‘ನನಗೆ ಡ್ರಗ್ಸ್ ಚಟ ಹಿಡಿಸಿದ್ದು ಬಾಲಿವುಡ್​ನ ದೊಡ್ಡ ಸೆಲೆಬ್ರಿಟಿಗಳು’; ಹನಿ ಸಿಂಗ್​ ಶಾಕಿಂಗ್ ವಿಚಾರ ರಿವೀಲ್  

ಹನಿ ಸಿಂಗ್ ಅವರು ಬೇಡಿಕೆಯ ಸಿಂಗರ್ ಎನಿಸಿಕೊಂಡಿದ್ದಾರೆ. ಆದರೆ, ಅವರಿಗೆ ಮೊದಲಿದ್ದಷ್ಟು ಬೇಡಿಕೆ ಇಲ್ಲ. ಹನಿ ಸಿಂಗ್ ಇತ್ತೀಚೆಗೆ ಸಂದರ್ಶನ ಒಂದನ್ನು ನೀಡಿದ್ದಾರೆ. ಇದರಲ್ಲಿ ಅವರು ಹಲವಾರು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ತಾವು ಮಾಡಿರೋ ಡ್ರಗ್ಸ್​ ಚಟದ ಬಗ್ಗೆಯೂ ಹೇಳಿದ್ದಾರೆ.

‘ನನಗೆ ಡ್ರಗ್ಸ್ ಚಟ ಹಿಡಿಸಿದ್ದು ಬಾಲಿವುಡ್​ನ ದೊಡ್ಡ ಸೆಲೆಬ್ರಿಟಿಗಳು’; ಹನಿ ಸಿಂಗ್​ ಶಾಕಿಂಗ್ ವಿಚಾರ ರಿವೀಲ್  
ಹನಿ ಸಿಂಗ್
Follow us
| Updated By: ರಾಜೇಶ್ ದುಗ್ಗುಮನೆ

Updated on: Sep 06, 2024 | 7:56 AM

ಬಾಲಿವುಡ್​ನಲ್ಲಿ ಡ್ರಗ್ಸ್ ಬಳಕೆಯಲ್ಲಿ ಇದೆ ಎಂಬ ವಿಚಾರ ಚರ್ಚೆಯಲ್ಲಿ ಇರೋದು ಇಂದು ನಿನ್ನೆಯದಲ್ಲ. ಸುಶಾಂತ್ ಸಿಂಗ್ ನಿಧನ ಹೊಂದಿದಾಗ ಅನೇಕ ಬಾಲಿವುಡ್ ಹೆಸರುಗಳು ಇದರಲ್ಲಿ ಮುನ್ನೆಲೆಗೆ ಬಂದಿದ್ದವು. ಅನೇಕರ ವಿಚಾರಣೆ ಕೂಡ ಮಾಡಲಾಯಿತು. ಅದೇ ರೀತಿ ಹನಿ ಸಿಂಗ್ ಕೂಡ ಡ್ರಗ್ಸ್​ಗೆ ಅಡಿಕ್ಟ್ ಆಗಿದ್ದರು. ಇಡೀ ದಿನ ನಶೆ ಮಾಡುತ್ತಾ ಇರುತ್ತಿದ್ದರು. ಇದರಿಂದ ಅವರ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದ ಮೇಲೆ ಸಾಕಷ್ಟು ಪರಿಣಾಮ ಬಿತ್ತು. ಒಂದು ದಿನ ಎಲ್ಲವನ್ನೂ ಅವರು ತೊರೆದರು.

ಹನಿ ಸಿಂಗ್ ಇತ್ತೀಚೆಗೆ ಸಂದರ್ಶನ ಒಂದನ್ನು ನೀಡಿದ್ದಾರೆ. ಇದರಲ್ಲಿ ಅವರು ಹಲವಾರು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಶಾಲಿನಿ ತಲ್ವಾರ್ ಜೊತೆ ಅವರು ವಿಚ್ಛೇದನ ಪಡೆದಿದ್ದಾರೆ. ಇದಕ್ಕೆ ಡ್ರಗ್ಸ್ ಚಟವೇ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ ಮದುವೆ ಆದಾಗ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಯಶಸ್ಸು ಅವರ ತಲೆಗೆ ಏರಿತು. ಇದರಿಂದ ಅವರು ಕುಟುಂಬವನ್ನು ನೆಗ್ಲೆಟ್ ಮಾಡಿದ್ದರು.

