‘ಕತ್ರಿನಾಗೆ ಒಂದು ಲೈನ್ ಡೈಲಾಗ್ ಹೇಳಲೂ ಬರುತ್ತಿರಲಿಲ್ಲ’: ಅಸಲಿ ವಿಷಯ ತಿಳಿಸಿದ ನಟ

|

Updated on: Jun 05, 2024 | 3:46 PM

ನಟಿ ಕತ್ರಿನಾ ಕೈಫ್​ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2003ರಲ್ಲಿ ತೆರೆಕಂಡ ‘ಬೂಮ್​’ ಚಿತ್ರದ ಮೂಲಕ. ‘ಕತ್ರಿನಾ ಕೈಫ್​ ಅವರನ್ನು ನೋಡಿ. ಬೂಮ್​ ಸಿನಿಮಾದ ಚಿತ್ರೀಕರಣಕ್ಕೆ ಬಂದಾಗ ಅವರಿಗೆ ನಿಂತುಕೊಳ್ಳಲು ಬರುತ್ತಿರಲಿಲ್ಲ. ಅವರಿಗೆ ಒಂದು ಸಾಲಿನ ಡೈಲಾಗ್​ ಹೇಳಲು ಬರುತ್ತಿರಲಿಲ್ಲ. ಡ್ಯಾನ್ಸ್​ ಕೂಡ ಬರುತ್ತಿರಲಿಲ್ಲ’ ಎಂದಿದ್ದಾರೆ ಶೇಖರ್​ ಸುಮನ್​.

‘ಕತ್ರಿನಾಗೆ ಒಂದು ಲೈನ್ ಡೈಲಾಗ್ ಹೇಳಲೂ ಬರುತ್ತಿರಲಿಲ್ಲ’: ಅಸಲಿ ವಿಷಯ ತಿಳಿಸಿದ ನಟ
ಕತ್ರಿನಾ ಕೈಫ್​, ಶೇಖರ್​ ಸುಮನ್​
Follow us on

ಖ್ಯಾತ ನಟ ಶೇಖರ್​ ಸುಮನ್​ ಅವರು ‘ಹೀರಾಮಂಡಿ’ (Heeramandi) ವೆಬ್​ ಸರಣಿಯಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಇದರಲ್ಲಿ ನಟಿಸಿದ ಬಳಿಕ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಇದೇ ವೆಬ್​ ಸಿರೀಸ್​ನಲ್ಲಿ ಶೇಖರ್​ ಸುಮನ್​ ಅವರ ಪುತ್ರ ಅಧ್ಯಾಯನ್​ ಸುಮನ್​ ಕೂಡ ಒಂದು ಪುಟ್ಟ ಪಾತ್ರ ಮಾಡಿದ್ದಾರೆ. ಇಬ್ಬರೂ ಜೊತೆಯಾಗಿ ಬಾಲಿವುಡ್​ ಹಂಗಾಮಾಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಶೇಖರ್​ ಸುಮನ್​ ಅವರು ಕತ್ರಿನಾ ಕೈಫ್​ (Katrina Kaif) ಬಗ್ಗೆ ಮಾತನಾಡಿದ್ದಾರೆ. ಆರಂಭದ ದಿನಗಳಲ್ಲಿ ಕತ್ರಿನಾ ಕೈಫ್​ ಅವರ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಅಲ್ಲದೇ, ಕತ್ರಿನಾ ಕೈಫ್​ ಅವರಿಂದ ಅಧ್ಯಾಯನ್​ ಸುಮನ್​ ಸ್ಫೂರ್ತಿ ಪಡೆದುಕೊಳ್ಳಬೇಕು ಎಂದು ಶೇಖರ್​ ಸುಮನ್​ (Shekhar Suman) ಸಲಹೆ ನೀಡಿದ್ದಾರೆ.

