Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿತೇಂದ್ರನ ಮದುವೆ ಆಗಬೇಕಿದ್ದ ಹೇಮಾ ಮಾಲಿನಿ: ಕೊನೆಗೂ ಪ್ರೀತಿಸಿದವನನ್ನೇ ಕೈ ಹಿಡಿದ ನಟಿ

ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ಬಾಲಿವುಡ್​ನ 80ರ ದಶಕದ ತಾರಾ ದಂಪತಿ. ಅಸಲಿಗೆ ಹೇಮಾಮಾಲಿನಿ ಆಗಿನ ಮತ್ತೊಬ್ಬ ಸಿನಿಮಾ ತಾರೆ ಜಿತೇಂದ್ರ ಅವರನ್ನು ಮದುವೆ ಆಗಬೇಕಿತ್ತು. ಆದರೆ ಹಲವು ಸಮಸ್ಯೆಗಳ ಬಳಿಕ ಹೇಮಾ ಮಾಲಿನಿ, ಧರ್ಮೇಂದ್ರ ಅವರನ್ನು ವಿವಾಹವಾದರು.

ಜಿತೇಂದ್ರನ ಮದುವೆ ಆಗಬೇಕಿದ್ದ ಹೇಮಾ ಮಾಲಿನಿ: ಕೊನೆಗೂ ಪ್ರೀತಿಸಿದವನನ್ನೇ ಕೈ ಹಿಡಿದ ನಟಿ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Oct 16, 2024 | 10:52 AM

ಹೇಮಾ ಮಾಲಿನಿ ಅವರನ್ನು ಹಿಂದಿ ಚಿತ್ರರಂಗದಲ್ಲಿ ‘ಡ್ರೀಮ್ ಗರ್ಲ್’ ಎಂದು ಕರೆಯಲಾಗುತ್ತಿತ್ತು. 70 ಹಾಗೂ 80ರ ದಶಕದಲ್ಲಿ ಅವರ ವೃತ್ತಿ ಜೀವನ ಉನ್ನತ ಸ್ಥಾನದಲ್ಲಿ ಇತ್ತು. ಅವರಿಗೆ ದೊಡ್ಡ ಅಭಿಮಾನಿ ಬಳಗ ಇತ್ತು. ಅವರ ಹಳೆಯ ಫೋಟೋಗಳು ಈಗಲೂ ಆಗಾಗ ವೈರಲ್ ಆಗುತ್ತವೆ. ಅವರು ಈಗಲೂ ಅನೇಕರ ಫೇವರಿಟ್ ಎನಿಸಿಕೊಂಡಿದ್ದಾರೆ. ಜಿತೇಂದ್ರ ಹಾಗೂ ಸಂಜೀವ್ ಕುಮಾರ್ ಅವರುಗಳು ಹೇಮಾ ಮಾಲಿನಿಯ ಅಭಿಮಾನಿ ಆಗಿದ್ದರು. ಅವರು ಹೇಮಾ ಮಾಲಿನಿಗೆ ಪ್ರೀತಿ ತೋರಿಸಿದ್ದರು. ಹೇಮಾ ಹಾಗೂ ಜೀತೇಂದ್ರ ಇಬ್ಬರೂ ಮದುವೆ ಆಗಬೇಕಿತ್ತು. ಆದರೆ, ಹೇಮಾ ಅವರು ಧರ್ಮೆಂದ್ರ ಜೊತೆ ಪ್ರಿತಿಯಲ್ಲಿ ಬಿದ್ದರು. ಅವರನ್ನೇ ವರಿಸಿದರು

ಜೀತೇಂದ್ರ ಹಾಗೂ ಹೇಮಾ ಮಾಲಿನಿ ಕುಟುಂಬದಲ್ಲಿ ಮದುವೆಗೆ ಸಾಕಷ್ಟು ಒತ್ತಡಗಳು ಇದ್ದವು. ಈ ಸಂದರ್ಭದಲ್ಲಿ ಹೇಮಾ ಮಾಲಿನಿ ಅವರು ಧರ್ಮೇಂದ್ರ ಅವರ ಜೊತೆ ಸಂಬಂಧ ಬೆಳೆಸಿಕೊಂಡಿದ್ದರು ಎನ್ನಲಾಗಿದೆ. ಹೇಮಾ ಪಾಲಕರಾದ ಜಯಾ ಚಕ್ರವರ್ತಿ ಹಾಗೂ ರಾಮಾಜುನಮ್ ಚಕ್ರವರ್ತಿ ಅವರು ಇದನ್ನು ವಿರೋಧಿಸಿದ್ದರು. ಏಕೆಂದರೆ ಹೇಮಾ ಮಾಲಿನಿಗೆ ಆಗಲೇ ಒಂದು ಮದುವೆ ಆಗಿತ್ತು.

