AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಭ್ರಮಿಸುವ ಸಮಯದಲ್ಲಿ ಬಾಲಿವುಡ್​​ ನಟ ಇಮ್ರಾನ್ ಹಶ್ಮಿಗೆ ಹಂದಿ ಜ್ವರ

Emraan Hashmi Health: ಇಮ್ರಾನ್ ಹಶ್ಮಿ ಅವರಿಗೆ ಸ್ವಾನ್ ಫ್ಲೂ (H1N1) ಅಥವಾ ಹಂದಿ ಜ್ವರದ ಸೋಂಕಿರುವುದು ದೃಢಪಟ್ಟಿದೆ. ಮುಂಬೈನಲ್ಲಿ ಅವರಿಗೆ ಈ ಸೋಂಕು ತಗುಲಿರುವುದು ತಿಳಿದುಬಂದಿದೆ. ವೈದ್ಯಕೀಯ ವರದಿಯ ಸಾಕ್ಷಿಯೊಂದಿಗೆ ಅವರ ಪ್ರತಿನಿಧಿಯೂ ಇದನ್ನು ಖಚಿತಪಡಿಸಿದ್ದಾರೆ. ಇತ್ತೀಚೆಗೆ ದೆಹಲಿ, ಮುಂಬೈ ನಗರಗಳಲ್ಲಿ H1N1 (ಸ್ವಾನ್ ಫ್ಲೂ) ಸೋಂಕುಗಳು ತೀವ್ರವಾಗಿ ಹೆಚ್ಚಾಗಿವೆ. ರಾಜಧಾನಿಯಲ್ಲಿ ಈವರೆಗೆ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಕೆಲ ದಿನಗಳ ಹಿಂದಷ್ಟೆ ಅವರು ಕೆಲಸದ ನಿಮಿತ್ತ ರಾಂಚಿಗೆ ಹೋಗಿದ್ದರಂತೆ.

ಸಂಭ್ರಮಿಸುವ ಸಮಯದಲ್ಲಿ ಬಾಲಿವುಡ್​​ ನಟ ಇಮ್ರಾನ್ ಹಶ್ಮಿಗೆ ಹಂದಿ ಜ್ವರ
Emran Hashmi
ಮಂಜುನಾಥ ಸಿ.
|

Updated on: Aug 29, 2026 | 9:18 PM

Share

ಮುಖ್ಯಾಂಶಗಳು

  • ಬಾಲಿವುಡ್​ನ ಸ್ಟಾರ್ ನಟ ಇಮ್ರಾನ್ ಹಶ್ಮಿ
  • ಇಮ್ರಾನ್ ಹಶ್ಮಿ ಅವರಿಗೆ ಹಂದಿ ಜ್ವರ ಧೃಡಗೊಂಡಿದೆ
  • ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಮುಂದೂಡಿದ್ದಾರೆ.

ಇಮ್ರಾನ್ ಹಶ್ಮಿ (Emraan Hashmi) ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಬಾಲಿವುಡ್​​ನಲ್ಲಿದ್ದಾರೆ. ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಶಕಗಳಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಸಹ ಇಮ್ರಾನ್ ಹಶ್ಮಿ ಸ್ಟಾರ್ ಎನಿಸಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ಇಮ್ರಾನ್ ಹಶ್ಮಿ ಅವರಿಗೆ ಒಂದು ಕಲ್ಟ್ ಫಾಲೋವಿಂಗ್ ಹುಟ್ಟಿಕೊಂಡಿತ್ತು. ಇತ್ತೀಚೆಗಷ್ಟೆ ಇಮ್ರಾನ್ ಹಶ್ಮಿ ನಟಿಸಿರುವ ‘ಆವಾರಾಪನ್ 2’ ಸಿನಿಮಾ ರಿಲೀಸ್ ಆಗಿ, ಸೂಪರ್ ಹಿಟ್ ಎನಿಸಿಕೊಂಡಿತು. ಎರಡು ದಶಕದಲ್ಲಿ ಇಮ್ರಾನ್ ಅವರ ಬಹು ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಂಡಿತು ‘ಆವಾರಾಪನ್ 2’. ಆದರೆ ಆ ಖುಷಿಯನ್ನು ಅನುಭವಿಸುವ ಸಮಯದಲ್ಲಿಯೇ ಇಮ್ರಾನ್ ಹಶ್ಮಿಗೆ ಹಂದಿ ಜ್ವರ ಬಂದಿದೆ!

