AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿಯರ ಬಗ್ಗೆ ಬಾಲಿವುಡ್ ನಿರ್ಮಾಪಕರ ಅಸಮಾಧಾನ, ಕ್ರಮದ ಬಗ್ಗೆ ಚರ್ಚೆ

ಬಾಲಿವುಡ್​ನ ಕೆಲವು ನಟ-ನಟಿಯರ ‘ಅನವಶ್ಯಕ’ ಬೇಡಿಕೆಗಳಿಂದ ನಿರ್ಮಾಣ ವೆಚ್ಚ ಹೆಚ್ಚಾಗುತ್ತಿರುವ ಬಗ್ಗೆ ಬಾಲಿವುಡ್ ನಿರ್ಮಾಪಕರ ಒಕ್ಕೂಟ ಸೇರಿದಂತೆ, ತೆಲುಗು-ತಮಿಳು ನಿರ್ಮಾಪಕರ ಒಕ್ಕೂಟ ಸಭೆ ನಡೆಸಿದೆ.

ನಟಿಯರ ಬಗ್ಗೆ ಬಾಲಿವುಡ್ ನಿರ್ಮಾಪಕರ ಅಸಮಾಧಾನ, ಕ್ರಮದ ಬಗ್ಗೆ ಚರ್ಚೆ
ಮಂಜುನಾಥ ಸಿ.
|

Updated on: Jun 06, 2024 | 12:39 PM

Share

ಬಾಲಿವುಡ್ (Bollywood) ಸ್ಟಾರ್ ನಟ-ನಟಿಯರ ಬಗ್ಗೆ ವಿಶೇಷವಾಗಿ ಕೆಲವು ನಟಿಯರ ಬಗ್ಗೆ ನಿರ್ಮಾಪಕರು ಅಸಮಾಧಾನ ಹೊರಹಾಕಿದ್ದಾರೆ. ಕೆಲವು ಹೊಸ ಪೀಳಿಗೆ ನಟ-ನಟಿಯರಿಂದಾಗಿ ಸಿನಿಮಾ ಸೆಟ್​ಗಳಲ್ಲಿ ಸಮಸ್ಯೆ ಆಗುತ್ತಿದೆ ಹಾಗೂ ಪ್ರೊಡಕ್ಷನ್ ವೆಚ್ಚ ಸಹ ಏರುತ್ತಲೇ ಸಾಗುತ್ತಿದೆ ಎಂದು ನಿರ್ಮಾಪಕರು ಅಳಲು ತೋಡಿಕೊಂಡಿದ್ದು, ದೂರು ನಿರ್ಮಾಪಕ ಒಕ್ಕೂಟ (ಪ್ರೊಡ್ಯೂಸರ್ ಗಿಲ್ಡ್) ವರೆಗೆ ಹೋಗಿದ್ದು, ಈ ಬಗ್ಗೆ ಸಭೆಯೊಂದು ಸಹ ನಡೆದಿದೆ.

ಬಾಲಿವುಡ್​ನ ಕೆಲವು ನಟಿಯರು ಸಿನಿಮಾದ ನಿರ್ಮಾಣ ವೆಚ್ಚ ಏರಲು ಕಾರಣವಾಗಿದ್ದಾರಂತೆ. ನಟಿಯರು ತಮ್ಮೊಂದಿಗೆ 10-12 ಮಂದಿ ಸಿಬ್ಬಂದಿಯನ್ನು ಕರೆದುಕೊಂಡು ಬರುತ್ತಾರೆ. ಮೇಕಪ್​ಗೆ ಪ್ರತ್ಯೇಕ ಸಿಬ್ಬಂದಿ, ಸೋಷಿಯಲ್ ಮೀಡಿಯಾ ಸಿಬ್ಬಂದಿ, ಕೇಶ ವಿನ್ಯಾಸಕರು, ಮ್ಯಾನೇಜರ್, ಸಹಾಯಕ-ಸಹಾಯಕಿ, ಡಯಟೀಶಿಯನ್, ಟ್ಯಾಲೆಂಟ್ ಏಜೆನ್ಸಿಯವರು​ ಹೀಗೆ ದೊಡ್ಡ ತಂಡವನ್ನು ತಮ್ಮೊಂದಿಗೆ ಕರೆತಂದು ಅವರ ಟಿಎ-ಡಿಎಗಳನ್ನು ನಿರ್ಮಾಪಕರ ಖಾತೆಗೆ ಸೇರಿಸುತ್ತಾರೆ. ಇದರಿಂದ ನಿರ್ಮಾಣ ವೆಚ್ಚ ಹೆಚ್ಚಾಗುತ್ತಿದೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ. ಕೆಲವು ನಟರೂ ಸಹ ತಮ್ಮೊಂದಿಗೆ ದೊಡ್ಡ ತಂಡವನ್ನೇ ಕರೆತರುತ್ತಾರೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.

