ಮೊದಲ ಸಿನಿಮಾ ಫ್ಲಾಪ್ ಆದರೂ ಎರಡೂವರೆ ಕೋಟಿ ರೂಪಾಯಿ ಕಾರು ಖರೀದಿಸಿದ ಖುಷಿ ಕಪೂರ್
ಖುಷಿ ಕಪೂರ್ ಅವರು ಈಗ ಮರ್ಸೀಡಿಸ್ ಬೆಂಜ್ ಜಿ ಕ್ಲಾಸ್ 400 ಖರೀದಿ ಮಾಡಿದ್ದಾರೆ. ಇದರ ಬೆಲೆ ಸುಮಾರು 2.55 ಕೋಟಿ ರೂಪಾಯಿ. ಖುಷಿ ಕಪೂರ್ ಅವರು ಕೆಂಪು ಬಣ್ಣದ ಕಾರಿನಲ್ಲಿ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. ಅವರಿಗೆ ಶುಭಾಶಯ ಕೋರುತ್ತಿದ್ದಾರೆ.
2023ರಲ್ಲಿ ಖುಷಿ ಕಪೂರ್ ನಟನೆಯ ಮೊದಲ ಸಿನಿಮಾ ‘ದಿ ಆರ್ಚೀಸ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಹೇಳಿಕೊಳ್ಳುವಂಥ ಯಶಸ್ಸು ಕಾಣಲಿಲ್ಲ. ಆದಾಗ್ಯೂ ಖುಷಿ ಕಪೂರ್ ಈ ವಿಚಾರದ ಬಗ್ಗೆ ಹೆಚ್ಚು ಬೇಸರ ಮಾಡಿಕೊಂಡಿಲ್ಲ. ಅವರು ಈಗ ಮರ್ಸೀಡಿಸ್ ಬೆಂಜ್ ಜಿ ಕ್ಲಾಸ್ 400 ಖರೀದಿ ಮಾಡಿದ್ದಾರೆ. ಇದರ ಬೆಲೆ ಸುಮಾರು 2.55 ಕೋಟಿ ರೂಪಾಯಿ. ಅವರು ಹೊಸ ಕಾರಿನಲ್ಲಿ ಬರುತ್ತಿರುವ ವಿಡಿಯೋ ವೈರಲ್ ಆಗಿದೆ.
ಖುಷಿ ಕಪೂರ್ ಅವರು ಕೆಂಪು ಬಣ್ಣದ ಕಾರಿನಲ್ಲಿ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. ಲಕ್ಷುರಿ ಎಸ್ಯುವಿ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಈ ಕಾರು ಐದು ಸೀಟರ್ಗಳನ್ನು ಹೊಂದಿದೆ. ಮಲ್ಟಿ ಫಂಕ್ಷನ್ ಸ್ಟಿಯರಿಂಗ್ ವೀಲ್, ಆಟೋ ಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಎಬಿಎಸ್, ಅಲೋಯ್ ವೀಲ್ಸ್ ಸೇರಿ ಅನೇಕ ಆಯ್ಕೆಗಳನ್ನು ಈ ಕಾರು ಹೊಂದಿದೆ. ಈ ಕಾರು ಬರೋಬ್ಬರಿ 2925 ಸಿಸಿ ಇಂಜಿನ್ನ ಹೊಂದಿದೆ. ‘‘
View this post on Instagram
ನಟಿಯ ಕಾರಿನ ಹೊಸ ಫೋಟೋಗಳನ್ನು ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಇಷ್ಟೊಂದು ಹಣವನ್ನು ಅವರಂತೂ ಸಂಪಾದಿಸಿರುವುದಿಲ್ಲ, ಅವರ ತಂದೆಯ ಗಿಫ್ಟ್ ಇರಬಹುದು ಎಂದು ಅನೇಕರು ಭಾವಿಸಿದ್ದಾರೆ. ಅನೇಕರು ನಟಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಖುಷಿ ಕಪುರ್ ತಾಯಿ ಶ್ರೀದೇವಿಗೆ ಇಂದು (ಆಗಸ್ಟ್ 13) ಜನ್ಮದಿನ. ಈ ಸಂದರ್ಭದಲ್ಲೇ ಅವರು ಕಾರು ಖರೀದಿ ಮಾಡಿದ್ದು ವಿಶೇಷ.
ಇದನ್ನೂ ಓದಿ: ಅಕ್ಕ ಜಾನ್ಹವಿಯಂತೆ ತೆಲುಗಿಗೆ ಕಾಲಿಟ್ಟ ಖುಷಿ ಕಪೂರ್, ನಾಯಕ ಯಾರು?
ಝೋಯಾ ಅಖ್ತರ್ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾದಲ್ಲಿ ಖುಷಿ ಕಪೂರ್ ನಟಿಸಿದ್ದರು. ಈ ಸಿನಿಮಾದಲ್ಲಿ ಸುಹಾನಾ ಖಾನ್, ಅಗಸ್ತ್ಯ ನಂದ ಸೇರಿ ಅನೇಕ ಸೆಲೆಬ್ರಿಟಿಗಳು ನಟಿಸಿದ್ದರು. ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿದೆ. ಖುಷಿ ಕಪೂರ್ ಅವರು ವೇದಾಂಗ್ ರೈನಾ ಜೊತೆ ರಿಲೇಶನ್ಶಿಪ್ ಹೊಂದಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.