ಬಹುನಿರೀಕ್ಷಿತ ‘ಪಠಾಣ್’ ಸಿನಿಮಾ (Pathaan Movie) ಕುರಿತಂತೆ ಅನೇಕ ಇಂಟರೆಸ್ಟಿಂಗ್ ಸುದ್ದಿಗಳು ಕೇಳಿಬರುತ್ತಿದೆ. ಒಂದು ವರ್ಗದ ಜನರು ಈ ಸಿನಿಮಾಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ‘ಪಠಾಣ್’ ಚಿತ್ರದಲ್ಲಿ ಹಲವು ಬದಲಾವಣೆಗಳನ್ನು ಮಾಡುವಂತೆ ಸೆನ್ಸಾರ್ ಮಂಡಳಿ ಅಧಿಕಾರಿಗಳು ಸೂಚಿಸಿದ ಬಗ್ಗೆಯೂ ಇತ್ತೀಚೆಗೆ ಸುದ್ದಿ ಆಗಿತ್ತು. ಈಗ ಈ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಪ್ರಮಾಣಪತ್ರ ಸಿಕ್ಕಿದೆ. ಶಾರುಖ್ ಖಾನ್ (Shah Rukh Khan) ಅಭಿಮಾನಿಗಳಿಗೆ ಇದರಿಂದ ಖುಷಿ ಆಗಿದೆ. ಆದರೆ ಹಲವು ಕಡೆಗಳಲ್ಲಿ ಕತ್ತರಿ ಹಾಕಲಾಗಿದೆ. ಅಚ್ಚರಿ ಏನೆಂದರೆ ‘ಪಠಾಣ್’ ಚಿತ್ರದಲ್ಲಿ ಬರುವ ‘ಪ್ರಧಾನ ಮಂತ್ರಿ’ (Prime Minister) ಎಂಬ ಪದವನ್ನು ಅಧ್ಯಕ್ಷ ಅಥವಾ ಮಂತ್ರಿ ಎಂದು ಬದಲಿಸಲಾಗಿದೆ. ಈ ಕುರಿತು ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ.
‘ಪಠಾಣ್’ ಚಿತ್ರದ ‘ಬೇಷರಂ ರಂಗ್..’ ಹಾಡು ರಿಲೀಸ್ ಆದಾಗಿನಿಂದ ಇಲ್ಲಿಯತನಕ ಅನೇಕ ವಿವಾದಗಳು ಹುಟ್ಟಿಕೊಂಡಿವೆ. ಹಾಗಾಗಿ ಬಹಳ ಕಟ್ಟುನಿಟ್ಟಾಗಿ ಸೆನ್ಸಾರ್ ಮಂಡಳಿ ಸದಸ್ಯರು ಕತ್ತರಿ ಪ್ರಯೋಗ ಮಾಡಿದ್ದಾರೆ. ‘ಪ್ರಧಾನ ಮಂತ್ರಿ ಕಚೇರಿ’ ಎಂಬ ಪದವನ್ನು ತೆಗೆದು ಹಾಕಲಾಗಿದೆ. 13 ಕಡೆಗಳಲ್ಲಿ ಪ್ರಧಾನಿ ಮಂತ್ರಿ ಬದಲಿಗೆ ಬೇರೆ ಪದವನ್ನು ಹಾಕಲಾಗಿದೆ.
ಇದನ್ನೂ ಓದಿ: Vivek Agnihotri: ‘ಪಠಾಣ್ ಚಿತ್ರದ ವಿವಾದದಿಂದ ವಿವೇಕ್ ಅಗ್ನಿಹೋತ್ರಿ ಪ್ರಚಾರ ಪಡೆಯುತ್ತಿದ್ದಾರೆ’: ಕೆಆರ್ಕೆ ಆರೋಪ
ವಿವಾದ ಹುಟ್ಟುಹಾಕಿರುವ ‘ಬೇಷರಂ ರಂಗ್..’ ಹಾಡಿನ ಮೂರು ಕಡೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ದೀಪಿಕಾ ಪಡುಕೋಣೆ ಅವರ ಕೆಲವು ಕ್ಲೋಸಪ್ ಶಾಟ್ಗಳನ್ನು ತೆಗೆದುಹಾಕಲಾಗಿದೆ. ಕೇಸರಿ ಬಿಕಿನಿಗೆ ಸಂಬಂಧಿಸಿದಂತೆ ಯಾವ ಬದಲಾವಣೆ ಮಾಡಲಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಜನವರಿ 25ರಂದು ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಲಾಗಿದೆ. ಚಿತ್ರದ ಒಟ್ಟು ಅವಧಿ 2 ಗಂಟೆ 26 ನಿಮಿಷ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Bajrang Dal: ‘ಪಠಾಣ್’ ಚಿತ್ರದ ಪ್ರಚಾರಕ್ಕೆ ಭಜರಂಗ ದಳ ಅಡ್ಡಿ; ಚಿತ್ರಮಂದಿರಕ್ಕೆ ನುಗ್ಗಿ ದಾಂಧಲೆ
ನಿಯಮಾವಳಿಗಳ ಪ್ರಕಾರವೇ ಸೆನ್ಸಾರ್ ಪ್ರಕ್ರಿಯೆ ಮಾಡಲಾಗಿದೆ ಎಂದು ಸೆನ್ಸಾರ್ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಶಿ ಹೇಳಿದ್ದಾರೆ. ‘ಪಠಾಣ್’ ಚಿತ್ರದ ಶೀರ್ಷಿಕೆ ಬದಲಾಗಬೇಕು ಎಂದು ಕೆಲವರು ಒತ್ತಾಯ ಹೇರಿದ್ದರು. ಆದರೆ ಶೀರ್ಷಿಕೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಜನವರಿ 25ರಂದು ಅದ್ದೂರಿಯಾಗಿ ಈ ಸಿನಿಮಾ ರಿಲೀಸ್ ಆಗಲಿದೆ.
ಭಜರಂಗ ದಳ ಕಾರ್ಯಕರ್ತರು ‘ಪಠಾಣ್’ ಪ್ರಚಾರಕ್ಕೆ ಅಡ್ಡಿ ಪಡಿಸಿದ ಘಟನೆ ಗುಜರಾತ್ನಲ್ಲಿ ನಡೆದಿದೆ. ಚಿತ್ರಮಂದಿರವೊಂದರಲ್ಲಿ ಈ ಚಿತ್ರದ ಪೋಸ್ಟರ್ ಮತ್ತು ಸ್ಟ್ಯಾಂಡಿಗಳನ್ನು ಹಾಕಲಾಗಿತ್ತು. ಅದನ್ನು ಕಿತ್ತು ಹಾಕುವ ಮೂಲಕ ಭಜರಂಗ ದಳದ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.