆ. ಶಾರುಖ್ ಅವರ ಫೇವರಿಟ್ ಹೀರೋಗಳ ಪೈಕಿ ಜಾಕಿ ಚಾನ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇದೇ ವೇಳೆ ಅವರು ಜಾಕಿ ಚಾನ್ ಕೊಟ್ಟ ಮಾತಿನ ಬಗ್ಗೆಯೂ ಹೇಳಿಕೆ ನೀಡಿದ್ದಾರೆ.

‘ನನ್ನ ಮಗ ಆರ್ಯನ್ ಜನಿಸಿದಾಗ ಆತ ಜಾಕಿ ಚಾನ್ ಥರ ಕಾಣುತ್ತಿದ್ದ. ಮಕ್ಕಳು ಜನಿಸಿದಾಗ ಅವರು ಪುಟಾಣಿಗಳಾಗಿರುತ್ತಾರೆ. ಆಗ ನನ್ನ ಮಗ ಜಾಕಿ ಚಾನ್ ರೀತಿಯೇ ಕಾಣುತ್ತಿದ್ದ.  ಆತ ಜಾಕಿ ಚಾನ್ ಆಗಿ ಬೆಳೆಯುತ್ತಾನೆ ಎಂದು ನಾನು ಅಂದುಕೊಂಡಿದ್ದೆ. ನನ್ನ ಗೆಳೆಯನೋರ್ವ ಜಾಕಿ ಚಾನ್ ಭೇಟಿ ಆದಾಗ ಟೋಪಿಯ ಮೇಲೆ ಸಹಿ ಹಾಕಿಸಿ ತಂದಿದ್ದ. ಸೌದಿ ಅರೇಬಿಯಾದಲ್ಲಿ ನಾಲ್ಕು ವರ್ಷಗಳ ಹಿಂದೆ ಅವರನ್ನು ಭೇಟಿ ಮಾಡಿದ್ದೆ. ಅವರು ತುಂಬಾನೇ ಸ್ವೀಟ್ ವ್ಯಕ್ತಿ’ ಎಂದಿದ್ದರು ಶಾರುಖ್.

‘ಜಾಕಿ ಚಾನ್​ನ ಭೇಟಿ ಮಾಡಿದ್ದು ನನ್ನ ಅದೃಷ್ಟ. ಅವರು ಪಾರ್ಟನರ್​​ಶಿಪ್​ ಮೇಲೆ ಚೈನೀಸ್ ರೆಸ್ಟೋರೆಂಟ್ ಓಪನ್ ಮಾಡುವ ಭರವಸೆ ನೀಡಿದ್ದರು. ಆದರೆ, ಅವರು ಮಾತು ಉಳಿಸಿಕೊಂಡಿಲ್ಲ. ಈಗಲಾದರೂ ಮಾಡಿ’ ಎಂದು ಶಾರುಖ್ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಮಗಳ ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳಲಿದ್ದಾರೆ ಶಾರುಖ್ ಖಾನ್; ಮಾಹಿತಿಕೊಟ್ಟ ‘ಕಿಂಗ್’

‘ನಾನು ನನ್ನ ಫೇವರಿಟ್ ನಟರ ಪಟ್ಟಿ ಮಾಡಲು ಹೋದರೆ ಜಾಕಿ ಚಾನ್ ಅವರು ಅಗ್ರಸ್ಥಾನದಲ್ಲಿ ಇರುತ್ತಾರೆ’ ಎಂದಿದ್ದಾರೆ ಶಾರುಖ್ ಖಾನ್. ಶಾರುಖ್ ಖಾನ್ ಅವರು ಇದೇ ವೇದಿಕೆ ಮೇಲೆ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ‘ಕಿಂಗ್’ ಚಿತ್ರದಲ್ಲಿ ನಟಿಸಲಿದ್ದಾರಂತೆ. ಈ ಚಿತ್ರಕ್ಕಾಗಿ ಶಾರುಖ್ ಖಾನ್ ಅವರು ತೆಳ್ಳಗಾಗಲಿದ್ದಾರೆ. ಈ ಚಿತ್ರಕ್ಕೆ ಶಾರುಖ್ ಖಾನ್ ಅವರು ಸಾಕಷ್ಟು ಶ್ರಮ ಹಾಕಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.