ಪ್ರೀತಿ ಒಪ್ಪದ್ದಕ್ಕೆ ಗೆಳೆಯರ ಬಿಟ್ಟು ವರುಣ್​ಗೆ ಹೊಡೆಸಿದ್ದ ಶ್ರದ್ಧಾ ಕಪೂರ್

| Updated By: ರಾಜೇಶ್ ದುಗ್ಗುಮನೆ

Updated on: Dec 26, 2024 | 7:00 AM

ವರುಣ್ ಧವನ್ ಮತ್ತು ಶ್ರದ್ಧಾ ಕಪೂರ್ ಬಾಲ್ಯದಿಂದಲೂ ಗೆಳೆಯರು. ಶ್ರದ್ಧಾ ವರುಣ್​ಗೆ ಚಿಕ್ಕ ವಯಸ್ಸಿನಲ್ಲಿ ಪ್ರಪೋಸ್ ಮಾಡಿದ್ದರು. ವರುಣ್ ಇದನ್ನು ನಿರಾಕರಿಸಿದ್ದರು. ಈ ಘಟನೆಯ ಬಗ್ಗೆ ಇಬ್ಬರೂ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವರುಣ್ ಆಗಿನ ತಮ್ಮ ಅರಿವಿಲ್ಲದ ಪ್ರತಿಕ್ರಿಯೆಯನ್ನು ವಿವರಿಸಿದ್ದಾರೆ.

ಪ್ರೀತಿ ಒಪ್ಪದ್ದಕ್ಕೆ ಗೆಳೆಯರ ಬಿಟ್ಟು ವರುಣ್​ಗೆ ಹೊಡೆಸಿದ್ದ ಶ್ರದ್ಧಾ ಕಪೂರ್
ವರುಣ್ ಧವನ್-ಶ್ರದ್ಧಾ ಕಪೂರ್
Follow us on

ವರುಣ್ ಧವನ್ ಹಾಗೂ ಶ್ರದ್ಧಾ ಕಪೂರ್ ಅವರು ಚಿಕ್ಕ ವಯಸ್ಸಿನಿಂದ ಗೆಳೆಯರು. ಅವರು ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಂಡಿದ್ದಾರೆ. ಇವರ ಪಾಲಕರಾದ ಶಕ್ತಿ ಕಪೂರ್ ಹಾಗೂ ಡೇವಿಡ್ ಧವನ್ ನಡುವೆ ಗೆಳೆತನ ಇದೆ ಇದೆ. ಈ ಪರಿಚಯದಿಂದಾಗಿ ಮಕ್ಕಳ ಮಧ್ಯೆಯೂ ಗೆಳೆತ ಮೂಡುವಂತೆ ಆಯಿತು. ಈ ಮೊದಲು ಶ್ರದ್ಧಾ ಕಪೂರ್ ಅವರು ವರುಣ್​ಗೆ ಪ್ರಪೋಸಲ್ ಇಟ್ಟಿದ್ದರು. ಆದರೆ, ಇದನ್ನು ಅವರು ರಿಜೆಕ್ಟ್ ಮಾಡಿದ್ದರು. ಈ ವಿಚಾರದ ಬಗ್ಗೆ ಶ್ರದ್ಧಾ ಮಾತನಾಡಿದ್ದರು. ಈ ವಿಚಾರಕ್ಕೆ ವರುಣ್ ಧವನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಶ್ರದ್ಧಾ ಕಪೂರ್ ಪ್ರಪೋಸ್

ವರುಣ್ ಧವನ್ ಹಾಗೂ ಶ್ರದ್ಧಾ ಕಪೂರ್ ಒಟ್ಟಿಗೆ ಶಿಕ್ಷಣ ಪಡೆದವರು. ಈ ಕಾರಣಕ್ಕೆ ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿತ್ತು. ವರುಣ್ ಧವನ್​ಗೂ ಶ್ರದ್ಧಾ ಕಪೂರ್ ಮೇಲೆ ಕ್ರಶ್ ಇತ್ತು. ಆದರೆ, ಇದನ್ನು ಅವರು ಹೇಳಿಕೊಂಡಿರಲಿಲ್ಲ. ಶ್ರದ್ಧಾ ಕಪೂರ್ ಪ್ರೀತಿ ವಿಚಾರವನ್ನು ಹೇಳಿಕೊಂಡಿದ್ದರು. ‘ವರುಣ್ ಧವನ್ ಅವರು ನನ್ನ ಪ್ರಪೋಸ್​ ರಿಜೆಕ್ಟ್ ಮಾಡಿದ್ದರು. ಚಿಕ್ಕ ವಯಸ್ಸಿನಲ್ಲಿ ನನಗೆ ವರುಣ್ ಮೇಲೆ ಕ್ರಶ್ ಇತ್ತು. ಒಮ್ಮೆ ನಾವು ಒಂದು ಕಡೆ ಪಿಕ್​ನಿಕ್​ಗೆ ತೆರಳಿದ್ದೆವು. ವರುಣ್ ನಾನು ನಿನ್ನ ಬಳಿ ಒಂದು ಮಾತನ್ನು ಹೇಳುತ್ತೇನೆ. ಅದನ್ನು ಉಲ್ಟಾ ಹೇಳುತ್ತೇನೆ. ನೀನು ಅದರ ಅರ್ಥವನ್ನು ಕಂಡು ಹಿಡಿಯಬೇಕು ಎಂದಿದ್ದೆ. ಜೊತೆಗೆ ಯೂ ಲವ್ ಐ ಎಂದಿದ್ದೆ. ನನಗೆ ಇಷ್ಟ ಆಗಲ್ಲ ಎಂದು ಆತ ಓಡಿ ಹೋಗಿದ್ದ’ ಎಂದಿದ್ದರು ಶ್ರದ್ಧಾ ಕಪೂರ್.

