ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಸಲ್ಮಾನ್ ಬಾಡಿಗಾರ್ಡ್​ ಶೇರಾ

| Updated By: ರಾಜೇಶ್ ದುಗ್ಗುಮನೆ

Updated on: Oct 16, 2024 | 7:45 AM

ಶೇರಾ ಅಲಿಯಾಸ್ ಗುರ್ಮೀತ್ ಸಿಂಗ್ ಜಾಲಿ ಅವರು ಸಲ್ಮಾನ್ ಖಾನ್ ಅವರ ಮುಖ್ಯ ಅಂಗರಕ್ಷಕ ಮತ್ತು 25 ವರ್ಷಗಳಿಂದ ಸಲ್ಮಾನ್ ಜೊತೆ ಕೆಲಸ ಮಾಡುತ್ತಿದ್ದಾರೆ. ಬಿಷ್ಣೋಯ್ ಗ್ಯಾಂಗ್​ನಿಂದ ಸಲ್ಮಾನ್ ಖಾನ್​ಗೆ ಬೆದರಿಕೆ ಇದೆ. ಏತನ್ಮಧ್ಯೆ, ಈಗ ಶೇರಾ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗುತ್ತಿದೆ.

ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಸಲ್ಮಾನ್ ಬಾಡಿಗಾರ್ಡ್​ ಶೇರಾ
ಸಲ್ಮಾನ್-ಶೇರಾ
Follow us on

ನಟ ಸಲ್ಮಾನ್ ಖಾನ್ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಪ್ರಸ್ತುತ ಅವರು ಸುದ್ದಿಯಲ್ಲಿರುವುದು ಸಿನಿಮಾಗಳಿಂದಲ್ಲ. ಬದಲಾಗಿ ಅವರ ವೈಯಕ್ತಿಕ ಜೀವನದಿಂದ. ಏಪ್ರಿಲ್‌ನಲ್ಲಿ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಅಂದಿನಿಂದ ಅವರಿಗೆ ಹಲವು ಬೆದರಿಕೆಗಳು ಬಂದಿವೆ. ಅವರ ತಂದೆ ಸಲೀಮ್ ಖಾನ್ ಅವರಿಗೂ ಬೆದರಿಕೆಗಳು ಬಂದಿವೆ. ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್‌ಗೆ ಹಲವು ಬಾರಿ ಬೆದರಿಕೆ ಹಾಕಿದೆ. ಕಳೆದ ವಾರ ಎನ್‌ಸಿಪಿ ಅಜಿತ್ ಪವಾರ್ ಗುಂಪಿನ ನಾಯಕ ಬಾಬಾ ಸಿದ್ಧಿಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದೆ. ಹತ್ಯೆಯ ಹೊಣೆಗಾರಿಕೆಯನ್ನು ಹೇಳಿಕೊಳ್ಳುವಾಗ ಗ್ಯಾಂಗ್ ಸದಸ್ಯರೊಬ್ಬರು ನಟ ಸಲ್ಮಾನ್ ಖಾನ್ ಬಗ್ಗೆ ಪ್ರಸ್ತಾಪಿಸಿದ ನಂತರ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಶೇರಾ ಅಲಿಯಾಸ್ ಗುರ್ಮೀತ್ ಸಿಂಗ್ ಜಾಲಿ ಅವರು ಸಲ್ಮಾನ್ ಖಾನ್ ಅವರ ಮುಖ್ಯ ಅಂಗರಕ್ಷಕ ಮತ್ತು 25 ವರ್ಷಗಳಿಂದ ಸಲ್ಮಾನ್ ಜೊತೆ ಕೆಲಸ ಮಾಡುತ್ತಿದ್ದಾರೆ. ಬಿಷ್ಣೋಯ್ ಗ್ಯಾಂಗ್​ನಿಂದ ಸಲ್ಮಾನ್ ಖಾನ್​ಗೆ ಬೆದರಿಕೆ ಇದೆ. ಏತನ್ಮಧ್ಯೆ, ಈಗ ಶೇರಾ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗುತ್ತಿದೆ. ಸಲ್ಮಾನ್ ಭದ್ರತೆಯಲ್ಲಿನ ಸವಾಲುಗಳೇನು, ಅವರನ್ನು ಹೇಗೆ ನೋಡಿಕೊಳ್ಳುತ್ತೇನೆ ಎಂಬ ಹಲವು ಪ್ರಶ್ನೆಗಳಿಗೆ ಶೇರಾ ಪ್ರಾಮಾಣಿಕವಾಗಿ ಉತ್ತರಿಸಿದ್ದರು.

