
ದಕ್ಷಿಣದ ಸಿನಿಮಾಗಳಲ್ಲಿ ಬಾಲಿವುಡ್ (Bollywood) ನಟ-ನಟಿಯರು ನಟಿಸುವುದೇ ಅಪರೂಪವಾಗಿತ್ತು. ನಟಿಸಿದರೂ ಸಹ ಅವರ ವರಸೆ ಬೇರೆಯದ್ದೇ ರೀತಿ ಇರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಾಲಿವುಡ್ನ ಸೂಪರ್ ಸ್ಟಾರ್ ನಟ-ನಟಿಯರು ಸಹ ದಕ್ಷಿಣದ ಸಿನಿಮಾಗಳಲ್ಲಿ ನಟಿಸಲು ತುದಿಗಾಲಲ್ಲಿ ನಿಂತಿದ್ದಾರೆ. ದಕ್ಷಿಣದ ಚಿತ್ರರಂಗದ ಬಗ್ಗೆ ಉಡಾಫೆ ಭಾವ ಹೊಂದಿದ್ದ ಸಲ್ಮಾನ್ ಖಾನ್, ಆಮಿರ್ ಖಾನ್, ಸೈಫ್ ಅಲಿ ಖಾನ್, ಅಮಿತಾಬ್ ಬಚ್ಚನ್, ಹೃತಿಕ್ ರೋಷನ್ ಅಂಥಹವರೇ ಇದೀಗ ದಕ್ಷಿಣ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟ ದಕ್ಷಿಣದತ್ತ ಬಂದಿದ್ದು, ಇದು ಅವರ ಮೊದಲ ದಕ್ಷಿಣ ಭಾರತದ ಸಿನಿಮಾ ಆಗಿದೆ.
ಜೂನಿಯರ್ ಎನ್ಟಿಆರ್ ನಟಿಸಿ ಕನ್ನಡದ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾ ಈಗಾಗಲೇ ಹಲವು ಸ್ಟಾರ್ ನಟ-ನಟಿಯರನ್ನು ಹೊಂದಿದ್ದು, ಇದೀಗ ಈ ಸಿನಿಮಾಕ್ಕೆ ಬಾಲಿವುಡ್ನ ಇಬ್ಬರು ಸ್ಟಾರ್ ನಟ ಮತ್ತು ನಟಿ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್ನ ನಂಬರ್ 1 ನಟಿ ಎನಿಸಿಕೊಂಡಿರುವ ಆಲಿಯಾ ಭಟ್ ಅವರು ‘ಡ್ರ್ಯಾಗನ್’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಸುದ್ದಿ ಈಗಾಗಲೇ ವೈರಲ್ ಆಗಿದೆ. ಆಲಿಯಾ ಭಟ್ ಅವರ ಜೊತೆಗೆ ಇದೇ ಸಿನಿಮಾನಲ್ಲಿ ಬಾಲಿವುಡ್ನ ಸ್ಟಾರ್ ನಟ ಶಾಹಿದ್ ಕಪೂರ್ ಸಹ ನಟಿಸುತ್ತಿದ್ದಾರೆ.
ರಾಜಮೌಳಿ ನಿರ್ದೇಶಿಸಿದ್ದ ‘ಆರ್ಆರ್ಆರ್’ ಸಿನಿಮಾದ ಮೂಲಕ ಆಲಿಯಾ ಭಟ್ ದಕ್ಷಿಣ ಚಿತ್ರರಂಗಕ್ಕೆ ಕಾಲಿರಿಸಿದ್ದರು. ಆ ಸಿನಿಮಾನಲ್ಲಿ ಅವರು ರಾಮ್ ಚರಣ್ಗೆ ಜೋಡಿಯಾಗಿ ನಟಿಸಿದ್ದರು. ಜೂ ಎನ್ಟಿಆರ್ ಜೊತೆಗೆ ಒಂದೇ ಒಂದು ಸೀನ್ನಲ್ಲಿ ನಟನೆ ಮಾಡಿದ್ದರು. ಹಾಗೂ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ತೆಲುಗು ಚಿತ್ರರಂಗಕ್ಕೆ ಕಾಲಿರಿಸಿದ್ದು, ಜೂ ಎನ್ಟಿಆರ್ ಸಿನಿಮಾನಲ್ಲಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಆ ಮೂಲಕ ಇದು ಅವರಿಗೆ ಎರಡನೇ ತೆಲುಗು ಸಿನಿಮಾ ಆಗಲಿದೆ. ಇದರ ಜೊತೆಗೆ ಶಾಹಿದ್ ಕಪೂರ್ ಸಹ ಈ ಸಿನಿಮಾನಲ್ಲಿ ನಟಿಸಲಿದ್ದು, ಇದು ಅವರಿಗೆ ಮೊದಲ ತೆಲುಗು ಸಿನಿಮಾ ಆಗಿದೆ.
ಇದನ್ನೂ ಓದಿ:ಸಂಭ್ರಮಿಸುವ ಸಮಯದಲ್ಲಿ ಬಾಲಿವುಡ್ ನಟ ಇಮ್ರಾನ್ ಹಶ್ಮಿಗೆ ಹಂದಿ ಜ್ವರ
ಶಾಹಿದ್ ಕಪೂರ್ ಅವರಿಗೆ ದಕ್ಷಿಣದ ಸಿನಿಮಾಗಳು ಹೊಸದೇನೂ ಅಲ್ಲ. ‘ಅರ್ಜುನ್ ರೆಡ್ಡಿ’, ‘ಜೆರ್ಸಿ’ ಸೇರಿದಂತೆ ಇನ್ನೂ ಕೆಲವು ದಕ್ಷಿಣದ ಸಿನಿಮಾಗಳ ರೀಮೇಕ್ನಲ್ಲಿ ಶಾಹಿದ್ ಕಪೂರ್ ನಟನೆ ಮಾಡಿದ್ದಾರೆ. ಶಾಹಿದ್ ಕಪೂರ್ ನಟನೆಯ ‘ಕಾಕ್ಟೇಲ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಯಶಸ್ಸು ಗಳಿಸಿತ್ತು. ಇದೀಗ ಅವರು ತೆಲುಗು ಸಿನಿಮಾನಲ್ಲಿ ನಟಿಸುತ್ತಿದ್ದಾರೆ.
‘ಡ್ರ್ಯಾಗನ್’ ಸಿನಿಮಾನಲ್ಲಿ ಹಲವು ದೊಡ್ಡ ಕಲಾವಿದರು ನಟನೆ ಮಾಡುತ್ತಿದ್ದಾರೆ. ಜೂ ಎನ್ಟಿಆರ್ ನಾಯಕನಾಗಿರುವ ಈ ಸಿನಿಮಾನಲ್ಲಿ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿ. ಸಿನಿಮಾನಲ್ಲಿ ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಇದ್ದಾರೆ. ಮಲಯಾಳಂನ ಬಿಜು ಮೆನನ್, ಗುರು ಸೋಮಸುಂದರಂ, ಆಶುತೋಶ್ ರಾಣಾ ಇನ್ನೂ ಕೆಲವು ದೊಡ್ಡ ಕಲಾವಿದರು ಈ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