‘ಶಾರುಖ್ ಫ್ಯಾನ್ಸ್ ಬಗ್ಗೆ ಭಯ ಇದೆ, ಹೀಗಾಗಿ ಅವರ ಜೊತೆ ಸಿನಿಮಾ ಮಾಡಿಲ್ಲ’; ಖ್ಯಾತ ನಿರ್ದೇಶಕನ ಹೇಳಿಕೆ

‘ಶಾರುಖ್ ಅವರ ಚಕ್ ದೇ ಇಂಡಿಯಾ ನನ್ನ ಫೇವರಿಟ್ ಸಿನಿಮಾ. ಕಭಿ ಹಾ ಕಭಿ ನಾ ಮೊದಲಾದ ಸಿನಿಮಾಗಳೂ ನನ್ನ ಅಚ್ಚು ಮೆಚ್ಚಿನ ಸಿನಿಮಾಗಳು. ಆರಂಭದಲ್ಲಿ ಶಾರುಖ್ ಖಾನ್ ಎಲ್ಲರ ಜೊತೆಯೂ ಕೆಲಸ ಮಾಡಿದರು. ಆದರೆ, ಈಗ ಶಾರುಖ್ ಜೊತೆ ಸಿನಿಮಾ ಮಾಡೋಕೆ ಸಾಧ್ಯವಿಲ್ಲ’ ಎಂದಿದ್ದಾರೆ ಅನುರಾಗ್.

‘ಶಾರುಖ್ ಫ್ಯಾನ್ಸ್ ಬಗ್ಗೆ ಭಯ ಇದೆ, ಹೀಗಾಗಿ ಅವರ ಜೊತೆ ಸಿನಿಮಾ ಮಾಡಿಲ್ಲ’; ಖ್ಯಾತ ನಿರ್ದೇಶಕನ ಹೇಳಿಕೆ
ಶಾರುಖ್​-ಅನುರಾಗ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jun 05, 2024 | 8:01 AM

ಶಾರುಖ್ ಖಾನ್ (Shah Rukh Khan) ಅವರನ್ನು ಕಂಡರೆ ನಿರ್ದೇಶಕ ಅನುರಾಗ್ ಕಶ್ಯಪ್ ಅವರಿಗೆ ಸಾಕಷ್ಟು ಅಭಿಮಾನ ಇದೆ. ಅವರನ್ನು ಆರಾಧಿಸುತ್ತಾರೆ. ಆದಾಗ್ಯೂ ಅವರು ಶಾರುಖ್ ಜೊತೆ ಸಿನಿಮಾ ಮಾಡುವ ಆಸಕ್ತಿ ತೋರಿಸಿಲ್ಲ. ಮುಂದಿನ ದಿನಗಳಲ್ಲಿ ಶಾರುಖ್ ಜೊತೆ ಸಿನಿಮಾ ಮಾಡುವ ಆಲೋಚನೆಯೂ ಅವರಿಗೆ ಇಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಶಾರುಖ್ ಖಾನ್ ಅವರ ಅಭಿಮಾನಿಗಳನ್ನು ಎದುರಿಸೋ ಶಕ್ತಿ ಅವರಿಗೆ ಇಲ್ಲವಂತೆ.

‘ಶಾರುಖ್ ಅವರ ಚಕ್ ದೇ ಇಂಡಿಯಾ ನನ್ನ ಫೇವರಿಟ್ ಸಿನಿಮಾ. ಕಭಿ ಹಾ ಕಭಿ ನಾ ಮೊದಲಾದ ಸಿನಿಮಾಗಳೂ ನನ್ನ ಅಚ್ಚು ಮೆಚ್ಚಿನ ಸಿನಿಮಾಗಳು. ಆರಂಭದಲ್ಲಿ ಶಾರುಖ್ ಖಾನ್ ಎಲ್ಲರ ಜೊತೆಯೂ ಕೆಲಸ ಮಾಡಿದರು. ಆದರೆ, ಈಗ ಶಾರುಖ್ ಜೊತೆ ಸಿನಿಮಾ ಮಾಡೋಕೆ ಸಾಧ್ಯವಿಲ್ಲ. ನಾನು ನಿರ್ದೇಶಕನಾಗಿ ಅವರನ್ನು ಸಾಕಷ್ಟು ಇಷ್ಟಪಟ್ಟಿದ್ದೆ. ಆದರೆ, ಈಗ ಅವರ ಅಭಿಮಾನಿಗಳ ಬಗ್ಗೆ ನನಗೆ ಭಯ ಇದೆ’ ಎಂದಿದ್ದಾರೆ ಅನುರಾಗ್ ಕಶ್ಯಪ್.