ಜಯಾ ಅವರು ಹೇಮಾ ಬಗ್ಗೆ ಚಿಂತೆಗೆ ಒಳಗಾಗಿದ್ದರು. 1974ರಲ್ಲಿ ಹೇಮಾ ಮಾಲಿನಿ ಕುಟುಂಬದವರು ಜಿತೇಂದ್ರ ಅವರನ್ನು ಭೇಟಿ ಮಾಡುವ ಒತ್ತಾಯ ಮಾಡಿದ್ದರು. ಆದರೆ, ಜಿತೇಂದ್ರ ಅವರಿಗೆ ಮದುವೆ ಆಗುವ ಯಾವುದೇ ಆಲೋಚನೆ ಇರಲಿಲ್ಲ. ‘ನಾನು ಹೇಮಾನ ಮದುವೆ ಆಗಲ್ಲ. ನನಗೆ ಅವಳ ಮೇಲೆ ಪ್ರೀತಿ ಇಲ್ಲ. ಅವಳೂ ನನ್ನನ್ನು ಪ್ರೀತಿಸುತ್ತಿಲ್ಲ. ನನ್ನ ಕುಟುಂಬಕ್ಕೆ ಬೇಕಿದೆ. ಹಾಗಾಗಿ ನಾನು ಮದುವೆ ಆಗುತ್ತೇನೆ. ಅವಳು ಒಳ್ಳೆಯ ಹುಡುಗಿ’ ಎಂದಿದ್ದರು ಅವರು.

ಇದನ್ನೂ ಓದಿ:‘100 ಗ್ರಾಂ ತೂಕವೂ ಮುಖ್ಯ, ಮಹಿಳೆಯರಿಗೆ ಇದು ಪಾಠ’ ಎಂದು ಟ್ರೋಲ್​ ಆದ ಹೇಮಾ ಮಾಲಿನಿ