ವರುಣ್ ಪ್ರತಿಕ್ರಿಯೆ

ವರುಣ್ ಧವನ್ ಅವರು ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಆ ವಯಸ್ಸಿನಲ್ಲಿ ಪ್ರೀತಿ ಎಂಬುದು ಅರಿವಿಗೆ ಬರುತ್ತಿರಲಿಲ್ಲ ಎಂದು ನೇರವಾಗಿ ಹೇಳಿಕೊಂಡಿದ್ದಾರೆ. ‘ನಮಗೆ ಆಗ ಎಂಟು ವರ್ಷ. ಆ ಸಮಯದಲ್ಲಿ ಹುಡುಗರಿಗೆ ಹುಡುಗಿಯರು ಹೇಗೆ ಇಷ್ಟ ಆಗುತ್ತಾರೆ? ನನ್ನನ್ನು ಅವಳು ಗುಡ್ಡಕ್ಕೆ ಏಕೆ ಕರೆದುಕೊಂಡು ಹೋಗುತ್ತಿದ್ದಾಳೆ ಎಂಬ ಬಗ್ಗೆ ಗೊಂದಲ ಇತ್ತು. ಅಲ್ಲಿ ಏನಾಗಿತ್ತು ಎಂಬುದು ನಮಗೆ ಗೊತ್ತು. ಅದರ ನಂತರ ಏನಾಯಿತು ಎಂಬ ಬಗ್ಗೆ ನಾನು ಹೇಳುತ್ತೇನೆ’ ಎಂದು ವರುಣ್ ಧವನ್ ಹೇಳಿದ್ದಾರೆ.

‘ಶ್ರದ್ಧಾ ಕಪೂರ್ 10ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದಳು. ಅವಳ ಬರ್ತ್​ಡೇಗೆ ನನ್ನ ಕರೆದಳು. ಅವಳು ಫ್ರಾಕ್ ಧರಿಸಿದ್ದಳು. ಅಲ್ಲಿ ಸುತ್ತ ನಾಲ್ಕು ಜನರು ಇದ್ದರು. ಅವರೆಲ್ಲರಿಗೂ ಶ್ರದ್ಧಾ ಮೇಲೆ ಪ್ರೀತಿ ಇತ್ತು.  ನಾವು ಆಟ ಆಡುತ್ತಿದ್ದೆವು. ಆಗ ಮೂವರು ಹುಡುಗರು ನನ್ನ ಸುತ್ತುವರಿದರು. ನಿನಗೆ ಶ್ರದ್ಧಾ ಏಕೆ ಇಷ್ಟ ಇಲ್ಲ ಎಂದು ಪ್ರಶ್ನೆ ಮಾಡಿದರು. ನನಗೆ ಇಷ್ಟ ಇಲ್ಲ ಎಂದೆ. ಅವಳನ್ನು ನೀನು ಇಷ್ಟಪಡಬೇಕು ಎಂದು ನನಗೆ ಹೊಡೆದರು. ಅವಳ ಪ್ರಪೋಸಲ್ ರಿಜೆಕ್ಟ್ ಮಾಡಿಲ್ಲ ಎಂಬ ಕಾರಣಕ್ಕೆ ಅವಳು ನನಗೆ ಹೊಡೆಸಿದ್ದಳು’ ಎಂದಿದ್ದಾರೆ ವರುಣ್ ಧವನ್.

ಇದನ್ನೂ ಓದಿ: ವರುಣ್ ಧವನ್ ಜೊತೆ ಓಡಿ ಹೋಗಲು ಬಂದಿದ್ದ ಪ್ರಭಾವಿ ವ್ಯಕ್ತಿಯ ಪತ್ನಿ

‘ಅವಳು ಟೀನೇಜ್​ಗೆ ಬಂದಾಗ ಸುಂದರವಾಗಿ ಕಾಣಿಸುತ್ತಿದ್ದಳು. ನಮ್ಮಿಬ್ಬರದ್ದೂ ಬೇರೆ ಬೇರೆ ಶಾಲೆ ಆಗಿತ್ತು. ಒಂದು ದಿನ ಅವಳ ಶಾಲೆಗೆ ಹೋದೆ. ಅವಳು ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿದಳು. ಅವಳ ಪ್ರಪೋಸಲ್ ರಿಜೆಕ್ಟ್ ಮಾಡಿದ್ದಕ್ಕೆ ಬೇಸರ ಆಯಿತು. ಆ ಬಳಿಕ ನಾವು ಗೆಳೆಯರಾದೆವು’ ಎಂದಿದ್ದಾರೆ ವರುಣ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.