ಈ ರೀತಿಯ ಸ್ಟಾರ್ ಹೀರೋ ಜೊತೆ ಸಿನಿಮಾ ಮಾಡುವಾಗ ಸಾಕಷ್ಟು ಎಚ್ಚರಿಕೆ ಬೇಕು. ಸಿನಿಮಾ ಫ್ಲಾಪ್ ಆಯಿತು ಎಂದರೆ ಬೈಗುಳ ಎದುರಿಸಬೇಕಾಗುತ್ತದೆ. ಇದೇ ಭಯ ಅವರಿಗೂ ಇದೆ. ‘ಇಂದಿನ ಸೋಶಿಯಲ್ ಮೀಡಿಯಾ ಯುಗದಲ್ಲಿ ದೊಡ್ಡ ಸ್ಟಾರ್‌ಗಳ ಅಭಿಮಾನಿಗಳ ಬಗ್ಗೆ ನನಗೆ ಭಯ ಇದೆ. ಅಭಿಮಾನಿಗಳಿಂದಾಗಿ ನಟರು ಒಂದೇ ರೀತಿಯ ಪಾತ್ರ ಮಾಡಲು ಬಯಸುತ್ತಾರೆ. ಅಭಿಮಾನಿಗಳು ಕೂಡ ತಮ್ಮ ಹೀರೋನಿಂದ ಮತ್ತೆ ಮತ್ತೆ ಅದೇ ವಿಷಯಗಳನ್ನು ಬಯಸುತ್ತಾರೆ. ಅದು ಸಂಭವಿಸದಿದ್ದರೆ ಅಭಿಮಾನಿಗಳು ಆ ರೀತಿಯ ಸಿನಿಮಾಗಳನ್ನು ತಿರಸ್ಕರಿಸುತ್ತಾರೆ. ಹೀಗಾಗಿ. ನಟರು ಸಹ ಹೊಸ ವಿಷಯಗಳನ್ನು ಪ್ರಯತ್ನಿಸುವ ಬಗ್ಗೆ ಭಯಪಡುತ್ತಾರೆ’ ಎಂದಿದ್ದಾರೆ ಅನುರಾಗ್.

‘ನನಗೆ ಏನು ಅನಿಸುತ್ತದೆಯೋ ಅದನ್ನು ಮಾಡುತ್ತೇನೆ. ಅಭಿಮಾನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾ ಮಾಡಲ್ಲ. ಸ್ಟಾರ್ ಹೀರೋ ಜೊತೆ ಸಿನಿಮಾ ಮಾಡಿದಾಗ ಇದು ದುಬಾರಿ ಆಗಬಹುದು. ಹಾಗಾಗಿ ಶಾರುಖ್ ಅಥವಾ ಇನ್ಯಾವುದೇ ದೊಡ್ಡ ಹೀರೋ ಜೊಯೆ ನನಗೆ ಸಿನಿಮಾ ಮಾಡುವ ಸಾಮರ್ಥ್ಯ ಇಲ್ಲ’ ಎಂದು ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಶಾರುಖ್​ ಖಾನ್​ ನಟನೆಯ ‘ಕಿಂಗ್​’ ಸಿನಿಮಾ ಬಗ್ಗೆ ಸುಳ್ಳು ಸುದ್ದಿ ಹಬ್ಬಲು ಕಾರಣವಾಯ್ತು ಈ ಫೋಟೋ

‘ನನ್ನ ಜೀವನದ ದೊಡ್ಡ ದುರಂತವೆಂದರೆ ‘ಪ್ಯಾರ್ ವಿತ್ ಡಿಜೆ ಮೊಹಾಬತ್​’ ಸಿನಿಮಾ. ಆ ಚಿತ್ರದಿಂದ ನಾನು ನನ್ನ ಎಲ್ಲಾ ಹಣವನ್ನು ಕಳೆದುಕೊಂಡೆ. ಈ ಸಿನಿಮಾ ಮಾಡುವುದು ಮೂರ್ಖತನ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಾನು ಏನು ಅಂದುಕೊಂಡಿದ್ದೆನೋ ಅದನ್ನು ಮಾಡಲು ಸಾಧ್ಯವಾಯಿತು. ಆ ವೈಫಲ್ಯ ನನ್ನದು. ನಾನು ಅದರ ಸಂಪೂರ್ಣ ಮಾಲೀಕತ್ವವನ್ನು ತೆಗೆದುಕೊಳ್ಳುತ್ತೇನೆ. ಇದು ಹೆಚ್ಚು ತೃಪ್ತಿಕರವಾಗಿದೆ ಏಕೆಂದರೆ ನನಗೆ ಯಾವುದೇ ವಿಷಾದವಿಲ್ಲ’ ಎಂದಿದ್ದಾರೆ ಅನುರಾಗ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