ಇಮ್ರಾನ್ ಹಶ್ಮಿ ಅವರಿಗೆ ಸ್ವಾನ್ ಫ್ಲೂ (H1N1) ಅಥವಾ ಹಂದಿ ಜ್ವರದ ಸೋಂಕಿರುವುದು ದೃಢಪಟ್ಟಿದೆ. ಮುಂಬೈನಲ್ಲಿ ಅವರಿಗೆ ಈ ಸೋಂಕು ತಗುಲಿರುವುದು ತಿಳಿದುಬಂದಿದೆ. ವೈದ್ಯಕೀಯ ವರದಿಯ ಸಾಕ್ಷಿಯೊಂದಿಗೆ ಅವರ ಪ್ರತಿನಿಧಿಯೂ ಇದನ್ನು ಖಚಿತಪಡಿಸಿದ್ದಾರೆ. ಇತ್ತೀಚೆಗೆ ದೆಹಲಿ, ಮುಂಬೈ ನಗರಗಳಲ್ಲಿ H1N1 (ಸ್ವಾನ್ ಫ್ಲೂ) ಸೋಂಕುಗಳು ತೀವ್ರವಾಗಿ ಹೆಚ್ಚಾಗಿವೆ. ರಾಜಧಾನಿಯಲ್ಲಿ ಈವರೆಗೆ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಕೆಲ ದಿನಗಳ ಹಿಂದಷ್ಟೆ ಅವರು ಕೆಲಸದ ನಿಮಿತ್ತ ರಾಂಚಿಗೆ ಹೋಗಿದ್ದರಂತೆ. ಅಲ್ಲಿಂದ ಬಂದ ಬಳಿಕ ಅವರಿಗೆ ಅನಾರೋಗ್ಯ ಕಾಡಲು ಶುರುವಾಗಿದೆ. ವೈದ್ಯರ ಸಲಹೆಯಂತೆ ಪರೀಕ್ಷೆಗೆ ಒಳಪಟ್ಟಾಗ ಅವರಿಗೆ ಹಂದಿ ಜ್ವರ ಇರುವುದು ಖಾತ್ರಿ ಆಗಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾದ ಟಿಕೆಟ್ ಖರೀದಿಸಿದ ಬಾಲಿವುಡ್ ನಿರ್ದೇಶಕ ಸಿದ್ದಾರ್ಥ್ ಆನಂದ್

ಇಮ್ರಾನ್ ಹಶ್ಮಿ ಅವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ಇವೆಂಟ್ ಒಂದರಲ್ಲಿ ಭಾಗವಹಿಸಬೇಕಿತ್ತು. ಅದಕ್ಕಾಗಿ ಟಿಕೆಟ್​​ಗಳ ಮಾರಾಟವನ್ನು ಸಹ ಮಾಡಲಾಗಿತ್ತು. ಆದರೆ ಇದೀಗ ಅವರಿಗೆ ಹಂದಿ ಜ್ವರ ಖಾತ್ರಿ ಆಗಿರುವ ಕಾರಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಇಮ್ರಾನ್ ಹಶ್ಮಿ, ‘ಶೋ ಮುಗಿದಿಲ್ಲ ಬದಲಿಗೆ ಮುಂದೂಡಲ್ಪಟ್ಟಿದೆ ಅಷ್ಟೆ’ ಎಂದಿದ್ದಾರೆ. ಈಗಾಗಲೇ ಟಿಕೆಟ್ ಖರೀದಿ ಮಾಡಿರುವವರ ಟಿಕೆಟ್​​ಗಳು ಮಾನ್ಯವಾಗಿರುತ್ತವೆ. ಸೆಪ್ಟೆಂಬರ್ 12 ರಂದು ಕಾರ್ಯಕ್ರಮ ನಡೆಯಲಿದೆ’ ಎಂದಿದ್ದಾರೆ ಇಮ್ರಾನ್ ಹಶ್ಮಿ.

