ಸಲ್ಲುಗಾಗಿ ಸಂಪೂರ್ಣ ಜೀವನವನ್ನೇ ಮುಡಿಪಟ್ಟಿದ್ದಾರೆ ಶೇರಾ

Salman Khan: ಸಲ್ಮಾನ್ ಖಾನ್​ರ ಖಾಸಗಿ ಅಂಗರಕ್ಷಕ ಶೇರಾ ದಶಕಗಳಿಂದಲೂ ಸಲ್ಮಾನ್ ಖಾನ್​ಗೆ ಭದ್ರತೆ ಒದಗಿಸುತ್ತಿದ್ದಾರೆ. ಶೇರಾ ಸಂಭಾವನೆ ಎಷ್ಟು? ಇತ್ತೀಚೆಗೆ ದುಬಾರಿ ಕಾರನ್ನು ಸಹ ಶೇರಾ ಖರೀದಿ ಮಾಡಿದ್ದಾರೆ.

ಸಲ್ಲುಗಾಗಿ ಸಂಪೂರ್ಣ ಜೀವನವನ್ನೇ ಮುಡಿಪಟ್ಟಿದ್ದಾರೆ ಶೇರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Sep 05, 2024 | 5:36 PM

ಬಾಲಿವುಡ್ ನಟ ಸಲ್ಮಾನ್ ಖಾನ್ ಖಾಸಗಿ ಬಾಡಿಗಾರ್ಡ್ ಆಗಿ ಶೇರಾ ಇದ್ದಾರೆ. ಕಳೆದ 29 ವರ್ಷಗಳಿಂದ ಸಲ್ಲುನ ಕಾಯುವ ಕೆಲಸಕ್ಕೆ ತಮ್ಮನ್ನು ತಾವು ಮುಡಿಪಾಗಿ ಇಟ್ಟುಕೊಂಡಿದ್ದಾರೆ. ಸಲ್ಲುಗೆ ಈವರೆಗೆ ಸಾಕಷ್ಟು ಪ್ರಾಣ ಬೆದರಿಕೆಗಳು ಎದುರಾಗಿವೆ. ಸಾರ್ವಜನಿಕ ಪ್ರದೇಶಗಳಲ್ಲಿ ಅವರನ್ನು ಮುತ್ತಿಕೊಳ್ಳಲು ಫ್ಯಾನ್ಸ್ ಪ್ರಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಸಲ್ಲು ಕಾಯಲು ನಿಂತಿದ್ದು ಶೇರಾ. ಅವರು ಸಲ್ಲು ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ.

‘ನಾನು ಸಲ್ಮಾನ್ ಖಾನ್ ಜೊತೆ 29 ವರ್ಷಗಳಿಂದ ಇದ್ದೇನೆ. ನಟರು ಬಾಡಿಗಾರ್ಡ್ನ ಬದಲಿಸುತ್ತಲೇ ಇರುತ್ತಾರೆ. ಆದರೆ, ನಾನು ಇಷ್ಟು ವರ್ಷ ಅವರ ಜೊತೆ ಇದ್ದೇನೆ. ನಮ್ಮ ಭಾಯ್​ನ ಮತ್ಯಾರೂ ಮ್ಯಾನೇಜ್ ಮಾಡಲು ಸಾಧ್ಯವಿಲ್ಲ ಎನಿಸುತ್ತದೆ’ ಎಂದು ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಸಲ್ಮಾನ್ನ ಶೇರಾ ಅವರು ಹೇಗೆ ಭೇಟಿ ಮಾಡಿದರು ಎಂಬ ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ. ‘ಸೋಹೈಲ್ ಖಾನ್ ಮೂಲಕ ನಾನು ಸಲ್ಮಾನ್ ಖಾನ್ ಅವರನ್ನು ಭೇಟಿ ಆದೆ. ಆಗ ಸಲ್ಮಾನ್​ಗೆ ಸೆಕ್ಯುರಿಟಿ ನೀಡಬೇಕು ಎಂದು ಅವರ ಸಹೋದರ ಸೋಹೈಲ್ ಬಯಸಿದ್ದರು. ನಾನು ಆ ಸಂದರ್ಭದಲ್ಲಿ ತಲೆಗೆ ಟರ್ಬನ್ ಸುತ್ತಿಕೊಳ್ಳುತ್ತಿದ್ದೆ. ಸೋಹೈಲ್ ಅವರು ನನ್ನನ್ನು ನೋಡಿದಾಗ ನೀವು ಸಲ್ಮಾನ್ ಜೊತೆ ಏಕೆ ನಿಲ್ಲಬಾರದು ಎಂದು ಕೇಳಿದ್ದರು. ನಾನು ಒಪ್ಪಿಕೊಂಡೆ. ನಾನು ಸ್ಟೇಜ್ ಶೋ ಸಂದರ್ಭದಲ್ಲಿ ಮಾತ್ರ ಸಲ್ಮಾನ್ ಖಾನ್ ಜೊತೆ ಇರುತ್ತಿದ್ದೆ. ನನಗೆ ಹಾಗೂ ಸಲ್ಲು ಭಾಯ್​ಗೆ ಬಾಂಡಿಂಗ್ ಬೆಳೆಯಿತು. ನಮ್ಮ ಬಾಂಡ್ ಸ್ಟ್ರಾಂಗ್ ಆಗುತ್ತಾ ಬಂತು. ನಾನು ಇರೋವರೆಗೆ ನಿಮ್ಮ ಸೇವೆ ಮಾಡುತ್ತೇನೆ ಎಂದು ಸಲ್ಲುಗೆ ಹೇಳಿದ್ದೆ’ ಎಂದಿದ್ದರು ಅವರು.

ಇದನ್ನೂ ಓದಿ:‘ಸಲ್ಲುಗೆ ವಯಸ್ಸಾಯ್ತು’; ಕುರ್ಚಿಯಿಂದ ಎದ್ದೇಳಲು ಕಷ್ಟಪಟ್ಟ ಸಲ್ಮಾನ್ ಖಾನ್

ಸಲ್ಮಾನ್ ಖಾನ್ನ ಕಾಯೋ ಶೇರಾಗೆ ವರ್ಷಕ್ಕೆ ಕೋಟ್ಯಾಂತರ ರೂಪಾಯಿ ಸಂಭಾವನೆ ಇದೆ. ಅವರು ಇತ್ತೀಚೆಗೆ 1.4 ಕೋಟಿ ರೂಪಾಯಿ ಬೆಲೆಯ ರೇಂಜ್ ರೋವರ್ ಕಾರನ್ನು ಖರೀದಿ ಮಾಡಿದ್ದಾರೆ. ಸಲ್ಲುಗೆ ಕೊಲೆ ಬೆದರಿಕೆ ಇರೋದ್ರಿಂದ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ.

ಸಲ್ಮಾನ್ ಖಾನ್ ಸದ್ಯ ‘ಸಿಖಂದರ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರವನ್ನು ತಮಿಳಿನ ಎಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಇದಲ್ಲದೆ, ಅಟ್ಲಿ ಜೊತೆಯೂ ಸಲ್ಲು ಸಿನಿಮಾ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್