ಶಾಹಿದ್ ಕಪೂರ್ ಖರೀದಿಸಿದರು ಹೊಸ ಮನೆ, ಬೆಲೆ ಇಷ್ಟೋಂದಾ?
ನಟ ಶಾಹಿದ್ ಕಪೂರ್ ಮುಂಬೈನ ಪ್ರತಿಷ್ಠಿತ ಏರಿಯಾನಲ್ಲಿ ಒಬೆರಾಯ್ ಅವರಿಂದ ನಿರ್ಮಿಸಲಾಗಿರುವ ಬೃಹತ್ ಅಪಾರ್ಟ್ಮೆಂಟ್ನಲ್ಲಿ ದೊಡ್ಡ ಫ್ಲ್ಯಾಟ್ ಒಂದನ್ನು ಖರೀದಿಸಿದ್ದಾರೆ. ಇದಕ್ಕೆ ಭಾರಿ ಮೊತ್ತದ ಬೆಲೆ ನೀಡಿದ್ದಾರೆ ಶಾಹಿದ್.
ಮುಂಬೈನಲ್ಲಿ ರಿಯಲ್ ಎಸ್ಟೇಟ್ (Real Estate) ಬೆಲೆಗಳು ಗಗನ ದಾಟಿವೆ. ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಮೌಲ್ಯ ಹೊಂದಿರುವ ವಿಶ್ವದ ಟಾಪ್ 10 ನಗರಗಳಲ್ಲಿ ಮುಂಬೈ ಸಹ ಒಂದು. ಮುಂಬೈನ ಕೆಲವು ಏರಿಯಾಗಳಲ್ಲಿ ಒಂದು ಚದರ ಅಡಿ ಜಾಗ ಖರೀದಿಸಲು ಲಕ್ಷಗಳು ನೀಡಬೇಕಾಗುತ್ತದೆ. ಬೆಲೆ ಮೇಲೇರಿ ಕುಳಿತಿರುವ ಈ ಸಮಯದಲ್ಲಿ ಬಾಲಿವುಡ್ನ ಸೆಲೆಬ್ರಿಟಿಗಳು ರಿಯಲ್ ಎಸ್ಟೇಟ್ ಮೇಲೆ ಸತತವಾಗಿ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಅಮಿತಾಬ್ ಬಚ್ಚನ್, ಹೃತಿಕ್ ರೋಷನ್, ದೀಪಿಕಾ, ಅನುಷ್ಕಾ, ಅಜಯ್ ದೇವಗನ್ ಇನ್ನೂ ಕೆಲವರು ರಿಯಲ್ ಎಸ್ಟೇಟ್ ಮೇಲೆ ಇತ್ತೀಚೆಗೆ ಹೂಡಿಕೆ ಮಾಡಿದ್ದಾರೆ. ಇದೀಗ ನಟ ಶಾಹಿದ್ ಕಪೂರ್ (Shahid Kapoor) ಪತ್ನಿಯ ಜೊತೆ ಗೂಡಿ ಹೊಸದೊಂದು ಐಶಾರಾಮಿ ಮನೆ ಖರೀದಿ ಮಾಡಿದ್ದಾರೆ.
ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ಮುಂಬೈನ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ವರ್ಲಿಯ ಐಶಾರಾಮಿ ಅಪಾರ್ಟ್ಮೆಂಟ್ ಒಂದರಲ್ಲಿ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದಾರೆ. ಒಬೆರಾಯ್ ರಿಯಾಲಿಟಿ ಪ್ರಾಜೆಕ್ಟ್ನಿಂದ ನಿರ್ಮಸಲಾದ ಅತ್ಯಂತ ಐಶಾರಾಮಿ ಅಪಾರ್ಟ್ಮೆಂಟ್ ನಲ್ಲಿ ಶಾಹಿದ್ ಹಾಗೂ ಮೀರಾ ಮನೆ ಖರೀದಿ ಮಾಡಿದ್ದಾರೆ. ಈ ಮನೆಗೆ ಇವರು ನೀಡಿರುವ ಮೊತ್ತ 59 ಕೋಟಿ ರೂಪಾಯಿಗಳು. ರಿಜಿಸ್ಟ್ರೇಷನ್ ಇತ್ಯಾದಿಗಳ ವೆಚ್ಚವೆಲ್ಲ ಸೇರಿ ಮನೆಯ ಬೆಲೆ ಸುಮಾರು 63 ಕೋಟಿ ರೂಪಾಯಿಗಳಾಗಿದೆ.
