ಸಲ್ಮಾನ್ ಖಾನ್-ಅನಂತ್ ಅಂಬಾನಿ ಒಟ್ಟಾಗಿ ಕುಂಭಮೇಳಕ್ಕೆ ತೆರಳಿದ್ದು ನಿಜವೇ?
ಸಲ್ಮಾನ್ ಖಾನ್ ಮತ್ತು ಅನಂತ್ ಅಂಬಾನಿ ಅವರು ಪ್ರಯಾಗ್ ರಾಜ್‌ನ ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ ಎಂಬ ವೈರಲ್ ವಿಡಿಯೋ ಸುಳ್ಳು ಎಂದು ಸ್ಪಷ್ಟಪಡಿಸಲಾಗಿದೆ. ಈ ವಿಡಿಯೋ ಕಳೆದ ವರ್ಷ ಡಿಸೆಂಬರ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು ಮತ್ತು ಜಾಮ್‌ನಗರದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿದೆ. .

ಮಹಾಕುಂಭ ಮೇಳ ಪ್ರಯಾಗ್ರಾಜ್ನಲ್ಲಿ ಜರುಗುತ್ತಿದೆ. ಈಗಾಗಲೇ ಅಲ್ಲಿನ ಮ್ಯಾನೇಜ್ಮೆಂಟ್ ವಿವಿಐಪಿ ಪಾಸ್ಗಳನ್ನು ರದ್ದು ಮಾಡಿದ್ದು, ಮಹಾಕುಂಭ ಜಾಗವನ್ನು ವೇಹಿಕಲ್ ರಹಿತ್ ಪ್ರದೇಶ ಎಂದು ಮಾಡಿದ್ದಾರೆ. ಹೀಗಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಲ್ಮಾನ್ ಖಾನ್ ಹಾಗೂ ಉದ್ಯಮಿ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮಹಾಕುಂಭ ಮೇಳಕ್ಕೆ ಬರುವ ರೀತಿಯಲ್ಲಿ ತೋರಿಸಲಾಗಿದೆ. ಆದರೆ, ಇದು ಸುಳ್ಳು ಎಂಬುದು ಸ್ಪಷ್ಟವಾಗಿದೆ.
‘ಅನಂತ್ ಅಂಬಾನಿ, ಸಲ್ಮಾನ್ ಖಾನ್ ಅವರು ಮಹಾಕುಂಭ ಮೇಳಕ್ಕೆ ಸ್ನಾನ ಮಾಡಲು ಬರುತ್ತಿರುವ ವಿಡಿಯೋ’ ಎಂದು ವೈರಲ್ ಮಾಡಲಾಗಿದೆ. ‘ಮಹಾಕುಂಭದಲ್ಲಿ ಮುಸ್ಲಿಮರ ಮೇಲೆ ಹಲ್ಲೆ ನಡೆಸುತ್ತಿದ್ದವರಿಗೆ ಧೈರ್ಯವಿದ್ದರೆ ಈಗ ಸಲ್ಮಾನ್ ಖಾನ್ ಜೊತೆ ಅನುಚಿತವಾಗಿ ವರ್ತಿಸಲಿ’ ಎಂದು ಕೂಡ ಬರೆದುಕೊಳ್ಳಲಾಯಿತು. ಆದರೆ, ಈ ವಿಡಿಯೋದ ಅಸಲಿಯತ್ತು ಬೇರೆಯೇ ಇದೆ.
ಈ ವಿಡಿಯೋ ಅಸಲಿಗೆ ಮೊದಲ ಬಾರಿಗೆ ಪೋಸ್ಟ್ ಆಗಿದ್ದು ಕಳೆದ ವರ್ಷ ಡಿಸೆಂಬರ್‌ನಲ್ಲಿ. ಎಂಜೆ ವಿಶಾಕ್ ಹಾಗೂ ಅಭಿಷೇಕ್ ಠಾಕೂರ್ ಇದನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋ ಮಹಾಕುಂಭದ್ದು ಎಂದು ವೈರಲ್ ಮಾಡಲಾಗುತ್ತಿದೆ. ಸಲ್ಮಾನ್, ಅನಂತ್ ಹಾಗೂ ರಾಧಿಕಾ ಅವರು ಜಾಮ್ನಗರ್ಗೆ ಬಂದಿದ್ದರು. ಇದನ್ನು ಕುಂಭ ಮೇಳದ ವಿಡಿಯೋ ಎಂದು ವೈರಲ್ ಮಾಡಲಾಗಿದೆ.
जो लोग महाकुंभ प्रयागराज में मुस्लिमों के साथ मार-पीट कर रहे थे यदि उन में हिम्मत है तो अब सलमान खान के साथ दुर्व्यवहार करके दिखाएं…. pic.twitter.com/WrhT1UIuwc
— Balbir Singh Narwal (@BalbirS772965) January 28, 2025
अनन्त अम्बानी के साथ सलमान खान भी आये महाकुंभ में डुबकी लगाने। pic.twitter.com/TdsbaWbbuy
— Keshav sharma (@Keshavpandit123) January 27, 2025
ಕೆಲವು ವರದಿಗಳ ಪ್ರಕಾರ ಸಲ್ಮಾನ್ ಖಾನ್ ಅವರು ತಮ್ಮ ಬರ್ತ್ಡೇನ ಜಾಮ್ ನಗರದಲ್ಲಿ ಆಚರಿಸಿಕೊಂಡರು. ಈ ವೇಳೆ ಅನಂತ್ ಹಾಗೂ ರಾಧಿಕಾ ಬಂದಿದ್ದರು ಎನ್ನಲಾಗಿದೆ. ಅಲ್ಲಿಯೇ ‘ಸಿಖಂದರ್’ ಚಿತ್ರದ ಟೀಸರ್ ಕೂಡ ಲಾಂಚ್ ಆಗಿತ್ತು.
ಹೀಗಾಗಿ ಸಲ್ಮಾನ್ ಖಾನ್ ಅವರು ಮಹಾಕುಂಭ ಮೇಳದಲ್ಲಿ ಭಾಗಿ ಆಗಿದ್ದರು ಎಂಬುದರಲ್ಲಿ ಯಾವುದೇ ನಿಜವಿಲ್ಲ. ಆದಾಗ್ಯೂ ಅನೇಕರು ಈ ವಿಡಿಯೋನ ವೈರಲ್ ಮಾಡುತ್ತಿದ್ದಾರೆ. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಸುಳ್ಳು ಸುದ್ದಿಗಳನ್ನು ನಂಬುವ ಮೊದಲು ಎಚ್ಚರಿಕೆ ವಹಿಸಿ ಎಂದು ಕೋರಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ನಡೆಸಿಕೊಡಲು ಸಲ್ಮಾನ್ ಖಾನ್ ತೆಗೆದುಕೊಂಡ ಸಂಭಾವನೆ ಎಷ್ಟು?
ಸಲ್ಮಾನ್ ಖಾನ್ ಅವರು ಸದ್ಯ ‘ಸಿಖಂದರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ವರ್ಷ ಈದ್ಗೆ ಸಿನಿಮಾ ರಿಲೀಸ್ ಆಗಲಿದೆ. ರಶ್ಮಿಕಾ ಅವರು ಚಿತ್ರದ ನಾಯಕಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:07 am, Sat, 1 February 25