ನೆಲಕಚ್ಚಿತ್ತು ಮತ್ತೊಂದು ಬಾಲಿವುಡ್ನ ಬಿಗ್ ಬಜೆಟ್ ಸಿನಿಮಾ; ರಿಮೇಕ್ ಮಾಡಿ ಕೈ ಸುಟ್ಟುಕೊಂಡ ನಿರ್ಮಾಪಕ
ಶಾಹಿದ್ ಕಪೂರ್ ನಟನೆಯ ‘ದೇವಿ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭಾರೀ ಸೋಲು ಕಂಡಿದೆ. ಮಲಯಾಳಂ ಚಿತ್ರದ ರಿಮೇಕ್ ಆಗಿರುವ ಈ ಚಿತ್ರವು 50 ಕೋಟಿ ರೂಪಾಯಿ ಬಜೆಟ್ ಹೊಂದಿದ್ದರೂ, ಮೊದಲ ದಿನ ಕೇವಲ 5 ಕೋಟಿ ರೂಪಾಯಿ ಮಾತ್ರ ಗಳಿಸಿದೆ. ಇದು ಬಾಲಿವುಡ್ನಲ್ಲಿ ರಿಮೇಕ್ ಚಿತ್ರಗಳಿಗೆ ಇರುವ ಸಮಸ್ಯೆಯನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ.

ಬಾಲಿವುಡ್ನಲ್ಲಿ ರಿಮೇಕ್ ಸಿನಿಮಾಗಳಿಗೆ ಬರವಿಲ್ಲ. ದಕ್ಷಿಣದ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಬಾಲಿವುಡ್ ಮಂದಿ ರಿಮೇಕ್ ಮಾಡಿದ್ದಾರೆ. ಈ ರೀತಿ ಮಾಡಿ ಕೈ ಸುಟ್ಟುಕೊಂಡವರೇ ಹೆಚ್ಚು. ಈಗ ಬಾಲಿವುಡ್ನಲ್ಲಿ ಮತ್ತೊಂದು ಬಿಗ್ ಬಜೆಟ್ ಚಿತ್ರ ಫ್ಲಾಪ್ ಆಗೋ ಸೂಚನೆ ಸಿಕ್ಕಿದೆ. ಅದು ಶಾಹಿದ್ ಕಪೂರ್ ನಟನೆಯ ‘ದೇವ’ ಚಿತ್ರ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 5 ಕೋಟಿ ರೂಪಾಯಿ.
ಶಾಹಿದ್ ಕಪೂರ್ ಅವರು ಬೇಡಿಕೆಯ ಹೀರೋ ಎನಿಸಿಕೊಂಡಿದ್ದರು, ಆದರೆ, ನಂತರ ಕೆಲವು ಫ್ಲಾಪ್ ಕೊಟ್ಟು ಅವರು ಕಷ್ಟಕ್ಕೆ ಸಿಲುಕಿದ್ದರು. ‘ಕಬೀರ್ ಸಿಂಗ್’ ಗೆಲುವಿನ ಬಳಿಕ ಅವರು ಮತ್ತೆ ಬಾಲಿವುಡ್ನಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಂಡರು. ಈ ಕಾರಣಕ್ಕೆ ಹಲವು ನಿರ್ಮಾಪಕರು ಅವರ ಕಾಲ್ಶೀಟ್ಗಾಗಿ ಬೇಡಿಕೆ ಇಟ್ಟಿದ್ದರು. ಅದೇ ರೀತಿ ‘ದೇವ’ ಚಿತ್ರವನ್ನು ಬಿಗ್ ಬಜೆಟ್ನಲ್ಲಿ ಮಾಡಲಾಯಿತು. ಆದರೆ, ಇದರಿಂದ ನಿರ್ಮಾಪಕರಿಗೆ ನಷ್ಟ ಉಂಟಾಗುವ ಸೂಚನೆ ಸಿಕ್ಕಿದೆ.
ಜನವರಿ 31ರಂದು ರಿಲೀಸ್ ಆದ ‘ದೇವ’ ಸಿನಿಮಾದ ಬಜೆಟ್ 50 ಕೋಟಿ ರೂಪಾಯಿ. ಆದರೆ, ಸಿನಿಮಾ ಮೊದಲ ದಿನ ಗಳಿಸಿದ್ದು 5 ಕೋಟಿ ರೂಪಾಯಿ ಮಾತ್ರ. ಹೀಗೆ ಮುಂದುವರಿದರೆ ಸಿನಿಮಾ ನಷ್ಟ ಅನುಭವಿಸುವ ಸೂಚನೆ ಸಿಕ್ಕಿದೆ. ಇದು ಮಲಯಾಳಂನ ‘ಮುಂಬೈ ಪೊಲೀಸ್’ ಚಿತ್ರದ ರಿಮೇಕ್. ಬಾಲಿವುಡ್ನವರು ಮತ್ತೊಂದು ರಿಮೇಕ್ ಮಾಡಿ ಸೋಲು ಅನುಭವಿಸಿದರು ಎನ್ನುವ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: ಮಾಜಿ ಪ್ರೇಯಸಿಯ ಪತಿಗೆ ಚೂರಿ ಇರಿತ ಆಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಶಾಹಿದ್ ಕಪೂರ್
ಜೀ ಸ್ಟುಡಿಯೋ ಹಾಗೂ ರಾಯ್ ಕಪೂರ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಸಿದ್ದಾರ್ಥ್ ರಾಯ್ ಕಪೂರ್ ಹಾಗೂ ಉಮೇಶ್ ಬನ್ಸಲ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಲಯಾಳಂ ಸಿನಿಮಾ ನಿರ್ದೇಶಕ ರೋಷನ್ ಆ್ಯಂಡ್ರೀವ್ಸ್ ‘ದೇವ’ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ಸತತ ಸೋಲು ಕಂಡಿರೋ ಪೂಜಾ ಹೆಗ್ಡೆ ಈ ಚಿತ್ರಕ್ಕೆ ನಾಯಕಿ. ಅವರು ಈ ಚಿತ್ರದ ಮೂಲಕ ಗೆಲ್ಲುವ ಭರವಸೆಯಲ್ಲಿ ಇದ್ದರು. ಆದರೆ, ಅದು ಸಾಧ್ಯವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.