ಶಾಹಿದ್ ಹಾಗೂ ಮೀರಾ ಖರೀದಿಸಿರುವ ಮನೆ 5395 ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಮನೆಗೆ ಮೂರು ಪಾರ್ಕಿಂಗ್ ಸ್ಪೇಸ್ ನೀಡಲಾಗಿದೆ. ಶಾಹಿದ್ ಹಾಗೂ ಮೀರಾ ಅವರ ಫ್ಲ್ಯಾಟ್ ಬೃಹತ್ ಅಪಾರ್ಟ್ಮೆಂಟ್ನ ಬಿ ಟವರ್ನ 24ನೇ ಮಹಡಿಯಲ್ಲಿದೆ. ಈ ಮೊದಲು ಇದೇ ಫ್ಲ್ಯಾಟ್ ಅನ್ನು ಚಂದಕ್ ರಿಯಾಲ್ಟರ್ಸ್ನವರು ಚದರ ಅಡಿಗೆ 60 ಸಾವಿರ ರೂಪಾಯಿ ಬೆಲೆಯಂತೆ ಖರೀದಿ ಮಾಡಿದ್ದರು. ಅದೇ ಫ್ಲ್ಯಾಟ್ ಅನ್ನು ಈಗ ಶಾಹಿದ್ ಹಾಗೂ ಮೀರಾ 1 ಲಕ್ಷ ಕ್ಕೂ ಹೆಚ್ಚಿನ ಬೆಲೆ ಕೊಟ್ಟು ಖರೀದಿ ಮಾಡಿದ್ದಾರೆ. ಈ ಜಾಗದಲ್ಲಿ ರಿಯಲ್ ಎಸ್ಟೇಟ್ ಬೆಲೆ ವರ್ಷಕ್ಕೆ 50% ಹೆಚ್ಚಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ:‘ನನ್ನ ಮಾಜಿ ಗೆಳತಿಯರಿಂದ ಮೋಸ ಹೋಗಿದ್ದೇನೆ’; ಒಪ್ಪಿಕೊಂಡ ಶಾಹಿದ್ ಕಪೂರ್
ವಿಶೇಷವೆಂದರೆ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ಅವರು ಇದೇ ಅಪಾರ್ಟ್ಮೆಂಟ್ನಲ್ಲಿ ಇನ್ನೊಂದು ಫ್ಲ್ಯಾಟ್ ಅನ್ನು ಈಗಾಗಲೇ ಹೊಂದಿದ್ದಾರೆ. 2018ರಲ್ಲಿಯೇ 8281 ಚದರ ಅಡಿಯ ದೊಡ್ಡ ಫ್ಲ್ಯಾಟ್ ಅನ್ನು ಶಾಹಿದ್ ಹಾಗೂ ಮೀರಾ ಖರೀದಿ ಮಾಡಿದ್ದರು. ಆಗ ಆ ಬೃಹತ್ ಫ್ಲ್ಯಾಟ್ಗೆ 55 ಕೋಟಿ ರೂಪಾಯಿ ಹಣ ನೀಡಿದ್ದರು ಶಾಹಿದ್ ಹಾಗೂ ಮೀರಾ ನೀಡಿದ್ದರು.
ಶಾಹಿದ್ ಕಪೂರ್ ಪ್ರಸ್ತುತ ‘ದೇವ’ ಹೆಸರಿನ ಆಕ್ಷನ್ ಥ್ರಿಲ್ಲರ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಶಾಹಿದ್ ಈ ಹಿಂದೆ ನಟಿಸಿದ್ದ ‘ತೇರಿ ಬಾತೋಮೆ ಐಸಾ ಉಲ್ಜಾ ಜಿಯಾ’ ಸಿನಿಮಾ ಫ್ಲಾಪ್ ಆಗಿದೆ. ಶಾಹಿದ್ ತೆಲುಗಿನ ಸೂಪರ್ ಹಿಟ್ ಸಿನಿಮಾ ಒಂದರ ರೀಮೇಕ್ನಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