ಸಲ್ಮಾನ್ ಜೊತೆಗಿನ ಮೊದಲ ಭೇಟಿ ಹೇಗಿತ್ತು?

‘ನಾನು ಸಲ್ಮಾನ್ ಖಾನ್ ಅವರನ್ನು ಮಾಲೀಕ ಎಂದು ಕರೆಯುತ್ತೇನೆ. ಅವನು ಪ್ರತಿ ಬಾರಿಯೂ ನನ್ನ ಪರವಾಗಿ ನಿಲ್ಲುತ್ತಾರೆ. ನಾನು ಸೋಹೈಲ್ ಖಾನ್ ಅವರನ್ನು ಭೇಟಿಯಾದೆ. ಸೋಹೈಲ್ ಭಾಯ್ ಅವರು ಚಂಡೀಗಢದಲ್ಲಿ ನಡೆದ ವೇದಿಕೆಯ ಕಾರ್ಯಕ್ರಮದ ಸಮಯದಲ್ಲಿ ಸಲ್ಮಾನ್ ಭಾಯ್ ಅವರನ್ನು ನನಗೆ ಪರಿಚಯಿಸಿದರು. ಅದರ ನಂತರ ನಾನು ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡಿದ್ದೆ’ ಎಂದು ಶೇರಾ ಹೇಳಿದ್ದರು.

ಸವಾಲು ಏನು?

‘ಸಲ್ಮಾನ್ ಖಾನ್ ಅವರ ಜೀವಕ್ಕೆ ಅಪಾಯವಿದೆ. ಸಲ್ಮಾನ್ ಖಾನ್ ಅವರ ಭದ್ರತಾ ವ್ಯವಸ್ಥೆಯನ್ನು ನೋಡುವಾಗ ದೊಡ್ಡ ಸವಾಲು ಎಂದರೆ ಜನಸಂದಣಿ. ಪ್ರತಿಯೊಬ್ಬರೂ ಅವರನ್ನು ಭೇಟಿಯಾಗಲು, ಕೈಕುಲುಕಲು, ಫೋಟೋ ತೆಗೆದುಕೊಳ್ಳಲು ಬಯಸುತ್ತಾರೆ. ಸಲ್ಮಾನ್ ಭಾಯ್ ಜನಸಂದಣಿಯೊಳಗೆ ಹೋದಾಗ, ಅವರನ್ನು ಕಾಪಾಡುವುದು ನನ್ನ ಕೆಲಸ ಮತ್ತು ಇತರ ಭದ್ರತಾ ಸಿಬ್ಬಂದಿ ಅಲ್ಲಿರುವ ಗುಂಪನ್ನು ನಿಭಾಯಿಸುತ್ತಾರೆ. ಹಿಂದೆ ಇಂತಹ ಪರಿಸ್ಥಿತಿ ಇರಲಿಲ್ಲ. ಮೊದಲು ಅವರ ಜೀವಕ್ಕೆ ಅಪಾಯವಿರಲಿಲ್ಲ. ಹಾಗಾಗಿ ಆಗ ಅವರ ಭದ್ರತಾ ವ್ಯವಸ್ಥೆಯನ್ನು ನೋಡುವುದು ಅಷ್ಟು ಕಷ್ಟವಾಗಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಣ್ಣಿಗೆ ಎಣ್ಣೆ ಹಚ್ಚಿಕೊಂಡು ಕೆಲಸ ಮಾಡಬೇಕು’ ಎಂದಿದ್ದಾರೆ ಶೇರಾ.

ಇದನ್ನೂ ಓದಿ: ಸಲ್ಲುಗಾಗಿ ಸಂಪೂರ್ಣ ಜೀವನವನ್ನೇ ಮುಡಿಪಟ್ಟಿದ್ದಾರೆ ಶೇರಾ

ಶೇರಾ ಅವರ ನಿಜವಾದ ಹೆಸರು ಗುರ್ಮೀತ್ ಸಿಂಗ್ ಜಾಲಿ. ಅವರನ್ನು ಬಾಲಿವುಡ್‌ನಲ್ಲಿ ‘ಶೇರಾ’ ಎಂದೇ ಕರೆಯಲಾಗುತ್ತದೆ. ಶೇರಾ 1995 ರಿಂದ ಸಲ್ಮಾನ್ ಜೊತೆ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಟೈಗರ್ ಸೆಕ್ಯುರಿಟಿ ಎಂಬ ಸಂಸ್ಥೆಯನ್ನು ಹೊಂದಿದ್ದಾರೆ. ಇದು ಇತರ ನಟರಿಗೆ ಭದ್ರತೆಯನ್ನು ನೀಡುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.