ಕತ್ರಿನಾ ಕೈಫ್​ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 2003ರಲ್ಲಿ ಬಿಡುಗಡೆ ಆದ ‘ಬೂಮ್​’ ಸಿನಿಮಾದ ಮೂಲಕ. ಆ ಸಿನಿಮಾದ ಶೂಟಿಂಗ್​ಗೆ ಬಂದಾಗ ಕತ್ರಿನಾ ಕೈಫ್​ ಅವರಿಗೆ ನಟನೆಯಲ್ಲಿ ಯಾವುದೇ ಅನುಭವ ಇರಲಿಲ್ಲ. ‘ಬೇರೆಯವರನ್ನು ನೋಡಿ ಕಲಿಯಬೇಕು. ಕತ್ರಿನಾ ಕೈಫ್​ ಅವರನ್ನು ನೋಡಿ. ಬೂಮ್​ ಸಿನಿಮಾದ ಶೂಟಿಂಗ್​ಗೆ ಬಂದಾಗ ಅವರಿಗೆ ನಿಂತುಕೊಳ್ಳಲು ಬರುತ್ತಿರಲಿಲ್ಲ’ ಎಂದಿದ್ದಾರೆ ಶೇಖರ್​ ಸುಮನ್​.

‘ಕತ್ರಿನಾ ಕೈಫ್​ ಅವರಿಗೆ ಒಂದು ಸಾಲಿನ ಡೈಲಾಗ್​ ಹೇಳಲು ಬರುತ್ತಿರಲಿಲ್ಲ. ಡ್ಯಾನ್ಸ್​ ಕೂಡ ಬರುತ್ತಿರಲಿಲ್ಲ. ಆದರೆ ಆ ಬಳಿಕ ಅವರು ಎಲ್ಲಿಗೆ ತಲುಪಿದರು ಎಂಬುದನ್ನು ನೋಡಿ. ‘ರಾಜ್​ನೀತಿ’, ‘ಜಿಂದಗಿ ನಾ ಮಿಲೇಗಿ ದೊಬಾರ’, ‘ಧೂಮ್​ 3’ ಸಿನಿಮಾಗಳಲ್ಲಿ ಅವರ ಅಭಿನಯವನ್ನು ನೋಡಿ. ಇದು ಅದೇ ಹುಡುಗಿ ಎಂದು ನೀವು ಹೇಳಲು ಸಾಧ್ಯವಿಲ್ಲ. ಅತ್ಯುತ್ತಮ ಜನರ ಜೀವನದಲ್ಲಿ ಹೀಗೆ ಆಗುತ್ತದೆ’ ಎಂದು ಶೇಖರ್​ ಸುಮನ್​ ಹೇಳಿದ್ದಾರೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ಗೆ ಕತ್ರಿನಾ ಮೇಲಿರೋ ಪ್ರೀತಿ ಎಂಥದ್ದು? ಈ ಘಟನೆಯೇ ಸಾಕ್ಷಿ

ಅದೇ ರೀತಿ ದೀಪಿಕಾ ಪಡುಕೋಣೆ ಮತ್ತು ಅನನ್ಯಾ ಪಾಂಡೆ ಅವರ ಉದಾಹರಣೆಯನ್ನೂ ಶೇಖರ್​ ಸುಮನ್​ ನೀಡಿದ್ದಾರೆ. ‘ದೀಪಿಕಾ ಪಡುಕೋಣೆ ಕೂಡ ಉತ್ತಮ ನಟಿಯಾಗಿ ಬೆಳೆದರು. ‘ಕೋ ಗಯೇ ಹಮ್​ ಕಹಾ’ ಸಿನಿಮಾ ಬರುವ ತನಕ ನಟಿ ಅನನ್ಯಾ ಪಾಂಡೆ ಅವರು ಕೂಡ ಸಾಕಷ್ಟು ಟ್ರೋಲ್​ ಎದುರಿಸಬೇಕಾಯಿತು. ಅದನ್ನೆಲ್ಲ ನೀವು ಹಾಸ್ಯದಿಂದಲೇ ಸ್ವೀಕರಿಸಬೇಕು’ ಎಂದು ಹೊಸ ಕಲಾವಿದರಿಗೆ ಶೇಖರ್​ ಸುಮನ್​ ಸಲಹೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.