ಇಮ್ರಾನ್ ಹಶ್ಮಿ ನಟಿಸಿರುವ ‘ಆವಾರಾಪನ್ 2’ ಸಿನಿಮಾ ಕೆಲವೇ ದಿನಗಳ ಹಿಂದಷ್ಟೆ ರಿಲೀಸ್ ಆಗಿದ್ದು ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಸಿನಿಮಾ 200 ಕೋಟಿ ಗಳಿಕೆ ದಾಟಿ ಮುನ್ನುಗ್ಗುತ್ತಿದೆ. ಇದು ಇಮ್ರಾನ್ ಹಶ್ಮಿ ಅವರ ವೃತ್ತಿ ಜೀವನದ ಈ ವರೆಗಿನ ಅತಿ ದೊಡ್ಡ ಸಿನಿಮಾ ಆಗಿ ಹೊರಹೊಮ್ಮಿದೆ. ಈ ಸಿನಿಮಾದಿಂದಾಗಿ ಇಮ್ರಾನ್ ಹಶ್ಮಿಗೆ ಅಚಾನಕ್ಕಾಗಿ ಮತ್ತೆ ಬೇಡಿಕೆ, ಜನಪ್ರಿಯತೆ ಗುದುರಿದೆ.

ಹಂದಿ ಜ್ವರದ ಬಗ್ಗೆ

H1N1 ಯಾವುದೇ ಸಾಮಾನ್ಯ ವೈರಲ್ ಜ್ವರದಂತೆಯೇ ಕಾಣಿಸಿಕೊಳ್ಳುತ್ತದೆ. ಹಠಾತ್ ಜ್ವರ, ಮೈಕೈ ನೋವು, ಗಂಟಲು ನೋವು, ಕೆಮ್ಮು, ಮೂಗು ಸೋರುವಿಕೆ ಮತ್ತು ಸುಸ್ತು ಕಾಣಿಸಿಕೊಳ್ಳುತ್ತದೆ. H1N1 ಅಥವಾ ಹಂದಿ ಜ್ವರದಲ್ಲಿ ಜ್ವರವು ಅಧಿಕವಾಗಿರುತ್ತದೆ, ಉಸಿರಾಟದ ತೊಂದರೆ ಅಥವಾ ಎದೆ ನೋವು ಹೆಚ್ಚು ಸ್ಪಷ್ಟವಾಗಿರುತ್ತದೆ ಮತ್ತು ಜ್ವರ ಬೇಗನೆ ತಗ್ಗುವುದಿಲ್ಲ. ಈ ಸೋಂಕಿನಲ್ಲಿ ಉಸಿರಾಟದ ತೊಂದರೆ, ನಿರಂತರ ಎದೆ ನೋವು ಅಥವಾ ಬಿಗಿತ, ತುಟಿಗಳು ನೀಲಿ ಬಣ್ಣಕ್ಕೆ ತಿರುಗುವುದು, ನಾಲ್ಕೈದು ದಿನಗಳಿಗೂ ಹೆಚ್ಚು ಕಾಲ ಕೆಮ್ಮು ಉಲ್ಬಣಗೊಳ್ಳುವುದು, ತಂಪಾದ ಅನುಭವ, ಮಕ್ಕಳಲ್ಲಿ ಮೂತ್ರ ವಿಸರ್ಜನೆ ಕಡಿಮೆಯಾಗುವುದು ಕಂಡುಬರುತ್ತದೆ. ವೈದ್ಯರ ಸಲಹೆ ಮತ್ತು ಚಿಕಿತ್ಸೆ ಅತ್ಯಗತ್ಯವಾಗಿರುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