ಮದುವೆ ಮಾತುಕತೆಗೆ ಹೇಮಾ ಕುಟುಂಬ ಚೆನ್ನೈಗೆ ತೆರಳಿತ್ತು. ಸುದ್ದಿ ಸಾರ್ವಜನಿಕವಾಗಿ ಲೀಕ್ ಆಯಿತು. ಮದುವೆ ವಿಚಾರ ತಿಳಿದು ಧರ್ಮೇಂದ್ರ ಕೂಡ ತೆರಳಿದರು. ಹೇಮಾ ತಂದೆ ಅವರು ಧರ್ಮೇಂದ್ರ ಬಳಿ ಮಾತನಾಡಿದ್ದರು. ‘ನನ್ನ ಮಗಳನ್ನು ಯಾಕೆ ಬಿಡಬಾರದು? ನೀವು ವಿವಾಹಿತ ವ್ಯಕ್ತಿ; ನೀವು ಅವಳನ್ನು ಮದುವೆಯಾಗಲು ಸಾಧ್ಯವಿಲ್ಲ’ ಎಂದಿದ್ದರು. ಆದರೆ, ಧರ್ಮೇಂದ್ರ ಒಪ್ಪಲಿಲ್ಲ. ಆ ಬಳಿಕ ಜಿತೇಂದ್ರ ಕುಮಾರ್ ಕುಟುಂಬ ಅಲ್ಲಿಂದ ನಡೆಯಿತು. ಅಂದು ಇವರ ಮದುವೆ ನಡೆಯಲಿಲ್ಲ. ಇವರು 1980ರಂದು ಮದುವೆ ಆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ರೂಪಿಸುವ ಕಾನೂನನ್ನು ರಾಜ್ಯಗಳು ಜಾರಿಮಾಡಬೇಕು: ಪ್ರಲ್ಹಾದ್ ಜೋಶಿ
ಕೇಂದ್ರ ರೂಪಿಸುವ ಕಾನೂನನ್ನು ರಾಜ್ಯಗಳು ಜಾರಿಮಾಡಬೇಕು: ಪ್ರಲ್ಹಾದ್ ಜೋಶಿ
ಬ್ರೆಜಿಲ್​ನಲ್ಲಿ ಆಕಾಶದಿಂದ ನೇರವಾಗಿ ರಸ್ತೆಗೆ ಇಳಿದ ವಿಮಾನ
ಬ್ರೆಜಿಲ್​ನಲ್ಲಿ ಆಕಾಶದಿಂದ ನೇರವಾಗಿ ರಸ್ತೆಗೆ ಇಳಿದ ವಿಮಾನ
ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್, ವಿಡಿಯೋ ವೈರಲ್
ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್, ವಿಡಿಯೋ ವೈರಲ್
ಉತ್ತರಾಖಂಡ: ಹೊತ್ತಿ ಉರಿದ ರಾಸಾಯನಿಕ ಕಾರ್ಖಾನೆ, ಹಲವರು ಸಿಲುಕಿರುವ ಶಂಕೆ
ಉತ್ತರಾಖಂಡ: ಹೊತ್ತಿ ಉರಿದ ರಾಸಾಯನಿಕ ಕಾರ್ಖಾನೆ, ಹಲವರು ಸಿಲುಕಿರುವ ಶಂಕೆ
ಅಕ್ಷರಾಭ್ಯಾಸಕ್ಕೆ ಯಾವ ದಿನ ಶುಭ ಮತ್ತು ಹೇಗೆ ಮಾಡಿಸಬೇಕು?
ಅಕ್ಷರಾಭ್ಯಾಸಕ್ಕೆ ಯಾವ ದಿನ ಶುಭ ಮತ್ತು ಹೇಗೆ ಮಾಡಿಸಬೇಕು?
Daily Horoscope: ರಾಜಕೀಯ ವ್ಯಕ್ತಿಗಳಿಗೆ ಇಂದು ಉತ್ತಮ ದಿನ
Daily Horoscope: ರಾಜಕೀಯ ವ್ಯಕ್ತಿಗಳಿಗೆ ಇಂದು ಉತ್ತಮ ದಿನ
ಧ್ರುವ ಸರ್ಜಾ ಫ್ಯಾನ್ಸ್ ರೀತಿಯೇ ಪ್ರಥಮ್ ಅಭಿಮಾನಿಗಳಿಂದ ವಿಚಿತ್ರ ಹಾಡು
ಧ್ರುವ ಸರ್ಜಾ ಫ್ಯಾನ್ಸ್ ರೀತಿಯೇ ಪ್ರಥಮ್ ಅಭಿಮಾನಿಗಳಿಂದ ವಿಚಿತ್ರ ಹಾಡು
ಮೆಟ್ರೋ ಕಂಬಗಳು, ಐತಿಹಾಸಿಕ ಕಟ್ಟಡಗಳಿಗೂ ದೀಪಾಲಂಕಾರ: ಡಿಕೆ ಶಿವಕುಮಾರ್
ಮೆಟ್ರೋ ಕಂಬಗಳು, ಐತಿಹಾಸಿಕ ಕಟ್ಟಡಗಳಿಗೂ ದೀಪಾಲಂಕಾರ: ಡಿಕೆ ಶಿವಕುಮಾರ್
ವಿಧಾನಸೌಧದ ಶಾಶ್ವತ ವರ್ಣರಂಜಿತ ದೀಪಾಲಂಕಾರ ನೋಡಿ
ವಿಧಾನಸೌಧದ ಶಾಶ್ವತ ವರ್ಣರಂಜಿತ ದೀಪಾಲಂಕಾರ ನೋಡಿ
ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬದಲಾವಣೆ ಸುಳಿವು ನೀಡಿದ: ಕಾಶಪ್ಪನವರ್
ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬದಲಾವಣೆ ಸುಳಿವು ನೀಡಿದ: ಕಾಶಪ್ಪನವರ್