ಯಶ್ ಸ್ಟೈಲ್ ಕಾಪಿ ಮಾಡಿದ ನಟಿ ಶಿಲ್ಪಾ ಶೆಟ್ಟಿ; ವೈರಲ್ ಆಗುತ್ತಿದೆ ವಿಡಿಯೋ

ಶಿಲ್ಪಾ ಶೆಟ್ಟಿ ಸಾರ್ವಜನಿಕವಾಗಿ ಕಾಣಿಸಿಕೊಂಡ ವೇಳೆ ಅವರ ಎದುರು ಒಂದು ಬೇಡಿಕೆ ಇಡಲಾಯಿತು. ಅವರು ‘ಕೆಜಿಎಫ್ 2’ನ ಫೇಮಸ್ ಡೈಲಾಗ್ ಹೊಡೆದಿದ್ದಾರೆ.

ಯಶ್ ಸ್ಟೈಲ್ ಕಾಪಿ ಮಾಡಿದ ನಟಿ ಶಿಲ್ಪಾ ಶೆಟ್ಟಿ; ವೈರಲ್ ಆಗುತ್ತಿದೆ ವಿಡಿಯೋ
ಶಿಲ್ಪಾ ಶೆಟ್ಟಿ
Edited By:

Updated on: Apr 25, 2022 | 11:28 AM

‘ಕೆಜಿಎಫ್: ಚಾಪ್ಟರ್ 2’ ಸಿನಿಮಾ (KGF Chapter 2) ಸೃಷ್ಟಿ ಮಾಡಿದ ಕ್ರೇಜ್ ಅಷ್ಟಿಷ್ಟಲ್ಲ. ಈ ಸಿನಿಮಾದ ಡೈಲಾಗ್​ಗಳು ಸೋಶಿಯಲ್​ ಮೀಡಿಯಾದಲ್ಲಿ (Social Media) ಸಖತ್ ಟ್ರೆಂಡಿಂಗ್​ನಲ್ಲಿದೆ. ಇನ್​​ಸ್ಟಾಗ್ರಾಮ್​ನಲ್ಲಿ ಯಶ್ ಡೈಲಾಗ್​ಗೆ ಸೆಲೆಬ್ರಿಟಿಗಳು ರೀಲ್ಸ್​ ಮಾಡುತ್ತಿದ್ದಾರೆ. ಈ ವಿಡಿಯೋಗಳು ಸಾಕಷ್ಟು ವೀಕ್ಷಣೆ ಕಾಣುತ್ತಿದೆ. ನಟಿ ಶಿಲ್ಪಾ ಶೆಟ್ಟಿ (Shilpa Shetty) ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಕೂಡ ‘ಕೆಜಿಎಫ್ 2’ ಡೈಲಾಗ್​ ಹೊಡೆದಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಬಾಲಿವುಡ್ ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಸಾಕು. ಪಾಪರಾಜಿಗಳು ಅವರನ್ನು ಮುತ್ತಿಕೊಳ್ಳುತ್ತಾರೆ. ಫೋಟೋಗೆ ಪೋಸ್​ ನೀಡಲು, ಟ್ರೆಂಡಿಂಗ್​ನಲ್ಲಿರುವ ಡೈಲಾಗ್ ಹೇಳಲು ಕೋರುತ್ತಾರೆ. ಶಿಲ್ಪಾ ಶೆಟ್ಟಿ ಸಾರ್ವಜನಿಕವಾಗಿ ಕಾಣಿಸಿಕೊಂಡ ವೇಳೆ ಶಿಲ್ಪಾಗೆ ಇದೇ ಮಾದರಿಯ ಬೇಡಿಕೆ ಇಡಲಾಯಿತು. ಅವರು ‘ಕೆಜಿಎಫ್ 2’ನ ಫೇಮಸ್ ಡೈಲಾಗ್ ಹೊಡೆದಿದ್ದಾರೆ.

ರಾಕಿ (ಯಶ್) ಹಾಗೂ ಅಧೀರ (ಸಂಜಯ್ ದತ್) ಮುಖಾಮುಖಿ ಆಗಿರುತ್ತಾರೆ. ಕಳೆದುಕೊಂಡ ಸಾಮ್ರಾಜ್ಯವನ್ನು ರಾಕಿ ಮರಳಿ ಪಡೆದಿರುತ್ತಾನೆ. ಈ ವೇಳೆ ರಾಕಿ ‘ವಾಯ್ಲೆನ್ಸ್ ವಾಯ್ಲೆನ್ಸ್ ವಾಯ್ಲೆನ್ಸ್​.. ಐ ಡೋಂಟ್​ ಲೈಕ್ ಇಟ್. ಬಟ್ ವಾಯ್ಲೆನ್ಸ್ ಲೈಕ್ಸ್ ಮಿ’ ಎಂದು ಡೈಲಾಗ್ ಹೊಡೆಯುತ್ತಾನೆ. ಇದು ಸಖತ್ ವೈರಲ್ ಆಗಿತ್ತು. ಈ ಡೈಲಾಗ್​ಅನ್ನು ಶಿಲ್ಪಾ ಶೆಟ್ಟಿ ಕೂಡ ಹೇಳಿದ್ದಾರೆ.

ಶಿಲ್ಪಾ ಶೆಟ್ಟಿ ಹಾಗೂ ರವೀನಾ ಟಂಡನ್ ನಡುವೆ ಒಳ್ಳೆಯ ಬಾಂಧವ್ಯ ಇದೆ. ರವೀನಾ ಅವರು ‘ಕೆಜಿಎಫ್​ 2’ನಲ್ಲಿ ಮಾಡಿರುವ ರಮಿಕಾ ಸೇನ್ ಪಾತ್ರವನ್ನು ಶಿಲ್ಪಾ ಹೊಗಳಿದ್ದರು. ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದರು.

300 ಕೋಟಿ ರೂಪಾಯಿ ಬಾಚಿದ ‘ಕೆಜಿಎಫ್ 2’:

ಏ.14ರಂದು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಬಿಡುಗಡೆ ಆಯಿತು. ಮೊದಲ ದಿನ ಹಿಂದಿ ವರ್ಷನ್​ನಿಂದ ಈ ಸಿನಿಮಾಗೆ ಕಮಾಯಿ ಆಗಿದ್ದು 53.95 ಕೋಟಿ ರೂಪಾಯಿ. ಅಂದಿನಿಂದ ಏ.24ವರೆಗೆ ಭರ್ಜರಿ ಕಲೆಕ್ಷನ್​ ಆಗಿದೆ. 11ನೇ ದಿನಕ್ಕೆ ಕಾಲಿಟ್ಟರೂ ಕೂಡ ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಹಿಂದಿ ಮಾರುಕಟ್ಟೆಯಲ್ಲಿ ಈ ಚಿತ್ರ ಮಾಡಿದ ಪ್ರತಿದಿನದ ಕಲೆಕ್ಷನ್​ ಲೆಕ್ಕಾಚಾರ ಇಲ್ಲಿದೆ..

ಇದನ್ನೂ ಓದಿ: Shilpa Shetty: ವಿವಾದಗಳ ಬಗ್ಗೆ ಕೊನೆಗೂ ಮೌನ ಮುರಿದ ಜಾಕ್ವೆಲಿನ್; ಸಮಾಧಾನ ಹೇಳಿದ ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಮಗಳ ಜತೆ ಕಾರು ಏರಲು ಮುಂದಾದ ಅಭಿಮಾನಿ; ಫ್ಯಾನ್ ವರ್ತನೆ ನೋಡಿ ನಟಿ ಶಾಕ್

Published On - 6:00 am, Mon, 25 April 22