‘ಕೆಲ ಖ್ಯಾತ ನಾಮರು ನನಗೆ ಡ್ರಗ್ ಅಡಿಕ್ಷನ್ ಮಾಡಿಸಿದರು. ನೀನು ಪಂಜಾಬಿ, ಮದ್ಯ ಸೇವನೆ ಮಾಡುತ್ತಿಯಾ. ಇದನ್ನು ಮಾಡಿ ನೋಡು ಎಂದರು. ಇದರಲ್ಲಿ ಏನಿದೆ? ಮಾಡ್ತೀನಿ ಕೊಡಿ ಎಂದು ನಶೆ ಮಾಡಿದೆ. ನಂತರ ಅದು ಅಡಿಕ್ಷನ್ ಆಯಿತು. ನಾನು ಯಾವಾಗಲೂ ನಶೆಯಲ್ಲಿ ಇರುತ್ತಿದ್ದೆ. ಏನು ಮಾಡುತ್ತಿದ್ದೆ ಅನ್ನೋದು ನನಗೆ ಗೊತ್ತಾಗುತ್ತಾ ಇರಲಿಲ್ಲ’ ಎಂದಿದ್ದಾರೆ ಅವರು.

‘2011ರಲ್ಲಿ ಮದುವೆ ಆದೆ. ನಾನು ಸದಾ ಟ್ರಾವೆಲ್ ಮಾಡುತ್ತಲೇ ಇದ್ದೆ. ಹೀಗಾಗಿ ಸಂಬಂಧ ಚೆನ್ನಾಗಿ ಇರಲಿಲ್ಲ. ಹೆಚ್ಚೆಂದರೆ 9-10 ತಿಂಗಳು ಒಟ್ಟಾಗಿ ಸಂಸಾರ ಮಾಡಿರಬಹುದು. ಆ ಬಳಿಕ ಯಶಸ್ಸು ಸಿಕ್ಕಿತು. ನಾನು ಮನೆಗೆ ಹೋಗೋದನ್ನೇ ನಿಲ್ಲಿಸಿದೆ. ನನ್ನ ತಾಯಿ, ತಂದೆ, ಪತ್ನಿ ಎಲ್ಲರನ್ನೂ ನೆಗ್ಲೆಟ್ ಮಾಡಿದೆ. ನಾನು ಅವರನ್ನು ಕೆಟ್ಟದಾಗಿ ನೋಡಿಕೊಂಡೆ’ ಎಂದು ಹನಿ ಸಿಂಗ್ ಬೇಸರ ಹೊರಹಾಕಿದ್ದಾರೆ. ಇದೆಲ್ಲವನ್ನೂ ಮಾಡದಂತೆ ಅವರು ಕೋರಿಕೊಂಡಿದ್ದಾರೆ.

ಇದನ್ನೂ ಓದಿ: ಫೇಕ್ ಸುದ್ದಿ ಬಗ್ಗೆ ಕೊನೆಗೂ ಸ್ಪಷ್ಟನೆ ಕೊಟ್ಟ ಬಾಲಿವುಡ್ ನಟ ಅಕ್ಷಯ್ ಕುಮಾರ್

‘ಅಕ್ಷಯ್ ಕುಮಾರ್ ಆಗಾಗ ಕರೆ ಮಾಡುತ್ತಿದ್ದರು. ಡಾಕ್ಟರ್​ ಬಳಿ ಹೋಗುವಂತೆ ದೀಪಿಕಾ ಪಡುಕೋಣೆ ಸೂಚಿಸಿದರು. ಶಾರುಖ್ ಅವರು ಯಾವಾಗಲೂ ಫೋನ್ ಮಾಡುತ್ತಿದ್ದರು. ನನಗೆ ಮಾತನಾಡಲೂ ಆಗುತ್ತಿರಲಿಲ್ಲ. ನನ್ನ ಆರೋಗ್ಯದ ಬಗ್ಗೆ ಸದಾ ಕೇರ್ ಮಾಡುತ್ತಿದ್ದರು’ ಎಂದಿದ್ದಾರೆ ಹನಿ ಸಿಂಗ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?