AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಲ್ಲರೂ ಮೋದಿಯನ್ನೇ ಆಯ್ಕೆ ಮಾಡುತ್ತಾರೆ’; ಕಾರಣ ತಿಳಿಸಿದ ಕಂಗನಾ ರಣಾವತ್

ಚಂದ್ರಬಾಬು ನಾಯ್ಡು, ನಿತಿಶ್ ಕುಮಾರ್, ರಾಜನಾಥ್ ಸಿಂಗ್, ಅಮಿತ್ ಶಾ, ಕುಮಾರಸ್ವಾಮಿ, ಪವನ್ ಕಲ್ಯಾಣ್ ಮೊದಲಾದ ನಾಯಕರು ಸರ್ಕಾರ ರಚನೆಗೆ ಮೋದಿಗೆ ಬೆಂಬಲ ನೀಡಿದ್ದಾರೆ. ಆ ಬಳಿಕ ಎಲ್ಲರೂ ವಿಕ್ಟರಿ ಸಿಂಬಲ್​ನೊಂದಿಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋನ ಕಂಗನಾ ಹಂಚಿಕೊಂಡು ಮೋದಿ ಅವರನ್ನು ಹೊಗಳಿದ್ದಾರೆ.

‘ಎಲ್ಲರೂ ಮೋದಿಯನ್ನೇ ಆಯ್ಕೆ ಮಾಡುತ್ತಾರೆ’; ಕಾರಣ ತಿಳಿಸಿದ ಕಂಗನಾ ರಣಾವತ್
ಕಂಗನಾ-ಮೋದಿ
ರಾಜೇಶ್ ದುಗ್ಗುಮನೆ
|

Updated on:Jun 06, 2024 | 7:08 AM

Share

ಇಷ್ಟು ವರ್ಷ ಬಾಲಿವುಡ್​ನಲ್ಲಿ ಮಿಂಚುತ್ತಿದ್ದ ನಟಿ ಕಂಗನಾ ರಣಾವತ್ (Kangana Ranaut) ಅವರು ಈಗ ಬಿಜೆಪಿ ಸೇರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ತಮ್ಮ ಹುಟ್ಟೂರಾದ ಹಿಮಾಚಲ ಪ್ರದೇಶದ ಮಂಡಿಯಿಂದಲೇ ಅವರು ಚುನಾವಣಾ ಕಣಕ್ಕೆ ಇಳಿದಿದ್ದರು. ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಅವರು ರಾಜಕೀಯದತ್ತ ಹೊರಳಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಮಧ್ಯೆ ಎನ್​ಡಿಎ ಮೈತ್ರಿಕೂಟ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಸಭೆ ನಡೆಸಿದೆ. ಈ ಫೋಟೋನ ಕಂಗನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಚಂದ್ರಬಾಬು ನಾಯ್ಡು, ನಿತಿಶ್ ಕುಮಾರ್, ರಾಜನಾಥ್ ಸಿಂಗ್, ಅಮಿತ್ ಶಾ, ಕುಮಾರಸ್ವಾಮಿ, ಪವನ್ ಕಲ್ಯಾಣ್ ಮೊದಲಾದ ನಾಯಕರು ಮೋದಿ ನಿವಾಸಕ್ಕೆ ತೆರಳಿದ್ದಾರೆ. ಎಲ್ಲರೂ ಸರ್ಕಾರ ರಚನೆಗೆ ಮೋದಿಗೆ ಬೆಂಬಲ ನೀಡಿದ್ದಾರೆ. ಆ ಬಳಿಕ ಎಲ್ಲರೂ ವಿಕ್ಟರಿ ಸಿಂಬಲ್​ನೊಂದಿಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋನ ಕಂಗನಾ ಹಂಚಿಕೊಂಡು ಮೋದಿ ಅವರನ್ನು ಹೊಗಳಿದ್ದಾರೆ.

‘ಕನಸುಗಳ ಬಗ್ಗೆ ಅಲ್ಲ ವಾಸ್ತವದ ಬಗ್ಗೆ ಮಾತನಾಡುತ್ತಾರೆ. ಹೀಗಾಗಿ, ಪ್ರತಿಯೊಬ್ಬರೂ ಮೋದಿಯನ್ನು ಆಯ್ಕೆ ಮಾಡುತ್ತಾರೆ’ ಎಂದು ಕಂಗನಾ ಬರೆದುಕೊಂಡಿದ್ದಾರೆ. ಅವರ ಕಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರು ಕಂಗನಾ ಅವರನ್ನು ಟೀಕಿಸಿದ್ದಾರೆ.

ಬಿಜೆಪಿ 240 ಸ್ಥಾನಗಳನ್ನು ಮಾತ್ರ ಗೆದ್ದಿದಿದೆ. ಈ ಮೂಲಕ 272 ಸ್ಥಾನಗಳ ಬಹುಮತ ಪಡೆಯಲು ಸಾಧ್ಯವಾಗಿಲ್ಲ. ಬಿಜೆಪಿ ನೇತೃತ್ವದ ಎನ್​​ಡಿಎ ಮೈತ್ರಿಕೂಟ 292 ಸ್ಥಾನಗಳನ್ನು ಪಡೆದು ಸರ್ಕಾರ ರಚಿಸಿದೆ. ನಿತಿಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಬಹುದು ಎಂಬುದು ಕೆಲವರ ಊಹೆ ಆಗಿತ್ತು. ಆದರೆ, ಈ ಊಹೆ ತಪ್ಪಾಗಿದೆ. ಕಂಗನಾ ಅವರು ಮಂಡಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರನ್ನು 74 ಸಾವಿರ ಮತಗಳ ಅಂತರದಿಂದ ಅವರು ಸೋಲಿಸಿದ್ದಾರೆ.

ಇದನ್ನೂ ಓದಿ: ಕಂಗನಾ ರಣಾವತ್ ಈಗ ಬಿಜೆಪಿ ಎಂಪಿ; ಏನಾಗಲಿದೆ ‘ಎಮರ್ಜೆನ್ಸಿ’ ಸಿನಿಮಾದ ಕಥೆ?

ಕಂಗನಾ ಅವರು ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ಆಧರಿಸಿ ‘ಎಮರ್ಜೆನ್ಸಿ’ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ಕಥೆ ಬರೆದು ಅವರೇ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:07 am, Thu, 6 June 24