ಇದನ್ನೂ ಓದಿ:ದಕ್ಷಿಣ ಭಾರತ ಚಿತ್ರರಂಗಕ್ಕೆ ಬರಲು ರೆಡಿಯಾದ ಮತ್ತೊಬ್ಬ ಬಾಲಿವುಡ್ ಯುವನಟಿ

ಹಿಂದಿ ನಿರ್ಮಾಪಕರ ಗಿಲ್ಡ್, ತೆಲುಗು ಹಾಗೂ ತಮಿಳು ನಿರ್ಮಾಪಕರ ಗಿಲ್ಡ್ ಜೊತೆಗೆ ಬಾಲಿವುಡ್​ನ ಕೆಲವು ಪ್ರಮುಖ ಟ್ಯಾಲೆಂಟ್ ಏಜೆನ್ಸಿಗಳು ಸೇರಿ ಕೆಲವು ದಿನಗಳ ಹಿಂದಷ್ಟೆ ಸಭೆ ನಡೆಸಿದ್ದು, ಸಿನಿಮಾ ನಿರ್ಮಾಣದ ವೆಚ್ಚ ಏರಿಕೆ ಆಗುತ್ತಿರುವ ಜೊತೆಗೆ ನಟ-ನಟಿಯರ ಅನವಶ್ಯಕ ಖರ್ಚುಗಳ ಬಗ್ಗೆ ಚರ್ಚೆಯಾಗಿದೆ. ನಟ-ನಟಿಯರು ತಮ್ಮೊಟ್ಟಿಗೆ ಕರೆತರುವ ಸಿಬ್ಬಂದಿ ವರ್ಗದ ಖರ್ಚುಗಳು, ನಟ-ನಟಿಯರು ಸೆಟ್​ನಲ್ಲಿ ಆಹಾರ ಸೇರಿದಂತೆ ಇತರೆ ವಿಷಯಗಳಿಗೆ ಇಡುವ ಬೇಡಿಕೆಗಳಿಂದ ಆಗುತ್ತಿರುವ ಖರ್ಚು ಇದರಿಂದ ಹೆಚ್ಚಾಗುತ್ತಿರುವ ನಿರ್ಮಾಣ ವೆಚ್ಚದ ಬಗ್ಗೆ ಗಂಭೀರ ಚರ್ಚೆಯೇ ನಡೆದಿದ್ದು, ಇದನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ. ನಟ-ನಟಿಯರ ಒಪ್ಪಂದದ ವೇಳೆಯೇ ಈ ಎಲ್ಲ ಖರ್ಚುಗಳನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಬಾಲಿವುಡ್​ನ ಸ್ಟಾರ್ ನಿರ್ಮಾಪಕ ಫರ್ಹಾ ಖಾನ್, ನಟಿ-ನಿರ್ಮಾಪಕಿ ಎರಡೂ ಆಗಿರುವ ಕೃತಿ ಸೆನನ್ ಇನ್ನಿತರರು ಇತ್ತೀಚೆಗೆ ನಟಿಯರಿಂದ ಹೆಚ್ಚಾಗುತ್ತಿರುವ ಅನಗತ್ಯ ಖರ್ಚಿನ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ನಟಿಯರು ತಮ್ಮೊಂದಿಗೆ ಹತ್ತೆನ್ನೆರಡು ಜನರನ್ನು ಕೆರತಂದು ಅವರ ಖರ್ಚನ್ನು ನಿರ್ಮಾಪಕರ ಮೇಲೆ ಹೇರುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದರು. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿಯೂ ಇದೇ ಸಮಸ್ಯೆ ಇದೆ ಎನ್ನಲಾಗುತ್ತಿದೆ. ನಟಿ ಪ್ರಿಯಾಮಣಿ ಸಹ ಈ ವಿಷಯದ ಬಗ್ಗೆ ಕೆಲವು ದಿನಗಳ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕರ್ನಾಟಕ ಬರಗಾಲ: ತಕ್ಷಣದ ಪರಿಹಾರಕ್ಕೆ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ
ಕರ್ನಾಟಕ ಬರಗಾಲ: ತಕ್ಷಣದ ಪರಿಹಾರಕ್ಕೆ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ
ಪೊಲೀಸರ ಮೇಲೆ ಒತ್ತಡ ಹಾಕಿರೋ ಸಿಎಂಗೆ ನಾಚಿಕೆಯಾಗಬೇಕು: ಬಿಎಸ್​ವೈ ವಾಗ್ದಾಳಿ
ಪೊಲೀಸರ ಮೇಲೆ ಒತ್ತಡ ಹಾಕಿರೋ ಸಿಎಂಗೆ ನಾಚಿಕೆಯಾಗಬೇಕು: ಬಿಎಸ್​ವೈ ವಾಗ್ದಾಳಿ
ಕುವೈತ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ
ಕುವೈತ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್